‘ನಾವು ಮುಸ್ಲಿಮರಾಗಿರುವುದರಿಂದ ಪೊಲೀಸರು ನಮ್ಮನ್ನು ಸಿಲುಕಿಸುತ್ತಿದ್ದಾರೆ !’(ಅಂತೆ)

ಪ್ರವೀಣ ನೆಟ್ಟಾರು ಹತ್ಯೆ ಆರೋಪಿ ಶಫೀಕ್ ತಂದೆ ಆರೋಪ

ಬೆಂಗಳೂರು – ಭಾರತೀಯ ಜನತಾ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಜುಲೈ ೨೮ ರಂದು ಈ ಪ್ರಕರಣದಲ್ಲಿ ಶಫೀಕ್ ಬೆಳ್ಳಾರೆ ಮತ್ತು ಜಾಕಿರ್ ಸವಣೂರು ಎಂಬಿಬ್ಬರನ್ನು ಬಂಧಿಸಲಾಗಿದೆ. ಶಫೀಕ್‌ನ ತಂದೆ ಇಬ್ರಾಹಿಂ ಸುದ್ದಿವಾಹಿಗಳೊಂದಿಗೆ ಮಾತನಾಡಿ, ‘ನಾನು ಮೊದಲು ಪ್ರವೀಣ ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಪ್ರವೀಣ ಮತ್ತು ಶಫೀಕ್ ಸ್ನೇಹಿತರಾಗಿದ್ದರು. ಪ್ರವೀಣ ನನ್ನ ಮನೆಗೆ ಬಂದು ಹೋಗುತ್ತಿದ್ದ. ನಾವು ಮುಸ್ಲಿಮರು ಎಂಬ ಕಾರಣಕ್ಕೆ ಪೊಲೀಸರು ಶಫೀಕ್ ನನ್ನು ಬಂಧಿಸಿದ್ದಾರೆ’, ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ, ಶಫೀಕ್‌ನ ಪತ್ನಿಯು, ಶಫೀಕ್ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ; ಆದರೆ ಪ್ರವೀಣ ಕೊಲೆಯಾದ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು. ಶಫೀಕ್ ಸುಳ್ಯ ಪ್ರದೇಶದಲ್ಲಿ ವೀಳ್ಯದೆಲೆ ಅಂಗಡಿ ಹೊಂದಿದ್ದರೆ, ಜಾಕಿರ್ ಪುತ್ತೂರಿನ ಸವಣೂರಿನಲ್ಲಿ ತಿಂಡಿ ಅಂಗಡಿ ನಡೆಸುತ್ತಿದ್ದಾರೆ. ಪೊಲೀಸರು ಪ್ರವೀಣ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ೨೧ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ‘ಪಿ.ಎಫ್.ಐ.’ ಮತ್ತು ಅದರ ರಾಜಕೀಯ ಸಂಘಟನೆಯಾದ ’ಎಸ್.ಡಿ.ಪಿ.ಐ.’ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಇವರೊಂದಿಗೆ ನಂಟು ಹೊಂದಿರುವವರು ಎನ್ನಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಹೇಳಿಕೆಗಳಿಂದಾಗಿಯೇ ಭಾರತ ವಿರೋಧಿ ಶಕ್ತಿಗಳಿಗೆ ‘ಭಾರತ ಮುಸ್ಲಿಂ ವಿರೋಧಿ’, ಎಂದು ಹೇಳಲು ಪೂರಕವಾಗಿರುತ್ತದೆ. ಆದ್ದರಿಂದ ಶಫೀಕ್ ತಂದೆಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು !