ಮಂಗಳೂರು ಇಲ್ಲಿಯ ಅಜ್ಞಾತರಿಂದ ಮುಸಲ್ಮಾನ ಯುವಕನ ಹತ್ಯೆ !

ಇಲ್ಲಿಯ ಸೂರತ್ಕಲ್‌ನಲ್ಲಿ ೪-೫ ಅಪರಿಚಿತ ದುಶ್ಕರ್ಮಿಗಳಿಂದ ಜುಲೈ ೨೮ ರಂದು ರಾತ್ರಿ ಸುಮಾರು ೮ ಗಂಟೆಗೆ ಮಹಮ್ಮದ್ ಫಾಜೀಲನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರ ನಂತರ ಪೊಲೀಸರು ಇಲ್ಲಿ ನಿಷೇಧಾಜ್ಞೆ ಜಾರಿ ಮಾಡಿದರು, ಎಂದು ಮಂಗಳೂರು ಪೊಲೀಸ ಆಯುಕ್ತ ಎನ್. ಶಶಿ ಕುಮಾರ ಇವರು ಮಾಹಿತಿ ನೀಡಿದರು.

೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

ಅಪ್ರಾಪ್ತ ಹುಡುಗಿಯರ ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೇರಳದ ಪಾದ್ರಿಯ ಬಂಧನ

ಕೇರಳದಲ್ಲಿ ಅನ್ಯ ರಾಜ್ಯಗಳಿಂದ ಅಪ್ರಾಪ್ತ ಹುಡಗಿಯರನ್ನು ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೊಝಿಕೊಡ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಅರ್.ಪಿ.ಎಫ್) ಓರ್ವ ಚರ್ಚ್ ಪಾದ್ರಿಯನ್ನು ಬಂಧಿಸಿದ್ದಾರೆ. ಜೇಕಬ ವರ್ಗೀಸ ಆರೋಪಿಯಾಗಿದ್ದು ಅವನು ಕರುಣಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕನಾಗಿದ್ದನು.

ಸಂಭಲ ಮದರಸಾದಲ್ಲಿ ಮೌಲವಿಯಿಂದ ೬ ವರ್ಷದ ಹುಡುಗಿಯ ಮೇಲೆ ಬಲತ್ಕಾರ

ಉತ್ತರ ಪ್ರದೇಶದ ಸಂಭಲ ಜಿಲ್ಲೆಯ ಓರ್ವ ಮೌಲವಿಯು ಮದರಸಾದಲ್ಲಿ ಕಲಿಯಲು ಬರುವ ೬ ವರುಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ಸಂಬಂಧಿಕರು ನೀಡಿರುವ ದೂರಿನ ಮೇಲೆ ಪೊಲೀಸರು ಮೌಲವಿ ವಿರುದ್ಧ ಆರೋಪ ದಾಖಲಿಸಿಕೊಂಡಿದ್ದಾರೆ. ಅದರ ನಂತರ ಪೊಲೀಸರು ಆರೋಪಿ ಮೌಲವಿಯನ್ನು ಬಂಧಿಸಿದ್ದಾರೆ.

ದಾರುಲ ಇಸ್ಲಾಂ ಬೇಕಾಗಿರುವ ಮುಸಲ್ಮಾನರು ಭಾರತದಲ್ಲಿ ಇರಕೂಡದು ಎಂದು ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಿತ್ತು ! – ಡಾ. ಸುಬ್ರಹ್ಮಣ್ಯ ಸ್ವಾಮಿ

ಹಿಂದೂಗಳಿಂದ ತಪ್ಪಾಗಿದೆ, ಯಾವ ಮುಸಲ್ಮಾನರಿಗೆ ದಾರುಲ ಇಸ್ಲಾಂ ಬೇಕಾಗಿದೆ, ಅವರು ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ೧೯೪೭ ರಲ್ಲಿ ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಾಗಿತ್ತು. ದಾರುಲ ಇಸ್ಲಾಂ ಕೂಡ ಇದೆ, ಹಿಂದುತ್ವವೂ ಇದೆ ಮತ್ತು ಕ್ರೈಸ್ತರ ಬೇರೆ ಮಾರ್ಗವು ಇದೆ, ಹೇಗೆ ಆಗಲು ಸಾಧ್ಯವಿಲ್ಲ, ಎಂದು ಭಾಜಪದ ನಾಯಕ ಡಾಕ್ಟರ್ ಸುಬ್ರಹ್ಮಣ್ಯಂ ಸ್ವಾಮಿ ಇವರು ಒಂದು ಸಂದರ್ಶನದಲ್ಲಿ ಹೇಳಿದರು.

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ‘ಎನ್.ಐ.ಎ.’ಗೆ !

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಜುಲೈ ೨೯ ರಂದು ಸಂಜೆ ಮಾಧ್ಯಮಗಳಿಗೆ ತಿಳಿಸಿದರು.

‘ನಾವು ಮುಸ್ಲಿಮರಾಗಿರುವುದರಿಂದ ಪೊಲೀಸರು ನಮ್ಮನ್ನು ಸಿಲುಕಿಸುತ್ತಿದ್ದಾರೆ !’(ಅಂತೆ)

ಭಾರತೀಯ ಜನತಾ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಜುಲೈ ೨೮ ರಂದು ಈ ಪ್ರಕರಣದಲ್ಲಿ ಶಫೀಕ್ ಬೆಳ್ಳಾರೆ ಮತ್ತು ಜಾಕಿರ್ ಸವಣೂರು ಎಂಬಿಬ್ಬರನ್ನು ಬಂಧಿಸಲಾಗಿದೆ.

ಒಂದು ಚಪಾತಿಗಾಗಿ ಹಿಂದೂ ರಿಕ್ಷಾಚಾಲಕನನ್ನು ಹತ್ಯೆಗೈದ ಫಿರೋಜ ಖಾನ್ !

ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು.

ಸಂಸತ್ತಿನಿಂದ ಅಮಾನತ್ತುಗೊಂಡಿರುವ ವಿರೋಧಿ ಪಕ್ಷದ ಸಂಸದರ ಧರಣಿ

ಸಂಸತ್ತಿನಲ್ಲಿ ಗದ್ದಲ ಹಾಕಿದ ಕಾರಣ ಅಮಾನತ್ತುಗೊಂಡಿರುವ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರಿಗೆ ‘ಧರಣಿ ಆಂದೋಲನ’ ಪ್ರಾರಂಭಿಸಿದರು.

ಔರಂಗಾಬಾದ (ಬಿಹಾರ)ನಲ್ಲಿ ೧೦೬ ಶಾಲೆಗಳಿಗೆ ‘ಶುಕ್ರವಾರ’ ರಜೆ !

ಜಿಲ್ಲೆಯ ೧೦೬ ಉರ್ದು ಶಾಲೆಗಳಿಗೆ ಭಾನುವಾರದ ಬದಲು ‘ಶುಕ್ರವಾರ’ ರಜೆ ಇರುತ್ತದೆ, ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು; ಆದರೆ ಯಾರ ಆದೇಶದ ಮೇರೆಗೆ ಶುಕ್ರವಾರ ರಜೆ ನೀಡಲಾಗುತ್ತಿದೆ, ಈ ಬಗ್ಗೆ ಯಾರಿಗೂ ತಿಳಿದಿಲ್ಲ.