‘ಪ್ರಳಯ ಬಂದರೂ, ಬೋಂಗಾ ತೆಗೆಯುವುದಿಲ್ಲ !’ (ಅಂತೆ) – ಮಾಲೆಗಾವನಲ್ಲಿನ ಮೌಲ್ವಿಗಳ ಪ್ರತಿಕ್ರಿಯೆ

ಮೇ ೩ ರಂದು ಪ್ರಳಯ ಬಂದರೂ ಬೋಂಗಾಗಳನ್ನು ತೆಗೆಯುವುದಿಲ್ಲ. ಇದು ಗಲಭೆ ಎಬ್ಬಿಸುವ ಸಂಚಾಗಿದೆ. ಇಲ್ಲಿ ಸರ್ವಾಧಿಕಾರ ನಡೆಯುವುದಿಲ್ಲ. ರಾಜ್ಯವು ಕಾನೂನಿನಿಂದ ನಡೆಯುತ್ತದೆ. ಇವರು (ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ) ಭಾಜಪದಂತೆ ವರ್ತಿಸುತ್ತಿದೆ.

ಮುಜಫ್ಫರ್‌ನಗರದಲ್ಲಿ (ಉತ್ತರಪ್ರದೇಶ) ಯಾಕೂಬ್ ದುರ್ಗಾ ದೇವಿಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಒಡೆದನು !

ಉತ್ತರಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಯಾಕೂಬ್ ಎಂಬ ಮತಾಂಧನೊಬ್ಬ ದುರ್ಗಾ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಯಾಕೂಬ್ ಇತ್ತೀಚೆಗೆ ಪಾಕಿಸ್ತಾನದಿಂದ ಹಿಂತಿರುಗಿದ್ದ. ಆರೋಪಿ ಯಾಕೂಬ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಭಾರತ-ನೇಪಾಳ ಗಡಿಯ ಬಳಿ ಮದರಸಾ ಮತ್ತು ಮಸೀದಿಗಳ ಸಂಖ್ಯೆಯಲ್ಲಿ ಹೆಚ್ಚಳ !

ಕೇವಲ ಅಂಕಿಅಂಶವನ್ನು ಸಂಗ್ರಹಿಸಿ ಪ್ರಯೋಜನವಿಲ್ಲ, ಇಲ್ಲಿನ ಅನಧೀಕೃತ ಮಸೀದಿ ಮತ್ತು ಮದರಸಾಗಳ ಮೇಲೆ ತಕ್ಷಣ ಕಾರ್ಯಾಚರಣೆಯನ್ನು ಮಾಡಬೇಕು ! ‘ಇಂತಹ ಕಾನೂನುಬಾಹಿರ ನಿರ್ಮಾಣವಾಗುವ ವರೆಗೆ ಆಡಳಿತ ಹಾಗೂ ಗುಪ್ತಚರ ಇಲಾಖೆಯು ಏನು ಮಾಡುತ್ತಿತ್ತು ?’, ಇದರ ಬಗ್ಗೆಯೂ ಗಮನ ನೀಡುವುದು ಆವಶ್ಯಕವಾಗಿದೆ !

ಎಂ.ಐ.ಎಂ.ನ ಶಾಸಕ ಅಕ್ಬರುದ್ದೀನ್ ಓವೈಸಿ ನಿರ್ದೋಷಿಯಾಗಿ ಖುಲಾಸೆ

ಇಲ್ಲಿನ ವಿಶೇಷ ಸೆಷನ್ಸ್ ನ್ಯಾಯಾಲಯವು ಎಂ.ಐ.ಎಂ.ನ ಶಾಸಕ ಮತ್ತು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಇವರನ್ನು ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಧಾರ್ಮಿಕ ದ್ವೇಷ ಹರಡಿದ ಆರೋಪದಡಿ ಪ್ರಕರಣ ದಾಖಲು

ಧಾರ್ಮಿಕ ವೈಷಮ್ಯ ಹರಡಿದ ಆರೋಪದಡಿ ಕಾಂಗ್ರೆಸ್ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಖರಗೋನ್ ಮತ್ತು ಬರವಾನಿ ಜಿಲ್ಲೆಗಳಲ್ಲಿ ರಾಮನವಮಿ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ನಡೆದಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಯೇ ನನ್ನ ಎಕೈಕ ಲಕ್ಷ್ಯ ! – ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ

ನಾನು ಸಾವಿಗೆ ಹೆದರುವುದಿಲ್ಲ. ನನ್ನ ಏಕೈಕ ಲಕ್ಷ್ಯವೆಂದರೆ ‘ಹಿಂದೂ ರಾಷ್ಟ್ರ’ ಎಂದು ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾ ಸಿಂಹರವರು ಶ್ರೀರಾಮನವಮಿಯ ದಿನ ಪ್ರತಿಪಾದಿಸಿದ್ದಾರೆ.

