‘ಭಾರತವನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿ ಅದರ ಒಂದು ಭಾಗವನ್ನು ಕ್ರೈಸ್ತರಿಗೆ ನೀಡಿ !’ – ಆಂಧ್ರಪ್ರದೇಶದಲ್ಲಿ ಪ್ರತ್ಯೇಕತಾವಾದಿ ಪಾದ್ರಿಯ ಬೇಡಿಕೆ

* ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್. ಕಾಂಗ್ರೆಸ್‍ನ ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅಧಿಕಾರದಲ್ಲಿರುವುದರಿಂದ, ಈ ಪ್ರತ್ಯೇಕತಾವಾದಿ ಪಾದ್ರಿಯ ಬೇಡಿಕೆಯು ಕಾರ್ಯರೂಪಕ್ಕೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅತ್ಯಗತ್ಯ !- ಸಂಪಾದಕರು 

* ಭಾರತದಲ್ಲಿ, ಕಾಮಾಂಧ ಅದೇ ರೀತಿ ಹಿಂದೂದ್ವೇಷಿ ಪಾದ್ರಿಗಳು ಇದ್ದಾರೆ. ಈಗ ಪ್ರತ್ಯೇಕತಾವಾದಿ ಪಾದ್ರಿಗಳು ಸಹ ಸೇರಿಕೊಂಡಿದ್ದಾರೆ ! ಇಂತಹ ಬೇಡಿಕೆಯನ್ನಿಡುವ ಪಾದ್ರಿಯ ಬಗ್ಗೆ ತಥಾಕಥಿತ ಜಾತ್ಯತೀತವಾದಿ, ಸರ್ವ ಧರ್ಮ ಸಮಭಾವದವರು ಏನಾದರು ಮಾತನಾಡುವರೇ ? – ಸಂಪಾದಕರು 

* ಈ ಪಾದ್ರಿಯನ್ನು ದೇಶದ್ರೋಹದ ಆರೋಪದಡಿ ಬಂಧಿಸಬೇಕು ಮತ್ತು ಜೀವಾವಧಿ ಶಿಕ್ಷೆ ವಿಧಿಸಬೇಕು ! -ಸಂಪಾದಕರು 

( ಎಡದಲ್ಲಿ) ಬೈಬಲ್ ಓಪನ್ ಯೂನಿವರ್ಸಿಟಿ ಇಂಟರ್‍ನ್ಯಾಷನಲ್’ನ ಉಪ ನಿರ್ದೇಶಕ ಪಾದ್ರಿ ಉಪೇಂದ್ರ ರಾವ್

ಅಮರಾವತಿ (ಆಂಧ್ರಪ್ರದೇಶ) – ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್‍ನ ವತಿಯಿಂದ ನಮ್ಮ ಬೇಡಿಕೆ ಏನೆಂದರೆ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸಿ ಕ್ರೈಸ್ತರಿಗೆ ಅರ್ಧದಷ್ಟು ಭಾಗವನ್ನು ಪ್ರತ್ಯೇಕ ದೇಶವೆಂದು ನೀಡಬೇಕು. ವಿಭಜನೆಯ ನಂತರ ನಾವು ನಿಮಗೆ ತೊಂದರೆ ಕೊಡುವುದಿಲ್ಲ, ಎಂದು ಪ್ರತ್ಯೇಕವಾದಿ ಹೇಳಿಕೆಯನ್ನು ‘ಬೈಬಲ್ ಓಪನ್ ಯೂನಿವರ್ಸಿಟಿ ಇಂಟರ್‍ನ್ಯಾಷನಲ್’ನ ಉಪ ನಿರ್ದೇಶಕ ಪಾದ್ರಿ ಉಪೇಂದ್ರ ರಾವ್ ನೀಡಿದ್ದಾರೆ (‘ಮತಾಂತರಿತ ಕ್ರೈಸ್ತರು ಪೋಪ್‍ಗಿಂತ ಹೆಚ್ಚು ಕಟ್ಟರ್ ಇರುತ್ತಾರೆ’, ಎಂದು ಹೇಳಲಾಗುತ್ತದೆ. ಇದು ಇದಕ್ಕೊಂದು ಉದಾಹರಣೆಯಾಗಿದೆ ! ‘ಮತಾಂತರವೆಂದರೆ ರಾಷ್ಟ್ರಾಂತರ’ ಎಂದು ಸ್ವಾತಂತ್ರ್ಯವೀರ ಸಾವರಕರರು ಹೇಳಿದ್ದರು. ಅದರ ಪ್ರಚಿತಿಯು ಇಲ್ಲಿ ಸಿಗುತ್ತಿದೆ ! – ಸಂಪಾದಕರು) ಈ ಬಗೆಗಿನ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ವಿಶೇಷವೆಂದರೆ ಈ ವಿಡಿಯೊ ‘ಎಸ್.ಸಿ/ಎಸ್.ಟಿ ರೈಟ್ಸ್ ಫೋರಮ್’ವು (‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವೇದಿಕೆ’ಯು) ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. (ಭಾರತದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಹಿಂದೂಗಳನ್ನು ಕ್ರೈಸ್ತ ಮಿಶನರಿಗಳಿಂದ ವಿವಿಧ ಆಮಿಷಗಳನ್ನು ನೀಡಿ ಮತಾಂತರಿಸಲಾಗುತ್ತಿದೆ. ಇದೇ ಸಮಾಜದ ಉನ್ನತಿಯ ಹೆಸರಿನಡಿಯಲ್ಲಿ ‘ಎಸ್.ಸಿ/ಎಸ್.ಟಿ ರೈಟ್ಸ್ ಫೋರಮ್’ನಂತಹ ಸಂಘಟನೆ ಯಾವ ರೀತಿಯ ಕಾರ್ಯ ಮಾಡುತ್ತಾದೆಯೋ, ಈ ಬಗ್ಗೆ ಸರಕಾರಿ ವ್ಯವಸ್ಥೆಯು ನಿಗಾ ಇಡವುದು ಅಗತ್ಯವಿದೆ ! – ಸಂಪಾದಕರು) ಪಾದ್ರಿ ಉಪೇಂದ್ರ ರಾವ್ ತೆಲಂಗಾಣ ಮತ್ತು ಮಹಾರಾಷ್ಟ್ರದ ‘ಅಖಿಲ ಭಾರತೀಯ ಸತ್ಯ ಕ್ರೈಸ್ತ ಪರಿಷತ್ತಿ’ನ ರಾಜ್ಯಾಧ್ಯಕ್ಷರೂ ಆಗಿದ್ದಾರೆ.