
ವಾಷಿಂಗ್ಟನ್ (ಅಮೆರಿಕ) – ಇತ್ತೀಚೆಗೆ ಸ್ವಿಟ್ಜರ್ಲೆಂಡ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಯ ನಂತರ, ಇರಾನ್ ತೈಲದ ಮೇಲಿನ ಕೆಲವು ನಿರ್ಬಂಧಗಳಿಗೆ ಅಮೆರಿಕ 60 ದಿನಗಳ ವಿನಾಯಿತಿ ನೀಡಿದೆ. ಟ್ರಂಪ್ ಸರ್ಕಾರವು ಆಗಸ್ಟ್ 21 ರವರೆಗೆ ಇರಾನಿ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ‘ಹಾರ್ಮುಜ್ ಜಲಸಂಧಿ’ಯಲ್ಲಿ ಅಂತಾರಾಷ್ಟ್ರೀಯ ನೌಕೆಗಳ ಸಂಚಾರ ಸುಗಮವಾಗಿ ಮುಂದುವರಿಸಲು ಇರಾನ್ ಒಪ್ಪಿಗೆ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ.
ಇರಾನ್ ತನ್ನ ಪರಮಾಣು ತಾಣಗಳ ಅಂತಾರಾಷ್ಟ್ರೀಯ ಪರಿಶೀಲನೆಗೆ ಸಿದ್ಧವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. ಇದರಿಂದ ಇರಾನ್ ನ ಪರಮಾಣು ಯೋಜನೆ ಶಸ್ತ್ರಾಸ್ತ್ರ ತಯಾರಿಕೆಯ ಉದ್ದೇಶ ಹೊಂದಿಲ್ಲ ಎಂಬ ಬಗ್ಗೆ ದೀರ್ಘಕಾಲಿಕ ಭರವಸೆ ಸಿಗಲಿದೆ. ಈ ಒಪ್ಪಂದದ ಅಡಿಯಲ್ಲಿ, ವಿಶ್ವಸಂಸ್ಥೆಯ ಪರಮಾಣು ಉಸ್ತುವಾರಿ ಸಂಸ್ಥೆಯಾದ ‘ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ಯ (‘ಇಂಟರನ್ಯಾಶನಲ್ ಆಟೊಮೆಟಿಕ್ ಎನರ್ಜಿ ಏಜನ್ಸಿ.’ ಐಎಇಎ) ಅಧಿಕಾರಿಗಳನ್ನು ಮತ್ತೊಮ್ಮೆ ಇರಾನ್ ನಲ್ಲಿ ನಿಯೋಜಿಸಬಹುದಾಗಿದೆ.
ಮತ್ತೊಂದೆಡೆ, ಇರಾನ್ ಅಮೆರಿಕದ ಈ ಹೇಳಿಕೆಯನ್ನು ತಳ್ಳಿಹಾಕಿದೆ. ಇರಾನ್ ನ ಸರಕಾರಿ ಸುದ್ದಿ ಸಂಸ್ಥೆ ‘ಇರನಾ’ ಪ್ರಕಾರ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಅವರು, ‘ಐಎಇಎ’ ಜೊತೆಗಿನ ಸಹಕಾರ ಈ ಹಿಂದೆ ನಿಗದಿಪಡಿಸಿದ ನಿಯಮಗಳಂತೆಯೇ ಮುಂದುವರಿಯುತ್ತದೆ; ಇರಾನ್ ಯಾವುದೇ ಹೊಸ ಭರವಸೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾತುಕತೆಯ ಸಮಯದಲ್ಲಿಯೂ ಸೈನ್ಯ ಸಂಪೂರ್ಣ ಜಾಗರೂಕವಾಗಿದೆ ! – ಇರಾನ್
ಇರಾನ್ ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಗದಿರ್ ನೆಜಾಮಿ ಮಾತನಾಡಿ, ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿದ್ದರೂ ನಮ್ಮ ಮಿಲಿಟರಿ ಸಿದ್ಧತೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ ಎಂದು ಎಚ್ಚರಿಸಿದ್ದಾರೆ. ಯಾವುದೇ ಸಂಭಾವ್ಯ ಮರುದಾಳಿಗೆ ಉತ್ತರಿಸಲು ಇರಾನ್ ಸೈನ್ಯ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.
‘ಹಾರ್ಮುಜ್ ಜಲಸಂಧಿ ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ !’ ಇರಾನ್
ಇರಾನ್ ಸಂಸತ್ತಿನ ಸ್ಪೀಕರ್ ಮಹಮ್ಮದ್ ಬಾಗೇರ್ ಘಲಿಬಾಫ್ ಮಾತನಾಡಿ, ಹಾರ್ಮುಜ್ ಜಲಸಂಧಿಯು ಇನ್ನು ಮುಂದೆ ಸಂಘರ್ಷದ ಪೂರ್ವ ಸ್ಥಿತಿಗೆ ಮರಳುವುದಿಲ್ಲ. ಇನ್ನು ಮುಂದೆ ಇರಾನ್ ಈ ಪ್ರಮುಖ ಸಮುದ್ರ ಮಾರ್ಗವನ್ನು ತನ್ನದೇ ಆದ ರೀತಿಯಲ್ಲಿ ನಿರ್ವಹಿಸಲಿದೆ; ಆದರೂ ಅಂತಾರಾಷ್ಟ್ರೀಯ ನಿಯಮಗಳ ಪಾಲನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಸ್ವಿಟ್ಜರ್ಲೆಂಡ್ ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯ ನಂತರ ಘಲಿಬಾಫ್ ಅವರು ಮಾತನಾಡಿ, ನಾವು ಅಮೆರಿಕನ್ನರನ್ನು ಎಂದಿಗೂ ನಂಬಿಲ್ಲ, ಇಂದಿಗೂ ನಮಗೆ ಅವರ ಮೇಲೆ ನಂಬಿಕೆಯಿಲ್ಲ ಮತ್ತು ಭವಿಷ್ಯದಲ್ಲೂ ಅವರ ಬಗ್ಗೆ ಜಾಗರೂಕರಾಗಿರುವುದೇ ಜಾಣತನ, ಎಂದು ಘಲಿಬಾಫ್ ಸ್ಪಷ್ಟಪಡಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
‘ನೌಕಾ ಮರುಬಳಕೆ’ ವಲಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ! : Ship Recycling
ಸಂಯುಕ್ತ ಅರಬ್ ಅಮೀರತ್ (UAE) ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿ ಖರೀದಿಸಲು ಮಾತುಕತೆ ನಡೆಸುತ್ತಿದೆ! : India UAE BrahMos Deal
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
ಭಾರತದೊಂದಿಗಿನ ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ಅಗತ್ಯ ಇಲ್ಲ !