ಜೋಡಾ (ಓಡಿಶಾ)ದಲ್ಲಿ ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣ

ಓಡಿಶಾ ರಾಜ್ಯದಲ್ಲಿನ ಕ್ಯೋಂಝರ ಜಿಲ್ಲೆಯಲ್ಲಿರುವ ಜೋಡಾ ನಗರದಲ್ಲಿ ಶ್ರೀರಾಮನವಮಿಯ ದಿನದಂದು ನಡೆಸಲಾದ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣವಾಯಿತು. ಅನಂತರ ಅಲ್ಲಿ ಗುಂಪು ಸೇರುವುದರ ಮೇಲೆ ನಿರ್ಬಂಧ ಹೇರಲಾಯಿತು.

ದೇಶದಲ್ಲಿನ ೮ ನಗರಗಳಲ್ಲಿ ೨೦೦೫ರಿಂದ ೨೦೧೮ರ ಸಮಯದಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರ ಮೃತ್ಯು !

ಒಂದು ಅಂತರಾಷ್ಟ್ರೀಯ ಅಧ್ಯಯನದ ಅನುಸಾರ ಭಾರತದಲ್ಲಿ ೨೦೦೫ ರಿಂದ ೨೦೧೮ರ ವರೆಗೆ ೮ ನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರು ಅಕಾಲಿಕ ಮರಣವಾಗಿದೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಮತ್ತು ಯುರೋಪಿನ ಬಾಹ್ಯಾಕಾಶ ವ್ಯವಸ್ಥೆಯಿಂದ ದೊರೆತ ಮಾಹಿತಿಯಿಂದಾಗಿ ಈ ಅಧ್ಯಯನವನ್ನು ಮಾಡಲಾಗಿದೆ.

ಗೋರಖನಾಥ ದೇವಸ್ಥಾನದ ಮೇಲೆ ದಾಳಿ ಮಾಡಿದ ಮುರ್ತಜಾನಿಗೆ ವಿದೇಶಿ ಮುಸ್ಲಿಂ ಸಂಸ್ಥೆಯೊಂದಿಗೆ ಸಂಬಂಧ !

ಗೋರಖಪೂರ ಗೋರಖನಾಥ ದೇವಸ್ಥಾನದ ಮೇಲೆ ದಾಳಿ ಮಾಡಿದ ಮುರ್ತಜಾನನನ್ನು ಬಿಗಿಯಾಗಿ ವಿಚಾರಣೆ ನಡೆಸಲಾಗುತ್ತಿದೆ. ಆತ ಇಸ್ಲಾಮಿಕ್ ಸ್ಟೇಟ್, ಹಾಗೆಯೇ ವಿದೇಶದ ಅನೇಕ ಮುಸ್ಲಿಂ ಸಂಸ್ಥೆಗಳ ಸಂಪರ್ಕದಲ್ಲಿದ್ದನು, ಎನ್ನುವ ಮಾಹಿತಿ ಬಹಿರಂಗವಾಗಿದೆ.

‘ಹಿಂದೂಗಳ ಧರ್ಮಗುರುಗಳು ಅವರನ್ನು ಮುಸಲ್ಮಾನರ ನರಸಂಹಾರದ ಕುರಿತು ಪ್ರಚೋಧಿಸಿದರು !’(ಅಂತೆ) – ಎಮ್.ಐ.ಎಮ್.ನ ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿ

ಇದಕ್ಕೆ ಹೇಳುತ್ತಾರೆ ಕಳ್ಳಗೊಂದು ಪಿಳ್ಳೆ ನೆವ ! ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಾಹುಳ್ಯವಿರುವ ಪ್ರದೇಶದಿಂದ ಆಕ್ರಮಣ ನಡೆಸಿರುವಾಗ ಹಿಂದೂಗಳನ್ನೇ ಅಪರಾಧಿಗಳೆಂದು ಇರ್ಧರಿಸುವ ಓವೈಸಿಯವರ ಪ್ರಯತ್ನಗಳ ಮೇಲೆ ಯಾರೂ ವಿಶ್ವಾಸ ಇಡಲಾರರು, ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !