
ಬದ್ಲಾಪುರ (ಠಾಣೆ), ಜೂನ್ ೨೩ (ವಾರ್ತೆ.) – ಸರಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ, ಕೆಲವು ಮುಸ್ಲಿಮರು ಮಾಲೀಕತ್ವದ ಹಕ್ಕನ್ನು ದಾವೆ ಮಾಡುತ್ತ ಆದಿವಾಸಿ ಕುಟುಂಬಗಳ ಮನೆಗಳ ಗೋಡೆಗಳನ್ನು ಎರಡು ಬಾರಿ ಕೆಡವಿದ್ದಾರೆ. ಈ ಘಟನೆಯು ಬದ್ಲಾಪುರದ ಸಮೀಪವಿರುವ ಮೂಳಗಾಂವ್ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಿಂದ ಆದಿವಾಸಿ ಕುಟುಂಬಗಳು ಭಯಭೀತರಾಗಿದ್ದರು; ಆದರೆ ಪೊಲೀಸರ ಮಧ್ಯಸ್ಥಿಕೆಯ ನಂತರ ಮನೆ ನಿರ್ಮಾಣ ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದೆ.
೧. ಮೂಳಗಾಂವ್ ಪ್ರದೇಶದ ಅನೇಕ ಆದಿವಾಸಿ ಕುಟುಂಬಗಳು ಕಳೆದ ೩-೪ ತಲೆಮಾರುಗಳಿಂದ ಇಲ್ಲಿ ನೆಲೆಸಿವೆ. ವಸತಿ ಯೋಜನೆಯಡಿ ಅವರಿಗೆ ಮನೆ ಮಂಜೂರಾದ ನಂತರ ಸಂಬಂಧಪಟ್ಟ ಜಾಗದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು; ಆದರೆ ‘ಈ ಜಾಗ ನಮ್ಮ ಒಡೆತನದ್ದು’ ಎಂದು ವಾದಿಸಿ ಪಕ್ಕದಲ್ಲಿ ವಾಸಿಸುವ ಮುಸ್ಲಿಮರು ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು. ಅವರು ಕಟ್ಟಿದ್ದ ಗೋಡೆಗಳನ್ನು ಕೆಡವಿದರು.
೨. ಇದರಿಂದ ಬೇಸತ್ತ ಆದಿವಾಸಿ ಕುಟುಂಬಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದವು. ಪೊಲೀಸರು ಜಗಳ ಮಾಡಿಕೊಳ್ಳದೆ ಘಟನೆಯ ಚಿತ್ರೀಕರಣ ಮಾಡುವಂತೆ ಸಲಹೆ ನೀಡಿ, ನಿರ್ಮಾಣ ಕಾರ್ಯವನ್ನು ಮುಂದುವರಿಸಲು ತಿಳಿಸಿದರು. ಆ ಬಳಿಕವೂ ಮುಸ್ಲಿಮರು ಕೆಲಸವನ್ನು ನಿಲ್ಲಿಸಲು ಮತ್ತೊಮ್ಮೆ ಯತ್ನಿಸಿದರು; ಆದರೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಕೆಲಸ ಮುಂದುವರಿಸಲು ಸಹಾಯ ಮಾಡಿದರು.
೩. ಪೊಲೀಸರು ಮುಸ್ಲಿಮರಲ್ಲಿ ಭೂಮಿಯ ಮಾಲೀಕತ್ವದ ದಾಖಲೆಗಳನ್ನು ಕೇಳಿದಾಗ ಅವರು ಅದನ್ನು ನೀಡಲು ಸಾಧ್ಯವಾಗಲಿಲ್ಲ. (ಇಂತಹ ಕಾನೂನುಬಾಹಿರ ಮುಸ್ಲಿಮರನ್ನು ಜೈಲಿಗೆ ಕಳುಹಿಸಬೇಕು! – ಸಂಪಾದಕರು) ಎರಡು ಬಾರಿ ನಿರ್ಮಾಣ ಕಾರ್ಯವನ್ನು ಕೆಡವಿದ್ದರಿಂದ ಆದಿವಾಸಿ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗುತ್ತಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”