‘ಭಾರತವು ಇಂತಹ ವಿಷಯಗಳಿಗಾಗಿ ಎಂದಿಗೂ ಹಣ ಖರ್ಚು ಮಾಡುವುದಿಲ್ಲ’, ಎಂದು ಹೇಳುತ್ತಾ ಟ್ರಂಪ್ ಅವರೇ ತಿರಸ್ಕರಿಸಿದರು!

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರು ಯುಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ಶಾಂತಿ ಕಾರ್ಯಾಚರಣೆ ನಡೆಸಲು ಭಾರತೀಯ ಸೈನ್ಯವನ್ನು ಅಲ್ಲಿಗೆ ಕಳುಹಿಸುವಂತೆ ಇಟ್ಟಿದ್ದ ಪ್ರಸ್ತಾವನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಿರಸ್ಕರಿಸಿದ್ದರು ಎಂದು ಹೊಸ ಪುಸ್ತಕವೊಂದರಲ್ಲಿ ಹೇಳಲಾಗಿದೆ. ‘ಭಾರತೀಯರು ಹಾಗೆ ಮಾಡುವುದಿಲ್ಲ. ಅವರು ಇಂತಹ ವಿಷಯಗಳಿಗಾಗಿ ಹಣ ಖರ್ಚು ಮಾಡುವುದಿಲ್ಲ’, ಎಂದು ಟ್ರಂಪ್ ಈ ಸಮಯದಲ್ಲಿ ಹೇಳಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ.
1. ‘ದ ನ್ಯೂಯಾರ್ಕ್ ಟೈಮ್ಸ್’ನ ಪತ್ರಕರ್ತರಾದ ಮ್ಯಾಗಿ ಹ್ಯಾಬರ್ಮನ್ ಮತ್ತು ಜೊನಾಥನ್ ಸ್ವಾನ್ ಅವರ ‘ರಿಜಿಮ್ ಚೇಂಜ್ : ಇನ್ ಸೈಡ್ ದ ಇಂಪೀರಿಯಲ್ ಪ್ರೆಸಿಡೆನ್ಸಿ ಆಫ್ ಡೊನಾಲ್ಡ್ ಟ್ರಂಪ್’ (ಅಧಿಕಾರ ಬದಲಾವಣೆ: ಡೊನಾಲ್ಡ್ ಟ್ರಂಪ್ ಅವರ ಸಾಮ್ರಾಜ್ಯಶಾಹಿ ಅಧ್ಯಕ್ಷೀಯ ಅವಧಿಯ ಒಳಗಿನ ಸತ್ಯ) ಎಂಬ ಪುಸ್ತಕದ ಪ್ರಕಾರ, ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ 10 ದಿನಗಳ ನಂತರ ಅಂದರೆ ಜನವರಿ 30, 2025 ರಂದು ಓವಲ್ ಕಚೇರಿಯಲ್ಲಿ ವ್ಯಾನ್ಸ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಯುಕ್ರೇನ್-ರಷ್ಯಾ ಯುದ್ಧದಲ್ಲಿ ಅಮೆರಿಕದ ಪಾತ್ರವನ್ನು ನಿರ್ಧರಿಸಲು ಸಭೆ ನಡೆಸಿದ್ದರು. ಈ ಸಭೆಯಲ್ಲಿ ರಷ್ಯಾ ಮತ್ತು ಯುಕ್ರೇನ್ ನ ವಿಶೇಷ ದೂತರಾದ ಲೆಫ್ಟಿನೆಂಟ್ ಜನರಲ್ ಕೀತ್ ಕೆಲಾಗ್ (ನಿವೃತ್ತ) ಉಪಸ್ಥಿತರಿದ್ದರು.
2. ಕೆಲಾಗ್ ಅವರ ‘ಟ್ರಂಪ್ ಐತಿಹಾಸಿಕ ಶಾಂತಿ ಒಪ್ಪಂದ’ದ ಯೋಜನೆಯಲ್ಲಿ ಬ್ರಿಟಿಷ್, ಫ್ರೆಂಚ್ ಮತ್ತು ಡಚ್ ಶಾಂತಿ ಸೈನಿಕರನ್ನು ಸೇರಿಸಿಕೊಳ್ಳಲು ಒತ್ತಾಯಿಸಲಾಗಿತ್ತು; ಆದರೆ ವ್ಯಾನ್ಸ್ ಅವರು ‘ನಾಟೋ’ ದೇಶಗಳ ಸೈನ್ಯವನ್ನು ಕಳುಹಿಸುವುದನ್ನು ವಿರೋಧಿಸಿದರು. ‘ನಾಟೋ’ ದೇಶಗಳ ಸೈನ್ಯವನ್ನು ಕಳುಹಿಸಿದರೆ ರಷ್ಯಾ ಮತ್ತಷ್ಟು ಕೆರಳಬಹುದು; ಏಕೆಂದರೆ ರಷ್ಯಾವೂ ಈಗಾಗಲೇ ಈ ಒಕ್ಕೂಟದ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸಿದೆ, ಎಂಬುದು ವ್ಯಾನ್ಸ್ ಅವರ ವಾದವಾಗಿತ್ತು.
3. ಈ ಕಾರ್ಯಕ್ಕಾಗಿ ಯುರೋಪ್ ಖಂಡದ ಹೊರಗಿನ ಇತರ ದೇಶಗಳ ಸೈನ್ಯ ಸಿಗಬಹುದೇ? ಎಂದು ಕೇಳುತ್ತಾ ವ್ಯಾನ್ಸ್ ಅವರು ಭಾರತದ ಹೆಸರನ್ನು ಸೂಚಿಸಿದರು. ಆ ಸಮಯದಲ್ಲಿ ಟ್ರಂಪ್ ಇದನ್ನು ವಿರೋಧಿಸಿದರು. ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧವಿದೆ ಮತ್ತು ಮೋದಿ ಅವರಿಗೆ ನಾನು ತುಂಬಾ ಇಷ್ಟವಾಗುತ್ತೇನೆ ಹಾಗೂ ನಾನು ಅವರನ್ನು ಭೇಟಿಯಾಗುವುದಿದೆ’, ಎಂದೂ ಟ್ರಂಪ್ ಹೇಳಿದ್ದರು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