ನವದೆಹಲಿ : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಏಕ ಕಾಲದಲ್ಲಿ ಒಂಬತ್ತು ನ್ಯಾಯಾಧೀಶರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನವನ್ನು ನೀಡಿದ್ದಾರೆ. ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣವಚನ ಸಮಾರಂಭವು ನಡೆಯಿತು. ಈ ೯ ನ್ಯಾಯಾಧೀಶ ರಲ್ಲಿ ೩ ಮಹಿಳಾ ನ್ಯಾಯಾಧೀಶರು ಒಳಗೊಂಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಹೆಚ್ಚುವರಿ ಕಟ್ಟಡದ ಸಭಾಗೃಹದಲ್ಲಿ ಪ್ರಮಾಣವಚನದ ಸಮಾರಂಭ ನಡೆಯಿತು. ಶ್ರೀನಿವಾಸ ಓಕಾ, ವಿಕ್ರಮ ನಾಥ, ಜಿತೇಂದ್ರಕುಮಾರ ಮಹೇಶ್ವರಿ, ಹಿಮಾ ಕೊಹ್ಲಿ, ಬಿ.ವಿ. ನಾಗರತ್ನಾ, ಸಿಟಿ ರವಿಕುಮಾರ್, ಎಂ.ಎಂ. ಸುಂದರೇಶ, ಬೇಲಾ ಎಂ. ತ್ರಿವೇದಿ ಮತ್ತು ಪಿ.ಎಸ್. ನರಸಿಂಹ ಈ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ಒಟ್ಟು ನ್ಯಾಯಾಧೀಶರ ಸಂಖ್ಯೆ ಈಗ ೩೩ ರಷ್ಟಿದ್ದರೂ, ಒಂದು ಸ್ಥಾನವು ಇನ್ನೂ ಖಾಲಿ ಇದೆ.
For first time, 9 Supreme Court judges take oath in one gohttps://t.co/FSewtCldsl pic.twitter.com/wdydzI2QSS
— The Times Of India (@timesofindia) August 31, 2021