ಭಾಗ್ಯನಗರ (ತೆಲಂಗಾಣ)ದಲ್ಲಿ ಶ್ರೀರಾಮನವಮಿಯ ಭವ್ಯ ಮರೆವಣಿಗೆಯ ಆಯೋಜನೆ
ಭಾಗ್ಯನಗರ (ತೆಲಂಗಾಣ) – ನಾನು ಸಾವಿಗೆ ಹೆದರುವುದಿಲ್ಲ. ನನ್ನ ಏಕೈಕ ಲಕ್ಷ್ಯವೆಂದರೆ ‘ಹಿಂದೂ ರಾಷ್ಟ್ರ’ ಎಂದು ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾ ಸಿಂಹರವರು ಶ್ರೀರಾಮನವಮಿಯ ದಿನ ಪ್ರತಿಪಾದಿಸಿದ್ದಾರೆ. ಆಕಾಶಪುರಿಯಲ್ಲಿನ ಹನುಮಾನ ದೇವಸ್ಥಾನದಿಂದ ಭವ್ಯ ಮೆರವಣಿಗೆಯನ್ನು ನಡೆಸಲಾಗಿತ್ತು. ಇದರಲ್ಲಿ ಹಿಂದೂಗಳು ಅಪಾರ ಸಂಖ್ಯೆಯಲ್ಲಿ ಸಹಭಾಗಿಯಾಗಿದ್ದರು. ಸುಲತಾನ ಬಾಜಾರಿನಲ್ಲಿರುವ ಹನುಮಾನ ವ್ಯಾಯಾಮಶಾಲೆಯಲ್ಲಿ ಈ ಮೆರವಣಿಗೆಯು ಮುಕ್ತಾಯವಾಗಿ ಅಲ್ಲಿ ಅದು ಧರ್ಮಸಭೆಯಲ್ಲಿ ರೂಪಾಂತರವಾಯಿತು. ಈ ಸಮಯದಲ್ಲಿ ವ್ಯಾಸಪೀಠದಲ್ಲಿ ಶಾಸಕ ಟಿ. ರಾಜಾ ಸಿಂಹರವರೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯ ಸಮನ್ವಯಕರಾದ ಶ್ರೀ. ಚೇತನ ಗಾಡಿಯವರು ಮತ್ತು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರೂ ಉಪಸ್ಥಿತರಿದ್ದರು.
BJP MLA Raja Singh, who sang “Bharat will become a Hindu rashtra soon,” has been booked by the Hyderabad police for disturbing peace#news #Hyderabad
(@KP_Aashish) https://t.co/M4SNbamnZl— IndiaToday (@IndiaToday) April 12, 2022
… ಇಲ್ಲದಿದ್ದರೆ ಪ್ರತಿಯೊಂದು ಮಸೀದಿಯ ಅಕ್ಕಪಕ್ಕದಲ್ಲಿ ದಿನದಲ್ಲಿ ೫ ಬಾರಿ ‘ಹನುಮಾನ ಚಾಲಿಸಾ’ ಹಚ್ಚಲಾಗುವುದು ! – ಶಾಸಕ ಟಿ. ರಾಜಾಸಿಂಹ
ಮೆರವಣಿಗೆಯ ಸಮಯದಲ್ಲಿ ಉಪಸ್ಥಿತರಿದ್ದ ಹಿಂದೂಗಳನ್ನು ಸಂಬೋಧಿಸುತ್ತಿರುವಾಗ ಟಿ. ರಾಜಾ ಸಿಂಹರವರು ಮಾತನಾಡುತ್ತ, ಇಂದಿನ ಹಿಂದೂಗಳು ಕುಂಭಕರ್ಣನಂತೆ ಮಲಗಿದ್ದಾರೆ. ಅವರನ್ನು ಎಚ್ಚರಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ. ಮೆರವಣಿಗೆಗೆ ಪೊಲೀಸರಿಂದ ತಡವಾಯಿತು. ಪೊಲೀಸರು, ರಾತ್ರಿ ೧೦ರ ನಂತರ ಸ್ಪೀಕರ ಹಚ್ಚಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ನಿಮ್ಮ ಮೇಲೆ ಅಪರಾಧ ದಾಖಲಿಸಬೇಕಾಗುವುದು’ ಎಂದು ಹೇಳಿದರು. ನಾನು ಪೊಲೀಸರಿಗೆ ಕೇಳಲು ಇಚ್ಛಿಸುತ್ತೇನೆ, ಗೋಹತ್ಯೆಯ ಮೇಲೂ ಕಾನೂನು ಇದೆ; ಆದರೂ ಹಸು ಮತ್ತು ಕರುವಿನ ಹತ್ಯೆಯಾಗುತ್ತದೆ, ಆಗ ಸರ್ವೋಚ್ಚ ನ್ಯಾಯಾಲಯದ ಕಾನೂನು ಅವರ ಮೇಲೆ ಏಕೆ ಅನ್ವಯವಾಗುವುದಿಲ್ಲ ? ನ್ಯಾಯಾಲಯದ ನಿರ್ಣಯವು ರಾತ್ರಿ ೧೦ ರಿಂದ ಬೆಳಿಗ್ಗೆ ೬ರ ಸಮಯದಲ್ಲಿ ಧ್ವನಿಕ್ಷೇಪಕವನ್ನು ಬಳಸುವ ಬಗ್ಗೆ ಇದೆ. ಆದರೆ ಪ್ರತಿದಿನ ಮುಂಜಾನೆ ೫ ಗಂಟೆಗೆ ಭೋಂಗಾದಿಂದ ಆಜಾನ ಕೇಳಿಸಲಾಗುತ್ತದೆ. ನ್ಯಾಯಾಲಯದ ಕಾನೂನನ್ನು ತೆಲಂಗಾಣ ರಾಜ್ಯದಲ್ಲಿ ಅನ್ವಯಿಸಿ ಇಲ್ಲದಿದ್ದರೆ ಪ್ರತಿಯೊಂದು ಮಸೀದಿಯ ಅಕ್ಕಪಕ್ಕದಲ್ಲಿ ದಿನದಲ್ಲಿ ೫ ಬಾರಿ ಹನುಮಾನ ಚಾಲಿಸಾ ಸ್ಪೀಕರ ಹಚ್ಚಲಾಗುವುದು. ಎಲ್ಲರಿಗಾಗಿ ಸಮಾನ ಕಾನೂನು ಇದೆ, ಅವರಿಗೂ ಬಂದ್ ಮಾಡಲು ಹೇಳಿ. ಅನಂತರ ನಾವು ಬಂದ್ ಮಾಡುತ್ತೇವೆ.