
ನವ ದೆಹಲಿ – ದೇಶದ ವಿವಿಧ ರಾಜ್ಯಗಳಲ್ಲಿ ಲವ್ ಜಿಹಾದ್ ನ ೭ ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಈ ಘಟನೆಗಳಲ್ಲಿ ಮತಾಂಧ ಮುಸಲ್ಮಾನ ಯುವಕರು ಹಿಂದೂ ಯುವತಿಯರಿಗೆ ವಂಚಿಸಿರುವುದು, ಅವರ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿರುವುದು, ಹಾಗೂ ಅವರ ಬಲಾತ್ಕಾರ ಮಾಡಿರುವುದು ಬೆಳಕಿಗೆ ಬಂದಿದೆ.
🚨 Love Jihad: Myth or a Pre-planned Conspiracy? 🚨
Those who dismiss “Love Jihad” as mere slogans need to confront the chilling reality.
Here are 7 recent cases from 5 states that reveal a disturbing, recurring pattern: false identities, deception, forced conversions, and… pic.twitter.com/QDHdqcCn1Y
— Sanatan Prabhat (@SanatanPrabhat) June 23, 2026
೧. ದೆಹಲಿ
ಇಲ್ಲಿನ ಬುರಾಡಿ ಪ್ರದೇಶದ ೩೬ ವರ್ಷದ ವಿವಾಹಿತ ಹಿಂದೂ ಮಹಿಳೆಯೊಂದಿಗೆ ಇನ್ ಸ್ಟಾಗ್ರಾಮ್ ಮೂಲಕ ‘ಸನ್ನಿ’ ಉರ್ಫ್ ಶಾಕಿಬ್ ಜರದಾರಿ ಎಂಬಾತನು ತನ್ನ ಮುಸಲ್ಮಾನ ಗುರುತನ್ನು ಮುಚ್ಚಿಟ್ಟು ಸ್ನೇಹ ಬೆಳೆಸಿದ್ದನು. ಮಹಿಳೆಯು ‘ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್’ ಆಗಿದ್ದರಿಂದ ವಿಡಿಯೋ ಮಾಡುವ ನೆಪದಲ್ಲಿ ಆಕೆಯನ್ನು ಹೋಟೆಲ್ ಗೆ ಕರೆಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಅಷ್ಟೇ ಅಲ್ಲದೆ, ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿ ಆಕೆಯನ್ನು ಮದರಸಾಗೂ ಕರೆದೊಯ್ಯಲಾಗಿತ್ತು. ಸಂತ್ರಸ್ತೆಯ ಪತಿಯು ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
೨. ಹರಿಯಾಣ
ಫರಿದಾಬಾದ್ : ಬಿಹಾರದ ಮುಜಾಫರ್ ಪುರದ ಮಸೀದಿಯೊಂದರ ಕಮರ್ ರಾಜಾ ಹೆಸರಿನ ಕಾಜಿ (ಇಸ್ಲಾಮಿಕ್ ಕಾನೂನು ತಜ್ಞ) ಸುಳ್ಳು ಗುರುತನ್ನು ಹೇಳಿ ಹಿಂದೂ ಹುಡುಗಿಯನ್ನು ಜಾಲಕ್ಕೆ ಸಿಲುಕಿಸಿದನು. ಆಕೆಯ ಮೇಲೆ ಬಲಾತ್ಕಾರ ಮಾಡಿ ಅಶ್ಲೀಲ ವಿಡಿಯೋಗಳನ್ನು ತೆಗೆದು ೫೦ ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಫರಿದಾಬಾದ್ ಪೊಲೀಸರು ಆತನೂ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಅಲಿಗಢ್ : ಜಿಲ್ಲೆಯ ರೊರಾವರ್ ನಲ್ಲಿ ಮತಾಂಧನೊಬ್ಬ ತನ್ನ ಗುರುತನ್ನು ಮುಚ್ಚಿಟ್ಟು ದೆಹಲಿಯ ಹಿಂದೂ ಮಹಿಳೆಯನ್ನು ಜಾಲದಲ್ಲಿ ಕೆಡವಿದನು ಮತ್ತು ಆಕೆಯೊಂದಿಗೆ ದೇವಸ್ಥಾನದಲ್ಲಿ ವಿವಾಹವಾದನು. ಮುಂದೆ ನಿಜವಾದ ಗುರುತು ಬೆಳಕಿಗೆ ಬಂದಾಗ ಆಕೆಯ ಮೇಲೆ ಇಸ್ಲಾಮಿಕ್ ಮತಾಂತರಕ್ಕೆ ಒತ್ತಡ ಹೇರಿದನು, ಆಕೆಗೆ ತಲಾಖ್ ನೀಡಿದನು. ಅಲ್ಲದೆ ಇತರ ಪುರುಷರೊಂದಿಗೆ ‘ಹಲಾಲಾ’ (ತಲಾಖ್ ನೀಡಿದ ನಂತರ ಆ ಮಹಿಳೆಯೊಂದಿಗೆ ಮತ್ತೆ ವಿವಾಹವಾಗಬೇಕಾದರೆ, ಅದಕ್ಕೂ ಮುನ್ನ ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಬೇಕಾಗುತ್ತದೆ ಎಂಬ ಇಸ್ಲಾಮಿಕ್ ಪದ್ಧತಿ) ಮಾಡಲು ಬಲವಂತಪಡಿಸುವ ಆಘಾತಕಾರಿ ಪ್ರಯತ್ನ ಮಾಡಿದನು.
