ಎರಡೂ ಡೋಸಿನ ಲಸೀಕರಣವಾಗಿದ್ದರೂ ಕೂಡ ಡಿಸೆಂಬರ್ 2022 ವರೆಗೂ ಮಾಸ್ಕ್ ಧರಿಸುವುದು ಅವಶ್ಯಕ ! ವೈದ್ಯಕೀಯ ತಜ್ಞರ ಅಭಿಪ್ರಾಯ

ನವ ದೆಹಲಿ – ಕೊರೊನಾ ಪ್ರತಿಬಂಧಕ ಲಸೀಕರಣದ ಎರಡೂ ಪರಿಮಾಣ (ಡೋಸ್) ತೆಗೆದುಕೊಂಡಿದ್ದರೂ ಕೂಡ ಡಿಸೆಂಬರ್ 2022 ರವರೆಗೂ ಮಾಸ್ಕ ಧರಿಸುವುದು ಅನಿವಾರ್ಯ, ಎಂದು ವೈದ್ಯಕೀಯ ತಜ್ಞರು ನುಡಿದಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳ ತಜ್ಞರಾದ ಡಾ. ವಿಶ್ವಾಸ ಮೋಂಡೆಯವರು ಹೀಗೆ ಹೇಳಿದ್ದಾರೆ, ಶೇಕಡಾ 70 ರಷ್ಟು ಜನಸಂಖ್ಯೆಯ ಲಸೀಕರಣವಾಗಬೇಕು. ಈಗ ಲಸೀಕರಣದ ವೇಗವನ್ನು ನೋಡಿದರೆ ಈ ಉದ್ದೇಶವನ್ನು ಸಾಧಿಸುವುದು ಕಷ್ಟವೆನಿಸುತ್ತದೆ. ಆದ್ದರಿಂದ ಈ ಪ್ರಕ್ರಿಯೆಯು ಆದಷ್ಟು ವೇಗವಾಗಿ ಆಗಬೇಕಾಗಿದೆ. ಲಸೀಕರಣ ಪಡೆದುಕೊಂಡ ಬಳಿಕ ಪ್ರತಿಯೊಬ್ಬರ ಶರೀರದಲ್ಲಿ ಪ್ರತೀಕಾಯಗಳು (ಆಂಟಿಬಾಡೀಜ್) ಎಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತದೆ ಎಂಬುದನ್ನು ವೈದ್ಯಕೀಯ ತಪಾಸಣೆ ಮಾಡದೇ ಹೇಳಲಾಗುವುದಿಲ್ಲ. ಆ ರೀತಿ ಜನಸಂಖ್ಯೆಯ ಅಭ್ಯಾಸವನ್ನು ದೊಡ್ಡ ರೀತಿಯಲ್ಲಿ ಮಾಡಲಾಗುತ್ತಿಲ್ಲ. ಕೊರೊನಾವನ್ನು ನಿರ್ಬಂಧಿಸಲು ಡಾಕ್ಟರ್ ಗಳ ಮೇಲೆ ಪ್ರಾಧಾನ್ಯತೆಯಿಂದ ಲಸೀಕರಣ ಮಾಡಲಾಗಿದ್ದರೂ, ಅವರು ಸಹ ಮಾಸ್ಕ್‍ನ್ನು ಸತತವಾಗಿ ಬಳಸಬೇಕಾಗಿದೆ.

ಸಾಂಕ್ರಾಮಿಕ ಕಾಯಿಲೆಗಳ ತಜ್ಞ ಡಾ. ಆರ್.ಎಮ್. ನಾಯರರವರು ಹೀಗೆಂದಿದ್ದಾರೆ, ಕೊರೊನಾವಾದ ಬಳಿಕ ಶಾರೀರಿಕ, ಮಾನಸಿಕ ಹಾಗೂ ಅನ್ಯ ಬೇರೆ ಬೇರೆ ಮಟ್ಟದ ತೊಂದರೆಗಳನ್ನು ಸಹಿಸಿಕೊಳ್ಳುವುದಕ್ಕಿಂತ ಲಸಿಕೀಕರಣದಿಂದ ಪ್ರತಿಕಾರಶಕ್ತಿ ನಿರ್ಮಾಣವಾಗುವುದು ಯಾವತ್ತಿಗೂ ಹೆಚ್ಚು ಆರೋಗ್ಯದಾಯಕವಾಗಿದೆ. ಲಸೀಕರಣದ ಬಳಿಕ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಕೊರೊನಾ ಆದ ಬಳಿಕ ಆಗುವಂತಹ ಇತರ ಬೇರೆ ಸಮಸ್ಯೆಗಳು ಸಹ ದೂರವಾಗುತ್ತವೆ. ಲಸಿಕೀಕರಣದ ಬಳಿಕವೂ ಸೌಮ್ಯ ಸ್ವರೂಪದ ತೊಂದರೆಗಳಾಗಿರುವ ವ್ಯಕ್ತಿಗಳ ಸೋಂಕಿನ ತೊಂದರೆಯು ಲಸಿಕೆ ತೆಗೆದುಕೊಳ್ಳದೆ ಇರುವ ಜನರ ಮೇಲೆ ಗಂಭೀರ ಸ್ವರೂಪದ್ದಾಗುವ ಸಾಧ್ಯತೆಯಿದೆ.