ಎಂ.ಐ.ಎಂ.ನ ಶಾಸಕ ಅಕ್ಬರುದ್ದೀನ್ ಓವೈಸಿ ನಿರ್ದೋಷಿಯಾಗಿ ಖುಲಾಸೆ

‘೧೫ ನಿಮಿಷ ಪೊಲೀಸರನ್ನು ಸರಿಸಿ’ ಈ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ವಿಶೇಷ ಸೆಷನ್ಸ್ ನ್ಯಾಯಾಲಯವು ಎಂ.ಐ.ಎಂ.ನ ಶಾಸಕ ಮತ್ತು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಇವರನ್ನು ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.

೨೦೧೨ ರ ಡಿಸೆಂಬರ್‌ನಲ್ಲಿ ರಾಜ್ಯದ ನಿಜಾಮಾಬಾದ್ ಮತ್ತು ನಿರ್ಮಲ್‌ನಲ್ಲಿ ನಡೆದ ಸಭೆಗಳಲ್ಲಿ ಮಾತನಾಡುತ್ತಿರುವಾಗ ಅಕ್ಬರುದ್ದೀನ್, ‘ನೀವು ೧೦೦ ಕೋಟಿ ಇದ್ದೀರಿ ಮತ್ತು ನಾವು ೨೫ ಕೋಟಿ ಇದ್ದೇವೆ. ೧೫ ನಿಮಿಷ ಪೊಲೀಸರನ್ನು ಪಕ್ಕಕ್ಕೆ ಇಡಿ, ಆಮೇಲೆ ಯಾರಲ್ಲಿ ಎಷ್ಟು ಧೈರ್ಯವಿದೆ ಎಂದು ತೋರಿಸುತ್ತೇವೆ’ ಎಂದು ಹೇಳಿಕೆಯನ್ನು ನೀಡಿದ್ದರು. ಈ ಪ್ರಕರಣದಲ್ಲಿ ೨ ಕಡೆ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅವರ ಬಂಧನವೂ ಆಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಈ ಪ್ರಕರಣದಲ್ಲಿ ನಿರ್ದೋಷಿ ಎಂದು ಖುಲಾಸೆಗೊಂಡಿದ್ದಾರೆ.