'ಎಫ್.ಸಿ.ಆರ್.ಎ.' (FCRA) ನ ಕಠಿಣ ನಿರ್ಬಂಧಗಳಿಂದ ಅಮೆರಿಕದ ರಿಪಬ್ಲಿಕನ್ ಮತ್ತು ಡೆಮೋಕ್ರಟಿಕ್ ಎರಡೂ ಪಕ್ಷಗಳ ರಾಜಕಾರಣಿಗಳಿಗೆ ಅಜೀರ್ಣ!

ನ್ಯೂಯಾರ್ಕ್ (ಅಮೆರಿಕ) – ಭಾರತ ಸರಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (‘ಎಫ್.ಸಿ.ಆರ್.ಎ.’ – ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್) ನಿಯಮಗಳಲ್ಲಿ ಬದಲಾವಣೆ ಮಾಡಿರುವುದರಿಂದ ಮತಾಂತರ ಮಾಡುವ ವಿದೇಶಿ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಮೆರಿಕದ ರಾಜಕಾರಣಿಗಳು ಬೆದರಿದ್ದಾರೆ. ಕೇವಲ ಡೆಮೋಕ್ರ್ಯಾಟ್ಸ್‌ಗಳಲ್ಲದೆ, ಆಡಳಿತರೂಢ ರಿಪಬ್ಲಿಕನ್‌ಗಳೂ ಇದರ ವಿರುದ್ಧ ವಿಷಕಾರುತ್ತಿದ್ದಾರೆ. ಎರಡೂ ಪಕ್ಷಗಳ ಸಂಸದರ ಹೇಳಿಕೆಯ ಪ್ರಕಾರ, ಭಾರತದ ‘ಎಫ್.ಸಿ.ಆರ್.ಎ.’ ನಿಯಮಗಳಲ್ಲಿ ಮಾಡಲಾಗುತ್ತಿರುವ ಹೊಸ ಸುಧಾರಣೆಗಳಿಂದ ಭಾರತೀಯ ಸಮಾಜ ಮತ್ತು ಎನ್‌ಜಿಒಗಳ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. “ಇದು ಅತ್ಯಂತ ಆತಂಕಕಾರಿ. ಕ್ರೈಸ್ತ ಮತ್ತು ಇತರ ಧಾರ್ಮಿಕ ಗುಂಪುಗಳ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಮಾನವಾಧಿಕಾರ ಉಲ್ಲಂಘಿಸುವ ದೇಶಗಳ ಮೇಲೆ ಟೀಕಿಸಲು ಅಮೆರಿಕ ಹಿಂಜರಿಯುವುದಿಲ್ಲ” ಎಂದು ಅಮೆರಿಕ ಸೆನೆಟ್‌ನ ‘ಫಾರಿನ್ ರಿಲೇಶನ್ಸ್ ಕಮಿಟಿ’ ಮುಖ್ಯಸ್ಥ ಮತ್ತು ರಿಪಬ್ಲಿಕನ್ ಪಕ್ಷದ ಸಂಸದ ಜೇಮ್ಸ್ ರಿಶ್ ಹೇಳಿದ್ದಾರೆ.
ರಿಶ್ ಮಾತು ಮುಂದುವರೆಸುತ್ತಾ, “ಭಾರತದ ‘ಎಫ್.ಸಿ.ಆರ್.ಎ.’ ಕಾನೂನು ವಿದೇಶಿ ಆರ್ಥಿಕ ಸಹಾಯ ಪಡೆಯುವ ಗುಂಪುಗಳ ಮೇಲೆ ವಿಪರೀತ ಮತ್ತು ಅಸ್ಪಷ್ಟ ನಿರ್ಬಂಧಗಳನ್ನು ಹೇರುತ್ತದೆ. ಇದರಿಂದ ಸಂಸ್ಥೆಗಳ ದಿನನಿತ್ಯದ ಕೆಲಸ ನಿರ್ವಹಿಸುವುದು ಅಸಾಧ್ಯವಾಗುತ್ತದೆ. ಇದನ್ನು ಅಮೆರಿಕದ ಜೊತೆ ಸಂಬಂಧ ಹೊಂದಿರುವ ಕ್ರೈಸ್ತ ಸಂಸ್ಥೆಗಳ ವಿರುದ್ಧ ಕಿರುಕುಳ ಹೆಚ್ಚಿಸಲು ಅಥವಾ ಅವರ ಆಸ್ತಿ ಮತ್ತು ನಿಧಿ ಜಪ್ತಿ ಮಾಡಲು ಬಳಸಿದರೆ, ಅದು ಅತ್ಯಂತ ಆತಂಕಕಾರಿಯಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕನ್ ನಾಗರಿಕರ ಸುರಕ್ಷತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ತಮ್ಮ ಸರಕಾರದ ಆದ್ಯತೆ ನೀಡಿದ್ದಾರೆ” ಎಂದರು. (ಹಾಗಿದ್ದರೆ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಏನು ? – ಸಂಪಾದಕರು)
ಹೆಸರು ಬಹಿರಂಗಪಡಿಸದ ಷರತ್ತಿನ ಮೇಲೆ ವಿರೋಧ ಪಕ್ಷದ ಡೆಮೋಕ್ರಟಿಕ್ ಪಕ್ಷದ ಒಬ್ಬ ಸಂಸದರು ಹೇಳಿದ್ದೇನೆಂದರೆ, “‘ಎಫ್.ಸಿ.ಆರ್.ಎ.’ ನಿಯಮಗಳಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಂದೆ ಗಂಭೀರ ಪ್ರಶ್ನೆಗಳು ನಿರ್ಮಾಣವಾಗಲಿವೆ. ಒಂದು ಸಶಕ್ತ ನಾಗರಿಕ ಸಮಾಜವೇ ಭಾರತ-ಅಮೆರಿಕ ಸಂಬಂಧದ ನಿಜವಾದ ಅಡಿಪಾಯ.”
ಭಾರತದ ತೀಕ್ಷ್ಣ ನಿಲುವು!
ಈ ಬಗ್ಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳೂ ಅತ್ಯಂತ ಕಠಿಣ ಮತ್ತು ಸ್ಪಷ್ಟ ಉತ್ತರ ನೀಡಿದ್ದಾರೆ. ಭಾರತೀಯ ಪಕ್ಷವು ಸ್ಪಷ್ಟಪಡಿಸಿದ್ದೇನೆಂದರೆ, ಪ್ರಸ್ತಾಪಿತ ಸುಧಾರಣೆಗಳಿಂದ ದೇಶದಲ್ಲಿ ಕಾನೂನುಬದ್ಧ ಮತ್ತು ನ್ಯಾಯಯುತ ಮಾರ್ಗಗಳಿಂದ ಕೆಲಸ ಮಾಡುವ ಯಾವುದೇ ಸಂಸ್ಥೆಗೆ ಹೆದರುವ ಅವಶ್ಯಕತೆ ಇಲ್ಲ. ಅವರ ಮೇಲೆ ಇದರ ಯಾವುದೇ ಅನಗತ್ಯ ಪರಿಣಾಮ ಬೀರುವುದಿಲ್ಲ. ಈ ಕಾನೂನು ಕೇವಲ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿದೇಶಿ ಹಣದ ದುರ್ಬಳಕೆಯನ್ನು ತಡೆಯಲು ಮಾತ್ರವಾಗಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman