ಜೋಡಾ (ಓಡಿಶಾ)ದಲ್ಲಿ ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣ

ಇಂತಹ ಘಟನೆಗಳನ್ನು ತಡೆಯಲು ಹಿಂದೂಗಳು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡದೇ ಪರ್ಯಾಯವಿಲ್ಲ !

ಭುವನೇಶ್ವರ (ಓಡಿಶಾ) – ಓಡಿಶಾ ರಾಜ್ಯದಲ್ಲಿನ ಕ್ಯೋಂಝರ ಜಿಲ್ಲೆಯಲ್ಲಿರುವ ಜೋಡಾ ನಗರದಲ್ಲಿ ಶ್ರೀರಾಮನವಮಿಯ ದಿನದಂದು ನಡೆಸಲಾದ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣವಾಯಿತು. ಅನಂತರ ಅಲ್ಲಿ ಗುಂಪು ಸೇರುವುದರ ಮೇಲೆ ನಿರ್ಬಂಧ ಹೇರಲಾಯಿತು.

ಪ್ರತಿವರ್ಷದಂತೆಯೇ ಈ ವರ್ಷವೂ ಹಿಂದೂಗಳು ಮೆರವಣಿಯನ್ನು ನಡೆಸುವ ಇಚ್ಚೆಯಿಂದ ಇದ್ದರು; ಆದರೆ ಪೊಲೀಸರು ಇದಕ್ಕೆ ಅನುಮತಿ ನೀಡಲು ನಿರಾಕರಿಸಿದರು. ಅವರು ಕೇವಲ ೫ ಸದಸ್ಯರಿಗೆ ಮೆರವಣಿಗೆ ನಡೆಸಲು ಅನುಮತಿ ನೀಡಿದರು. ಅನಂತರ ಹಿಂದೂಗಳು ಭಗವಾ ಧ್ವಜಗಳನ್ನು ಹಿಡಿದು ವಿಭಾಗ ಕ್ರಮಾಂಕ ೫ರಲ್ಲಿರುವ ಶಿವನ ದೇವಸ್ಥಾನದ ಬಳಿ ಬಂದಾಗ ಮತಾಂಧರು ಅವರ ಮಾರ್ಗವನ್ನು ತಡೆದರು. ಅವರು ಹಿಂದೂಗಳೊಂದಿಗೆ ವಾದ ಮಾಡಲು ಆರಂಭಿಸಿದರು. ಅವರು ಹಿಂದೂಗಳ ಮೇಲೆ ಆಕ್ರಮಣ ಮಾಡಿದರು. ಅನಂತರ ಗಾಜಿನ ಬಾಟಲಿಗಳನ್ನು ಎಸೆದರು ಇದರಲ್ಲಿ ಅನೇಕರು ಗಾಯಗೊಂಡರು. ಘಟನಾಸ್ಥಳವನ್ನು ತಲುಪಿದ ಪೊಲೀಸರ ಮೇಲೆ ಮತಾಂಧರು ಕಲ್ಲುತೂರಾಟ ಮಾಡಿದರು. ನಂತರ ಅಂಗಡಿಗಳನ್ನು ಧ್ವಂಸಗೊಳಿಸಿದರು. ಕೆಲವು ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. ೪ ಗಂಟೆಯ ಹಿಂಸಾಚಾರದ ನಂತರ ಈ ಸ್ಥಿತಿಯು ನಿಯಂತ್ರಣಕ್ಕೆ ಬಂದಿತು.