ಅಕೋಲಾ: ಗೋರಕ್ಷಕರೊಂದಿಗೆ ವಾದಕ್ಕಿಳಿದ ಮುಸಲ್ಮಾನರು; ಮುಸಲ್ಮಾನನನ್ನು ಬಿಟ್ಟಿದ್ದಾರೆಂದು ಆರೋಪಿಸಿದ ಭಾಜಪ!

ಅಕೋಲಾ – ಬಾರ್ಶಿಟಾಕಳಿ ತಾಲೂಕಿನ ಸಿಂದಖೇಡ ಗ್ರಾಮದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆಂಬ ಸಂಶಯದ ಮೇಲೆ ಗೋರಕ್ಷಕರು ಒಬ್ಬ ಮುಸಲ್ಮಾನನನ್ನು ಹಿಡಿದರು. ಆಗ ಆತ ತನ್ನ ಸಹಚರರನ್ನು ಅಲ್ಲಿಗೆ ಕರೆಸಿಕೊಂಡನು. ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ 20 ರಿಂದ 25 ಮುಸಲ್ಮಾನರು ಜಮಾಯಿಸಿ ಗೋರಕ್ಷಕರೊಂದಿಗೆ ವಾಗ್ವಾದಕ್ಕಿಳಿದರು. (ಉದ್ಧಟ ಮುಸಲ್ಮಾನರು! – ಸಂಪಾದಕರು) ‘ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದರು; ಆದರೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಮುಸಲ್ಮಾನನ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ಮುಸಲ್ಮಾನ ಯುವಕನನ್ನು ಕಳುಹಿಸಿದರು ಮತ್ತು ಅವನ ಬಳಿಯಿದ್ದ ಸಾಮಾನನ್ನು ಕೂಡ ಮರಳಿ ನೀಡಿದರು; ಮತ್ತು ಗೋರಕ್ಷಕರ ವಿರುದ್ಧವೇ ಕ್ರಮ ಕೈಗೊಂಡರು ಎಂದು ಭಾಜಪ ಶಾಸಕ ಹರೀಶ್ ಪಿಂಪಳೆ ಆರೋಪಿಸಿದ್ದಾರೆ.

‘ಈ ವಿವಾದದ ವೇಳೆ ಮುಸಲ್ಮಾನರ ಕೈಯಲ್ಲಿ ಕಬ್ಬಿಣದ ಪೈಪ್‌ ಗಳಿದ್ದವು ಮತ್ತು ಅವರು ದಾದಾಗಿರಿ ಮಾಡುತ್ತಿದ್ದರು; ಆದರೆ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಈ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸಿ ಸಂಬಂಧಿತ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೆಯೇ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಸಿಬ್ಬಂದಿಯನ್ನು ಕೂಡ ಅಮಾನತುಗೊಳಿಸಬೇಕೆಂದು ಹರೀಶ್ ಅವರು ಪೊಲೀಸ್ ಅಧೀಕ್ಷಕರನ್ನು ಒತ್ತಾಯಿಸಿದ್ದಾರೆ.

ಸಂಬಂಧಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ! – ಪೊಲೀಸ್ ಅಧೀಕ್ಷಕರು

ಅಕೋಲಾದ ಪೊಲೀಸ್ ಅಧೀಕ್ಷಕ ಅರ್ಚಿತ ಚಾಂಡಕ್ ಈ ಬಗ್ಗೆ ಮಾತನಾಡಿ, ಸಂಬಂಧಿತ ಯುವಕನನ್ನು ಬಿಟ್ಟು ಕಳಿಸಲಿಲ್ಲ. ಘಟನಾ ಸ್ಥಳದಲ್ಲಿ ಸುಮಾರು 150ಕ್ಕೂ ಹೆಚ್ಚು ಜನರ ಗುಂಪು ಜಮಾಯಿಸಿದ್ದರಿಂದ ಅವನನ್ನು ಪೊಲೀಸರ ಕಣ್ಗಾವಲಿನಲ್ಲಿ ಮುಂದೆ ಕಳುಹಿಸಲಾಯಿತು. ಸಂಬಂಧಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಎಂದು ತಿಳಿಸಿದರು. (ಗೋರಕ್ಷಕರ ಸಂಘಟನೆ ಮತ್ತು ಅವರ ಒತ್ತಡವನ್ನು ನೋಡಿ ಪೊಲೀಸರು ಇಂತಹ ಕ್ರಮ ಕೈಕೊಂಡಿರಬಹುದೇ? – ಸಂಪಾದಕರು)