ಹಿಂದೂ ಬಹುಸಂಖ್ಯಾತ ಭಾರತದಲ್ಲಿ 'ಹಿಂದೂ' ಆಗಿ ಅನುಭವಿಸಿದ ಆಘಾತಗಳು!

ನವ ದೆಹಲಿ – ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3 ರಾಜ್ಯಗಳಲ್ಲಿ ಲವ್ ಜಿಹಾದ್‌ನ 4 ಘಟನೆಗಳು ಮತ್ತು 2 ರಾಜ್ಯಗಳಲ್ಲಿ ಮತಾಂತರದ 2 ಘಟನೆಗಳು ಬೆಳಕಿಗೆ ಬಂದಿವೆ.
ಲವ್ ಜಿಹಾದ್‌ನ ಘಟನೆಗಳು
ಉತ್ತರ ಪ್ರದೇಶ
೧. ಅಮ್ರೋಹಾ : ಜಿಲ್ಲೆಯ ಬಚರಾಯುವಿನ ರಶೀದ್ ಖುರೇಷಿ ಎಂಬಾತ ವಿಚ್ಛೇದಿತ ಹಿಂದೂ ಮಹಿಳೆಯೊಬ್ಬಳನ್ನು ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ. ಎರಡು ಬಾರಿ ಗರ್ಭಪಾತ ಮಾಡಿಸಿ, ಅವಳಿಂದ 1 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ. ಈ ಬಗ್ಗೆ ಕೇಳಿದಾಗ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ. ಪೊಲೀಸರು ರಶೀದ್ ಸೇರಿದಂತೆ ಖಾಲಿದ್, ಸಾಜಿದ್, ಲಡ್ಡು ಮತ್ತು ಆಸಿಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
೨. ಬಿಜ್ನೋರ್: ಇಲ್ಲಿನ ವಿಚ್ಛೇದಿತ ಹಿಂದೂ ಮಹಿಳೆಯೊಬ್ಬರು, ಅಕಬರಾದ ನಗೀನಾ ಭಾಗದ ವ್ಯಕ್ತಿಯೊಬ್ಬನ ಮೇಲೆ ಆರೋಪ ಹೊರಿಸಿದ್ದಾರೆ. ಮದುವೆಯ ಆಮಿಷವೊಡ್ಡಿ ಆ ವ್ಯಕ್ತಿ ತನೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ನಂತರ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ರಾಜಸ್ಥಾನ
1. ಉದಯಪುರ : ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಆಕೆಯ ಅಸಭ್ಯ ಫೋಟೋಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡಿ 10 ರಿಂದ 15 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ. ಆಕೆ ಹಿಂದೂ ಯುವಕನೊಬ್ಬನನ್ನು ಮದುವೆಯಾದಾಗ, ಆ ಮುಸ್ಲಿಂ ಯುವಕ “ನಿನ್ನ ತಂದೆಯನ್ನು ಕನ್ಹಯ್ಯಲಾಲ್ ರೀತಿಯಲ್ಲಿ ತಲೆ ಕತ್ತರಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಜನವರಿ 2026ರಲ್ಲಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಸಂತ್ರಸ್ತೆ ಮತ್ತು ಆಕೆಯ ಪತಿ ವಿಷ ಸೇವಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಈಗ ಪ್ರಕರಣ ದಾಖಲಾಗಿದೆ.
ಗುಜರಾತ್
1. ರಾಜಕೋಟ್ : ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ 23 ವರ್ಷದ ನಂದಿನಿ ಬೋಸ್ಮಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಲವ್ ಜಿಹಾದ್ ಪ್ರಕರಣದಲ್ಲಿ ಸಿಲುಕಿದ್ದಳು. ಕುಟುಂಬದ ವಿರೋಧದ ನಡುವೆಯೂ ಅಸ್ಲಂ ಅಮಾನುಷನನ್ನು ಮದುವೆಯಾಗಿದ್ದಳು. ನಂತರ ಗಂಡನ ಮನೆಯವರು ಆಕೆಗೆ ಕಿರುಕುಳ ನೀಡತೊಡಗಿದರು. ಅಸ್ಲಂ ತನ್ನ ಮಗಳನ್ನು ಕೊಂದಿದ್ದಾನೆ ಎಂದು ತಂದೆ ಆರೋಪಿಸುತ್ತಿದ್ದಾರೆ, ಆದರೆ ಪೊಲೀಸರು ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳುತ್ತಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.
ಹಿಂದೂಗಳ ಮತಾಂತರದ ಘಟನೆಗಳು!
೧. ಪಿಲಿಭಿತ್ (ಉತ್ತರ ಪ್ರದೇಶ) – ರಾಮನಗರ ಭಾಗದ ಹಜಾರ ಪ್ರದೇಶದಲ್ಲಿ ರಾಜೀವ್ ಕುಮಾರ್ ಅವರು ರಾಮ ರಾಜ್ಭರ್ ಎಂಬ ಕ್ರೈಸ್ತನ ವಿರುದ್ಧ ಮತಾಂತರದ ಪ್ರಯತ್ನದ ಕುರಿತು ದೂರು ನೀಡಿದ್ದಾರೆ. ಕುಮಾರ್ ಅವರು ಆರೋಪಿಸಿದಂತೆ, ರಾಜ್ಭರ್ ತನಗೆ ಬೈಬಲ್ ನೀಡಿ, ಕ್ರೈಸ್ತ ಧರ್ಮ ಸ್ವೀಕರಿಸಿದರೆ ಹಣ ಮತ್ತು ಕೆಲಸ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾನೆ. ಪೊಲೀಸರು ರಾಜ್ಭರ್‌ನನ್ನು ಬಂಧಿಸಿದ್ದು, ಆತನಿಂದ ಮತಾಂತರಕ್ಕೆ ಸಂಬಂಧಿಸಿದ ವಸ್ತುಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
೨. ಬಿಕಾನೇರ್ (ರಾಜಸ್ಥಾನ): ಇಲ್ಲಿನ 32 ವರ್ಷದ ವಿವಾಹಿತ ಹಿಂದೂ ಮಹಿಳೆ ತನ್ನ 5 ವರ್ಷದ ಮಗಳೊಂದಿಗೆ ಉತ್ತರ ಪ್ರದೇಶದ ಗಾಜಿಯಾಬಾದ್ ತಲುಪಿದ್ದಾಳೆ. ಗುಲ್ಬಹಾರ್ ಅಲಿಯಾಸ್ ಮೈರಾ ಖಾನ್ ಎಂಬಾಕೆ ಸಾಮಾಜಿಕ ಮಾಧ್ಯಮದ ಮೂಲಕ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದಳು. ಆಕೆಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಯತ್ನಿಸುತ್ತಿರಬಹುದು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಲಕ್ಷ್ಮಣಪುರಿಯಲ್ಲಿ ಸಂತ್ರಸ್ತೆಯನ್ನು ಪತ್ತೆಹಚ್ಚಿದ್ದಾರೆ; ಆದರೆ ಆಕೆ ಮರಳಲು ಸಿದ್ಧಳಿಲ್ಲ. ಪೊಲೀಸರು ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !