Exclusive : ಭಾರತವು ಅಫ್ಘಾನಿಸ್ತಾನದ ಯಾವುದೇ ಮುಸಲ್ಮಾನರಿಗೆ ಶರಣಾರ್ಥಿ ಎಂದು ಸ್ವೀಕರಿಸಬಾರದು !

ಲಂಡನ್ ನಲ್ಲಿಯ  ಮಾನವಾಧಿಕಾರ ಕಾರ್ಯಕರ್ತ ಆರೀಫ ಅಜಾಕಿಯಾ ಇವರಿಂದ ಭಾರತಕ್ಕೆ ಸಲಹೆ

ಅಫ್ಘಾನಿಸ್ತಾನದಲ್ಲಿ ಮಾನವೀಯ ಸಂಕಟಗಳ ಮಾಧ್ಯಮದಿಂದ ‘ಸ್ಥಳಾಂತರ ಜಿಹಾದ್ನ ಷಡ್ಯಂತ್ರದ ದಟ್ಟ ಸಾಧ್ಯತೆ !

ಆರೀಫ ಅಜಾಕಿಯಾ

ಫೊಂಡಾ (ಗೋವಾ) (ಶ್ರೀ. ವಿಕ್ರಮ ಡೊಂಗರೆ) – ‘ಭಾರತವು ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ಆಶ್ರಯ ನೀಡಬಾರದು. ಭಾರತವು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಕ್ಖ್‌ರಿಗೆ ಆಶ್ರಯ ನೀಡುತ್ತಿದೆ. ಇದು ಶ್ಲಾಘನೀಯವಾಗಿದೆ. ತುರ್ಕಸ್ಥಾನ, ಇರಾನ್, ಮಲೇಶಿಯಾ, ಪಾಕಿಸ್ತಾನ, ಬಾಂಗ್ಲಾದೇಶಗಳಂತಹ ಮುಸಲ್ಮಾನರ ಹಿತಕ್ಕಾಗಿ ಹೋರಾಡುವ ಅನೇಕ ‘ಗುತ್ತಿಗೆದಾರ’ ರಾಷ್ಟ್ರಗಳಿವೆ. ವಾಸ್ತವದಲ್ಲಿ ಅವರೇ ಅಫ್ಘಾನಿಸ್ತಾನದ ಜನರನ್ನು ಸ್ವೀಕರಿಸಬೇಕು ಎಂದು ಪಾಕಿಸ್ತಾನದ ಅಲ್ಪಸಂಖ್ಯಾತರ ಹಿತಕ್ಕಾಗಿ ಹೋರಾಡುವ ಲಂಡನ್ ನಲ್ಲಿನ ಆರೀಫ ಅಜಾಕಿಯ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದೈನಿಕ ‘ಸನಾತನ ಪ್ರಭಾತ’ಕ್ಕೆ ದೂರವಾಣಿಯ ಮೂಲಕ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿಯಲ್ಲಿ ಹೇಳಿದ್ದಾರೆ.

ಅಜಾಕಿಯರವರು ಮುಂದುವರೆದು, ಸೌದಿ ಅರಬ್‌ನಲ್ಲಿ ಹಜ್ ಯಾತ್ರೆಗಾಗಿ ೧ ಲಕ್ಷ ಡೇರೆಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಡೇರೆಯಲ್ಲಿ ೩೦ ಜನರು ವಾಸಿಸಬಹುದು. ವರ್ಷದ ೧೧ ತಿಂಗಳ ವರೆಗೆ ಈ ಡೇರೆಗಳು ಖಾಲಿ ಇರುತ್ತವೆ. ಆದ್ದರಿಂದ ಸೌದಿ ಅರಬ್ ಅಫ್ಘಾನಿಸ್ತಾನದಲ್ಲಿನ ಲಕ್ಷಾಂತರ ಅಫ್ಘಾನಿಸ್ತಾನಿಗಳಿಗೆ ಸಹಜವಾಗಿ ಆಶ್ರಯ ನೀಡಬಹುದು. ಇರಾಕ್-ಸಿರಿಯಾಗಳಂತೆ ಅಫ್ಘಾನಿಸ್ತಾನದಿಂದ ಸ್ಥಳಾಂತರದ ಮಾಧ್ಯಮದಿಂದ ನಡೆಯುತ್ತಿರುವ ‘ಸ್ಥಳಾಂತರ ಜಿಹಾದ್ನ ಷಡ್ಯಂತ್ರವು ಪ್ರಖರವಾಗಿ ಕಾಣುತ್ತಿದೆ, ಎಂದು ಖಂಡಿತವಾಗಿಯೂ ಹೇಳಬಹುದು.

ಕರಾಚಿಯ ಸಮೀಪದಲ್ಲಿರುವ ಜಮಶೇದ ನಗರದಲ್ಲಿ ಮಹಾಪೌರರಾಗಿ ಕಾರ್ಯ ಮಾಡಿದ್ದ ಅಜಾಕಿಯ ಇವರು ಸದ್ಯದ ಅಂತರಾಷ್ಟ್ರೀಯ ಸ್ಥಿತಿ, ಹಾಗೆಯೇ ಮತಾಂಧರಿಂದ ಜಗತ್ತಿನ ಎದುರು ಉದ್ಭವಿಸಿರುವ ಸವಾಲುಗಳ ಬಗ್ಗೆ ಮಹತ್ವಪೂರ್ಣ ಮಾಹಿತಿ ನೀಡಿದರು. ಅವರು ಹೇಳಿದ ಮಾಹಿತಿಯು ಮುಂದಿನಂತಿದೆ.

