‘ಹಿಂದೂಗಳ ಧರ್ಮಗುರುಗಳು ಅವರನ್ನು ಮುಸಲ್ಮಾನರ ನರಸಂಹಾರದ ಕುರಿತು ಪ್ರಚೋಧಿಸಿದರು !’(ಅಂತೆ) – ಎಮ್.ಐ.ಎಮ್.ನ ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿ

ಶ್ರೀರಾಮ ನವಮಿಯ ಮೆರವಣಿಗೆಯ ಮೇಲೆ ನಡೆಸಿದ ಆಕ್ರಮಣದ ಕುರಿತು ಅಸದುದ್ದೀನ ಓವೈಸಿಯವರ ಆರೋಪ !

ಇದಕ್ಕೆ ಹೇಳುತ್ತಾರೆ ಕಳ್ಳಗೊಂದು ಪಿಳ್ಳೆ ನೆವ ! ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಾಹುಳ್ಯವಿರುವ ಪ್ರದೇಶದಿಂದ ಆಕ್ರಮಣ ನಡೆಸಿರುವಾಗ ಹಿಂದೂಗಳನ್ನೇ ಅಪರಾಧಿಗಳೆಂದು ಇರ್ಧರಿಸುವ ಓವೈಸಿಯವರ ಪ್ರಯತ್ನಗಳ ಮೇಲೆ ಯಾರೂ ವಿಶ್ವಾಸ ಇಡಲಾರರು, ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಭಾಗ್ಯನಗರ (ತೇಲಂಗಾಣ) – ದೇಶದ ಕೆಲವು ಸ್ಥಳಗಳಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಲು ಶ್ರೀರಾಮನವಮಿಯ ಮೆರವಣಿಗೆ ಮತ್ತು ಶೋಭಾಯಾತ್ರೆಯನ್ನು ಉಪಯೋಗಿಸಲಾಯಿತು. ಹಿಂದೂಗಳ ಧರ್ಮಗುರುಗಳು ಮುಸಲ್ಮಾನರ ನರಸಂಹಾರ ಮತ್ತು ಅವರ ಮೇಲೆ ಅತ್ಯಾಚಾರ ಮಾಡಲು ಕರೆ ನೀಡಿದರು.

ಆದ್ದರಿಂದ ಪೊಲಿಸರ ಬೆಂಬಲದಿಂದ ಹಿಂದುತ್ವದ ಭಾಷೆಯನ್ನು ಮಾಡುವ ಗುಂಪುನಿಂದ ರಾಜಸ್ಥಾನ, ಗುಜರಾತ, ಝಾರಖಂಡ ಮತ್ತು ಮಧ್ಯಪ್ರದೇಶದ ವಾತಾವರಣ ಹದಗೆಟ್ಟಿದೆ, ಎಂದು ಸುಳ್ಳು ಆರೋಪವನ್ನು ಎಮ್.ಐ.ಎಮ್.ನ (ಆಲ್ ಇಂಡಿಯಾ ಮಜಲಿಸ-ಇತ್ತೇಹಾದುಲ ಮುಸಲಿಮಿನ) ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿಯವರು ದೇಶದ ಕೆಲವು ರಾಜ್ಯಗಳಲ್ಲಿ ಶ್ರೀ ರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರಿಂದ ನಡೆಸಿದ ಆಕ್ರಮಣದ ಕುರಿತು ಹೇಳಿದರು.