
ಪುಣೆ – ಮಹಾನಗರ ಪಾಲಿಕೆಯು ಪ್ರತಿದಿನ ಪವನಾ ಜಲಾಶಯದಿಂದ ೫೫೦ ಮಿಲಿಯನ್, ಎಂ.ಐ.ಡಿ.ಸಿ.ಯಿಂದ ೩೦ ಮಿಲಿಯನ್, ಆಂಧ್ರಾ ನೀರಾವರಿ ಯೋಜನೆಯಿಂದ ೧೦೦ ಮಿಲಿಯನ್, ಹೀಗೆ ಒಟ್ಟು ೬೮೦ ಮಿಲಿಯನ್ ಲೀಟರ್ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಸುತ್ತದೆ. ನಗರದ ನಿವಾಸಿಗಳಿಂದ ಒಟ್ಟು ೧ ಸಾವಿರ ಮಿಲಿಯನ್ ಲೀಟರ್ ನೀರು ಬಳಕೆಯಾಗುತ್ತದೆ ಮತ್ತು ಅದರಿಂದ ಅಷ್ಟೇ ಪ್ರಮಾಣದ ಕೊಳಚೆ ನೀರು (ತ್ಯಾಜ್ಯ ನೀರು) ಉತ್ಪತ್ತಿಯಾಗುತ್ತದೆ. ಈ ರೀತಿ ಉತ್ಪತ್ತಿಯಾಗುವ ಒಟ್ಟು ಕೊಳಚೆ ನೀರಿನಲ್ಲಿ ಮಹಾನಗರ ಪಾಲಿಕೆಯ ೪೨೩ ಮೈಲಿ ಕೊಳಚೆ ನೀರು ಶುದ್ಧೀಕರಣ ಕೇಂದ್ರಗಳಲ್ಲಿ ಕೇವಲ ೪೦೦ ಮಿಲಿಯನ್ ಲೀಟರ್ ನೀರನ್ನು ಮಾತ್ರ ಶುದ್ಧೀಕರಿಸಲಾಗುತ್ತದೆ. ಇನ್ನುಳಿದ ೬೦೦ ಮಿಲಿಯನ್ ಲೀಟರ್ ನೀರನ್ನು ಮಹಾನಗರ ಪಾಲಿಕೆಯು ಯಾವುದೇ ಶುದ್ಧೀಕರಣ ಪ್ರಕ್ರಿಯೆ ಇಲ್ಲದೆ ನೇರವಾಗಿ ನದಿಗೆ ಹರಿಸುತ್ತಿದೆ. ಇದರಿಂದಾಗಿ ನಗರದ ಮುಳಾ, ಪವನಾ ಮತ್ತು ಇಂದ್ರಾಯಣಿ ನದಿಗಳು ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿವೆ.
ನದಿಯಲ್ಲಿ ಜಲಪಾಚಿ ಬೆಳೆಯಲು ಇದೂ ಒಂದು ಕಾರಣವಾಗಿದೆ. ಮಾಲಿನ್ಯದಿಂದಾಗಿ ನದಿಯಲ್ಲಿ ತೀವ್ರ ದುರ್ವಾಸನೆ ಬರುತ್ತಿದೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ ಮತ್ತು ಕೆಲವು ಕಡೆಗಳಲ್ಲಿ ನೀರಿನ ಮೇಲೆ ಬಿಳಿ ನೊರೆ ಸೃಷ್ಟಿಯಾಗುತ್ತಿದೆ. ನದಿಯಲ್ಲಿನ ಮೀನುಗಳು ಸಾಯುತ್ತಿವೆ. ಇದಕ್ಕೆ ಪರಿಹಾರವಾಗಿ, ನಗರದ ಬೆಳೆಯುತ್ತಿರುವ ಜನಸಂಖ್ಯೆಗಾಗಿ ೪೩೫ ಮಿಲಿಯನ್ ಲೀಟರ್ ಸಾಮರ್ಥ್ಯದ ೧೨ ಮೈಲಿ ಕೊಳಚೆ ನೀರು ಶುದ್ಧೀಕರಣ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿದೆ ಎಂದು ಮಹಾನಗರ ಪಾಲಿಕೆಯ ಮುಖ್ಯ ಇಂಜಿನಿಯರ್ ಸಂಜಯ ಕುಲಕರ್ಣಿ ತಿಳಿಸಿದ್ದಾರೆ.
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ
ಅಕೋಲಾ: ಗೋರಕ್ಷಕರೊಂದಿಗೆ ವಾದಕ್ಕಿಳಿದ ಮುಸಲ್ಮಾನರು; ಮುಸಲ್ಮಾನನನ್ನು ಬಿಟ್ಟಿದ್ದಾರೆಂದು ಆರೋಪಿಸಿದ ಭಾಜಪ!