೩. ಉತ್ತರ ಪ್ರದೇಶ
ಕಾನಪುರ : ಜಿಲ್ಲೆಯ ಘಾಟಮಪುರದಲ್ಲಿ ಸಾಹಿಲ್ ಹೆಸರಿನ ಜಿಹಾದಿ ಯುವಕನು ಇಸ್ಲಾಮಿಕ್ ಗುರುತನ್ನು ಮುಚ್ಚಿಟ್ಟು ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು. ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡವನ್ನೂ ಹೇರಲಾಗಿತ್ತು. ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿದ್ದು ತಲೆಮರೆಸಿಕೊಂಡಿರುವ ಸಾಹಿಲ್ ಮತ್ತು ಆತನ ಸಹೋದರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಹರಾಯಿಚ್ : ಜಿಲ್ಲೆಯ ಧರಸವಾಮ್ ಶೇಖುವಾಪುರ ಗ್ರಾಮದಿಂದ ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಪ್ರಕರಣದಲ್ಲಿ ಲತೀಫ್ ಅಹ್ಮದ್ ಉರ್ಫ್ ಮೋನು ಎಂಬಾತನನ್ನು ಬಂಧಿಸಲಾಗಿದೆ. ಸಂತ್ರಸ್ತೆಯನ್ನು ೩ ದಿನಗಳ ಮುನ್ನ ಅಪಹರಿಸಿದ್ದರಿಂದ ಇಲ್ಲಿನ ಆಕ್ರೋಶಗೊಂಡ ಹಿಂದೂಗಳು ಮೋನು ಮನೆಗೆ ಕಲ್ಲು ತೂರಾಟ ನಡೆಸಿದ್ದರು. ಇದರ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತೆಯನ್ನು ಪತ್ತೆಹಚ್ಚಿದರು.
೪. ಮಧ್ಯಪ್ರದೇಶ
ಅಲಿರಾಜಪುರ : ಶಕೀಲ್ ಹೆಸರಿನ ಯುವಕನು ಆದಿವಾಸಿ ಹಿಂದೂ ಯುವತಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿದನು. ವಿವಾಹವಾಗುವ ನೆಪದಲ್ಲಿ ಆಕೆಯನ್ನು ರಾಜಸ್ಥಾನದ ಅಜ್ಮೀರ್ ಗೆ ಕರೆದೊಯ್ದು ಆಕೆಯ ಮೇಲೆ ಇಸ್ಲಾಮಿಕ್ ಮತಾಂತರಕ್ಕಾಗಿ ಒತ್ತಡ ಹೇರಿದನು. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಘುವಂಶ ಸಿಂಗ್ ಭದೋರಿಯಾ ತಿಳಿಸಿದ್ದಾರೆ.
೫. ಗುಜರಾತ್
ಮೆಹಸಾನಾ : ಜಿಲ್ಲೆಯ ಖೇರಾಲು ಪ್ರದೇಶದಲ್ಲಿ ಮಹಮ್ಮದ್ ಜಾವೇದ್ ಎಂಬಾತನು ‘ರಾಹುಲ್’ ಸೋಗಿನಲ್ಲಿ ೨೦ ವರ್ಷದ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿದನು. ಆಕೆಯ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಸಿ ಆಕೆಯನ್ನು ಮತ್ತೆ ಹೋಟೆಲ್ ಗೆ ಕರೆಸಿಕೊಂಡಿದ್ದನು. ಕೆಲವು ನಾಗರಿಕರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಅವರು ಜಾವೇದ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಸರಿಯಾಗಿ ಧರ್ಮದೇಟು ನೀಡಿದರು. ಪೊಲೀಸರು ಈ ಪ್ರಕರಣದಲ್ಲಿ ಬಲಾತ್ಕಾರ ಮತ್ತು ಹಲ್ಲೆ ಎರಡೂ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”