೧,೬೨೬ ಆರೋಪಿಗಳ ಬಂಧನ; ಮಹಾರಾಷ್ಟ್ರವನ್ನು ನಶೆ ಮುಕ್ತಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟನೆ!

ಮುಂಬಯಿ: ರಾಜ್ಯದಲ್ಲಿ ಕೇವಲ ೪ ತಿಂಗಳಲ್ಲಿ ೨೫೪ ಕೋಟಿ ೫೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು (ಡ್ರಗ್ಸ್) ಜಪ್ತಿ ಮಾಡಲಾಗಿದೆ. ಜನವರಿಯಿಂದ ಏಪ್ರಿಲ್ ೨೦೨೫ ರ ಅವಧಿಯಲ್ಲಿ ಮಾದಕ ವಸ್ತು ಹೊಂದಿದ್ದಕ್ಕಾಗಿ ೧,೧೪೨ ಪ್ರಕರಣಗಳು ದಾಖಲಾಗಿವೆ. ಈ ಕಾರ್ಯಾಚರಣೆಯಲ್ಲಿ ೧,೬೨೬ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ೩,೧೯೯ ಪ್ರಕರಣಗಳು ದಾಖಲಾಗಿವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ಸದನದಲ್ಲಿ ಮಾದಕ ವಸ್ತು ಮಾಫಿಯಾ ವಿರುದ್ಧ ಕೇಳಲಾದ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ‘ಮುಂಬಯಿ ಮತ್ತು ಮಹಾರಾಷ್ಟ್ರವನ್ನು ನಶೆ ಮುಕ್ತಗೊಳಿಸಲು ಸರಕಾರ ಸದಾ ತತ್ಪರವಾಗಿದೆ’ ಎಂದೂ ಅವರು ಹೇಳಿದರು. ಮುಖ್ಯಮಂತ್ರಿಗಳು ಸದನದಲ್ಲಿ ಅಂಕಿ-ಅಂಶಗಳ ಸಮೇತ ಈ ಮಾಹಿತಿಯನ್ನು ಮಂಡಿಸಿದರು. ಇದಕ್ಕೆ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದರು. ಈ ಆರೋಪಗಳಿಗೂ ಮುಖ್ಯಮಂತ್ರಿ ಫಡ್ನವಿಸ್ ಅವರು ಸವಿಸ್ತಾರವಾಗಿ ಉತ್ತರಿಸಿದರು.
ಮುಖ್ಯಮಂತ್ರಿಗಳು ಹೇಳಿದ್ದೇನು?
ಮುಂಬಯಿ ಸೇರಿದಂತೆ ರಾಜ್ಯಾದ್ಯಂತ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಗಾಗಿ ‘ಮಾದಕ ವಸ್ತು ವಿರೋಧಿ ಕಾರ್ಯಪಡೆ’ (ಆಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್) ಕಾರ್ಯನಿರ್ವಹಿಸುತ್ತಿದೆ. ೨೦೨೫ ರಲ್ಲಿ ಈ ತಂಡ ಮತ್ತು ಪೊಲೀಸರು ಒಟ್ಟಾಗಿ ೫೨೩ ಕೋಟಿ ೧೭ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಿದ್ದಾರೆ.
೨.ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದ ವಿಷಯದಲ್ಲಿ ಸರಕಾರದ ನಿಲುವು ‘ಶೂನ್ಯ ಸಹನೆ’ (ಜೀರೋ ಟಾಲರೆನ್ಸ್) ಆಗಿದ್ದು, ಈ ಮಾಫಿಯಾದಲ್ಲಿ ಭಾಗಿಯಾಗಿರುವ ಅಥವಾ ದೋಷಿಗಳಾಗಿ ಕಂಡುಬರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ವಿರೋಧ ಪಕ್ಷದವರ ಆರೋಪ ಪಟ್ಟಿ!
ಪೊಲೀಸರು ಭಾರಿ ಪ್ರಮಾಣದಲ್ಲಿ ಹಫ್ತಾ ವಸೂಲಿ (ಲಂಚ) ಮಾಡುತ್ತಿದ್ದಾರೆ, ಅಂಥವರ ವಿರುದ್ಧ ನೇರ ಕ್ರಮ ಕೈಗೊಳ್ಳಬೇಕು. “ನಮ್ಮಲ್ಲಿ ಆನ್‌ಲೈನ್ ಮೂಲಕ ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ,” ಎಂದು ಶರದ್ ಪವಾರ್ ಬಣದ ನಾಯಕ ಜಯಂತ್ ಪಾಟೀಲ್ ಆರೋಪಿಸಿದರು. ಮತ್ತೊಂದೆಡೆ, ಈ ಮಾದಕ ವಸ್ತುಗಳ ಜಾಲ ಪೊಲೀಸರ ಸಹಕಾರದಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂದು ನಾಯಕ ಜಿತೇಂದ್ರ ಆವ್ಹಾಡ್ ಆರೋಪಿಸಿದರು. “ಪೊಲೀಸರು ಮಾದಕ ವಸ್ತುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,” ಎಂದು ಠಾಕ್ರೆ ಬಣದ ಶಾಸಕ ಸುನಿಲ್ ಪ್ರಭು ಆರೋಪಿಸಿದರು. “ಮಾದಕ ವಸ್ತು ಸಾಗಣೆ ಗಂಭೀರ ಅಪರಾಧವಾಗಿದೆ. ಮಾದಕ ವಸ್ತು ವಿರೋಧಿ ವಿಭಾಗವು ಏನು ಕೆಲಸ ಮಾಡುತ್ತಿದೆ? ರಾಜ್ಯದ ಹೊರಗಿನ ಬಂದರುಗಳಲ್ಲಿ ಮಾದಕ ವಸ್ತುಗಳು ಸಿಗುತ್ತಿವೆ, ಅಲ್ಲಿ ಪೊಲೀಸರನ್ನು ಕಳುಹಿಸಿ,” ಎಂದು ಜಯಂತ್ ಪಾಟೀಲ್ ಒತ್ತಾಯಿಸಿದರು.
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ
ಅಕೋಲಾ: ಗೋರಕ್ಷಕರೊಂದಿಗೆ ವಾದಕ್ಕಿಳಿದ ಮುಸಲ್ಮಾನರು; ಮುಸಲ್ಮಾನನನ್ನು ಬಿಟ್ಟಿದ್ದಾರೆಂದು ಆರೋಪಿಸಿದ ಭಾಜಪ!
೫ ರಾಜ್ಯಗಳಲ್ಲಿ ಲವ್ ಜಿಹಾದ್ ನ ೭ ಪ್ರಕರಣಗಳು ಬೆಳಕಿಗೆ!
ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸ ಮತ್ತು ಮದ್ಯದ ಪಾರ್ಟಿ ಮಾಡಿದ ಘಟನೆ: ೫ ಹಿಂದೂ ಯುವಕರ ಬಂಧನ