
ಶ್ರೀನಗರ (ಜಮ್ಮು-ಕಾಶ್ಮೀರ) – ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವರು ಭಾರತದೊಂದಿಗೆ ಯುದ್ಧದ ಬೆದರಿಕೆ ಹಾಕಿದ ನಂತರ, ಕಾಶ್ಮೀರದ ನಿಯಂತ್ರಣ ರೇಖೆಯ (LOC) ಬಳಿ ಪಾಕಿಸ್ತಾನ ಸೇನೆಯ 8 ಬ್ರಿಗೇಡ್‌ಗಳು 35 ‘ಆಂಟಿ ಡ್ರೋನ್ ಯೂನಿಟ್’ (ಡ್ರೋನ್ ವಿರೋಧಿ ಘಟಕ)ಗಳನ್ನು ನಿಯೋಜಿಸಿವೆ. ಲೇಸರ್ ತಂತ್ರಜ್ಞಾನದಿಂದ ಸುಸಜ್ಜಿತವಾಗಿರುವ ಈ ಘಟಕಗಳು ವಾಯು ದಾಳಿಗಳನ್ನು ತಡೆಯುವ ಕೆಲಸ ಮಾಡುತ್ತವೆ. ಪಾಕಿಸ್ತಾನವು ‘ಎಐ ಫೆನ್ಸಿಂಗ್’ (ಕೃತಕ ಬುದ್ಧಿಮತ್ತೆಯನ್ನು ಬಳಸಿ ನಿರ್ಮಿಸಿದ ವರ್ಚುವಲ್ ಬೇಲಿ) ವ್ಯವಸ್ಥೆಯನ್ನು ಸಹ ಅಳವಡಿಸಿಕೊಂಡಿದೆ. ಇದರ ಅಡಿಯಲ್ಲಿ ಟಾರ್ಗೆಟಿಂಗ್ (ಗುರಿ ಇಡುವುದು) ಮತ್ತು ಸರ್ವೈಲೆನ್ಸ್ (ನಿಗಾ ಇಡುವುದು) ಪ್ರಕ್ರಿಯೆಗಳನ್ನು ವೇಗಗೊಳಿಸಲಾಗಿದೆ. ಅಲ್ಲದೆ, ಎಲೆಕ್ಟ್ರಾನಿಕ್ ವಾರ್‌ಫೇರ್ (ಸಂಪರ್ಕ ವ್ಯವಸ್ಥೆಯನ್ನು ನಿಯಂತ್ರಿಸಿ ಅದನ್ನು ನಿಷ್ಕ್ರಿಯಗೊಳಿಸುವುದು) ಮತ್ತು ‘ಕೌಂಟರ್ ಡ್ರೋನ್ ಗ್ರಿಡ್’ (ಡ್ರೋನ್ ಪತ್ತೆ ಹಚ್ಚಿ ನಾಶಪಡಿಸುವ ಸ್ವಯಂಚಾಲಿತ ವ್ಯವಸ್ಥೆ) ಅನ್ನು ಸಹ ಪಾಕಿಸ್ತಾನ ಸಿದ್ಧಪಡಿಸಿದೆ. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದ ಗಡಿಯಲ್ಲಿದ್ದ ತನ್ನ 5 ಬೆಟಾಲಿಯನ್‌ಗಳನ್ನು ಸ್ಥಳಾಂತರಿಸಿ, ನಿಯಂತ್ರಣ ರೇಖೆಯ ಬಳಿಯ ರಾವಲಕೋಟ್ ಮತ್ತು ಕೋಟ್ಲಿ ಪ್ರದೇಶಗಳಲ್ಲಿ ನಿಯೋಜಿಸಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !