ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ವಿರುದ್ಧ ಭುಗಿಲೆದ್ದ ಆಕ್ರೋಶ!
ನಾಗರಿಕರಿಂದ ರಸ್ತೆಗಿಳಿದು ಪ್ರತಿಭಟನೆ !

ಕ್ವೆಟ್ಟಾ (ಬಲೂಚಿಸ್ತಾನ) – ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸರಕಾರ ಮತ್ತು ಸೇನೆಯಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿರುವ ಪ್ರಮುಖ ಮಹಿಳಾ ನಾಯಕಿ ಮೆಹರಂಗ್ ಬಲೋಚ್ ಅವರಿಗೆ ಪಾಕಿಸ್ತಾನವು ಜೀವಾವಧಿ ಶಿಕ್ಷೆ ವಿಧಿಸಿದೆ. ಮೆಹರಂಗ್ ಬಲೋಚ್ ಅವರು ವೃತ್ತಿಯಿಂದ ವೈದ್ಯರಾಗಿದ್ದಾರೆ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಮಹಮ್ಮದ್ ಅಲಿ ಮೊಬೀನ್ ಅವರು ಜೂನ್ 22 ರಂದು ಈ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಈ ನಿರ್ಣಯದ ವಿರುದ್ಧ ಬಲೂಚಿಸ್ತಾನದಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿವೆ. ಮೆಹರಂಗ್ ಬಲೋಚ್ ಅವರನ್ನು ‘ಬಲೂಚಿಸ್ತಾನದ ಹೆಣ್ಣುಹುಲಿ’ ಎಂದು ಕರೆಯಲಾಗುತ್ತದೆ. ನ್ಯಾಯಾಲಯದ ಈ ಏಕಪಕ್ಷೀಯ ನಿರ್ಣಯವನ್ನು ಮಾನವ ಹಕ್ಕುಗಳ ಸಂಘಟನೆಗಳು, ರಾಜಕೀಯ ವಿರೋಧ ಪಕ್ಷಗಳು ಮತ್ತು ವಿವಿಧ ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ. ಈ ತೀರ್ಪಿನ ನಂತರ ಈಗ ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸರಕಾರದ ವಿರುದ್ಧ ಮತ್ತೊಮ್ಮೆ ಆಕ್ರೋಶದ ಅಲೆ ಎದ್ದಿದೆ.
1. ಮೆಹರಂಗ್ ಬಲೋಚ್ ಅವರ ನಿರ್ಭೀತ ಕಾರ್ಯಶೈಲಿಯು ಪಾಕಿಸ್ತಾನದ ಸರ್ವಾಧಿಕಾರಿ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅವರು ‘ಬಲೂಚ್ ಯಕಜೆಹತಿ ಕಮಿಟಿ’ಯ (‘ಬಿ.ವೈ.ಸಿ.’) ಮುಖ್ಯಸ್ಥರಾಗಿದ್ದಾರೆ. ಈ ಸಂಘಟನೆಯು ನಡೆಸಿದ ಜನಪ್ರತಿಭಟನೆಯ ಸಂದರ್ಭದಲ್ಲಿ, 2024 ರಲ್ಲಿ ಗ್ವಾದರ್ ನಲ್ಲಿ ಭದ್ರತಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರು. ಈ ಸಾವಿಗೆ ಮೆಹರಂಗ್ ಬಲೋಚ್ ಅವರೇ ಕಾರಣ ಎಂದು ಪಾಕಿಸ್ತಾನಿ ಸರಕಾರಿ ತನಿಖಾ ಸಂಸ್ಥೆಗಳು ಆರೋಪ ಹೊರಿಸಿದ್ದವು. ಇದೇ ಪ್ರಕರಣದಲ್ಲಿ ‘ಬಿ.ವೈ.ಸಿ.’ ಸದಸ್ಯರಾದ ಸಿಬಗತುಲ್ಲಾ ಬಲೂಚ್ ಮತ್ತು ಬಲೋಚ್ ಖಾದಿರ್ ಖಾನ್ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
2. ಪಾಕಿಸ್ತಾನಿ ಸರಕಾರದ ಪ್ರಭಾವಕ್ಕೆ ಒಳಗಾಗಿ ನೀಡಿರುವ ಈ ನಿರ್ಣಯದ ವಿರುದ್ಧ ‘ಬಿ.ವೈ.ಸಿ.’ ಸಂಘಟನೆಯು ಬೃಹತ್ ಜನ ಆಂದೋಲನದ ಮೂಲಕವೇ ಸವಾಲು ಹಾಕಲು ನಿರ್ಧರಿಸಿದೆ.
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
‘ನೌಕಾ ಮರುಬಳಕೆ’ ವಲಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ! : Ship Recycling
ಸಂಯುಕ್ತ ಅರಬ್ ಅಮೀರತ್ (UAE) ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿ ಖರೀದಿಸಲು ಮಾತುಕತೆ ನಡೆಸುತ್ತಿದೆ! : India UAE BrahMos Deal
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
ಭಾರತದೊಂದಿಗಿನ ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ಅಗತ್ಯ ಇಲ್ಲ !