೧. ತಾಲಿಬಾನನಿಂದಾಗಿ ಜಗತ್ತಿನೆದುರು ಅತ್ಯಂತ ಭೀಕರ ಸಂಕಟ ಎದುರಾಗಿದೆ. ಅಮೆರಿಕಾದಲ್ಲಿನ ೯/೧೧ ನ ಭಯೋತ್ಪಾದಕ ದಾಳಿ, ಮೆಡ್ರಿಡ್ (ಸ್ಪೇನ್) ನಲ್ಲಿನ ಜಿಹಾದಿ ದಾಳಿ, ಲಂಡನ್ ನಲ್ಲಿನ ಬಾಂಬ್‌ಸ್ಪೋಟ, ಮುಂಬೈಯಲ್ಲಿನ ೨೬/೧೧ರ ದಾಳಿಗಳ ಹಿಂದೆ ಅಲ್- ಕಾಯದ ನ ಕೈವಾಡವಿತ್ತು. ೧೯೯೬ ರಿಂದ ೨೦೦೧ ನೇ ಇಸವಿಯ ಅವಧಿಯಲ್ಲಿ ಅಲ್-ಕೈದಾದ ಪ್ರಭಾವವಿತ್ತು. ಆದರೆ ಈಗ ಅದು ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ. ಆದರೆ ಹೀಗಿರದೇ ಈಗಲೂ ಇಪ್ಪತ್ತು ವರ್ಷಗಳ ಹಿಂದಿನ ಪರಿಸ್ಥಿತಿಯಿದೆ.

೨. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಅಧಿಕಾರವನ್ನು ಸ್ಥಾಪಿಸಿರುವ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಘಟನೆಯಾದ ‘ಐಎಸ್‌ಐ’ ನ ಕೈವಾಡವಿದೆ. ಐಎಸ್‌ಐ ಅಫ್ಘಾನಿಸ್ತಾನದಲ್ಲಿ ರಾಜಕೀಯ ನೇತಾರರಿಗೆ ಹಣ ನೀಡಿ ಅವರಿಂದ ತಮಗೆ ಬೇಕಾದ ಹಾಗೆ ಬಳಸಿಕೊಂಡಿತು. ಭಾರತವು ಎಚ್ಚರದಿಂದಿರುವುದು ಆವಶ್ಯಕವಾಗಿದೆ. ಏಕೆಂದರೆ ಅಫ್ಘಾನಿಸ್ತಾನದ ಬಳಿಯಿರುವ ಅರ್ಧಕ್ಕಿಂತಲೂ ಹೆಚ್ಚಿನ ಶಸ್ತ್ರಾಸ್ತ್ರಗಳು ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕರವರೆಗೆ ತಲುಪಿದೆ.

೩. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯು ಅತ್ಯಂತ ದಯನೀಯವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅವರ ವಂಶ ನಾಶ ಮಾಡಲಾಗಿದೆ’ ಎಂದು ಹೇಳಿದರು.

೪. ‘ಭಾರತವು ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಲು ಏನು ಮಾಡಬೇಕು ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಅಜಾಕಿಯ ಇವರು ‘ಭಾರತವು ಜವಾಬ್ದಾರಿಯುತವಾಗಿ ನಡೆಯುವ ಪ್ರಜಾಪ್ರಭುತ್ವದ ರಾಷ್ಟ್ರವಾಗಿದೆ. ಭಾರತವು ‘ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಘೋಷಿಸಿ’ ಎಂದು ನೇರವಾಗಿ ಯಾವಾಗಲೂ ಹೇಳುವುದಿಲ್ಲ. ಭಾರತದಿಂದ ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧ ಹೇರಲು ಪ್ರಯತ್ನಗಳಾಗುತ್ತಿವೆ’ ಎಂದು ಹೇಳಿದರು.

೫. ನಾನು ಸೌದಿ ಅರಬ್ ನಲ್ಲಿ ಅನೇಕ ವರ್ಷಗಳವರೆಗೆ ವಾಸಿಸಿದ್ದೇನೆ. ಅಲ್ಲಿ ಒಂದೇ ಒಂದು ಮದರಸಾ ಇಲ್ಲ, ಪ್ರಾರ್ಥನೆಗಾಗಿ ಕೇವಲ ಮಸೀದಿಗಳಿವೆ. ಮುಸಲ್ಮಾನ ಮಕ್ಕಳನ್ನು ಬೆಳೆಸುವಲ್ಲಿ ದೊಡ್ಡ ತಪ್ಪುಗಳಾಗುತ್ತಿರುವುದರಿಂದ ಮದರಸಾಗಳನ್ನು ಮುಚ್ಚಬೇಕಿದೆ. ಮದರಸಾಗಳ ಬದಲು ಮಕ್ಕಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡಲು ಶಾಲೆ-ಮಹಾವಿದ್ಯಾಲಯಗಳಿಗೆ ಹೋಗಲು ಪ್ರೋತ್ಸಾಹಿಸಬೇಕು. ಇಂದು ಭಾರತದಲ್ಲಿ ಶೇಕಡಾ ೮೫ ರಷ್ಟು ಬಹುಸಂಖ್ಯಾತರ ವಿರುದ್ಧ ಮದರಸಾಗಳಿಂದ ವಿಷಕಾರಲಾಗುತ್ತಿದೆ. ‘ಕಾಫಿರರನ್ನು ನಾಶ ಮಾಡಿ’ ಎಂಬ ಎಚ್ಚರಿಕೆಯನ್ನು ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.