ದಾರುಲ ಇಸ್ಲಾಂ ಬೇಕಾಗಿರುವ ಮುಸಲ್ಮಾನರು ಭಾರತದಲ್ಲಿ ಇರಕೂಡದು ಎಂದು ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಿತ್ತು ! – ಡಾ. ಸುಬ್ರಹ್ಮಣ್ಯ ಸ್ವಾಮಿ

(ಯಾವ ದೇಶದಲ್ಲಿ ಮುಸಲ್ಮಾನರ ಸರಕಾರ ಮತ್ತು ಶರಿಯಾ ಕಾನೂನು ಎಲ್ಲರಿಗೂ ಜಾರಿ ಮಾಡಬಹುದು ಅದಕ್ಕೆ ದಾರುಲ ಇಸ್ಲಾಂ ಎನ್ನುತ್ತಾರೆ.)

ಹೊಸ ದೆಹಲಿ – ಹಿಂದೂಗಳಿಂದ ತಪ್ಪಾಗಿದೆ, ಯಾವ ಮುಸಲ್ಮಾನರಿಗೆ ದಾರುಲ ಇಸ್ಲಾಂ ಬೇಕಾಗಿದೆ, ಅವರು ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ೧೯೪೭ ರಲ್ಲಿ ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಾಗಿತ್ತು. ದಾರುಲ ಇಸ್ಲಾಂ ಕೂಡ ಇದೆ, ಹಿಂದುತ್ವವೂ ಇದೆ ಮತ್ತು ಕ್ರೈಸ್ತರ ಬೇರೆ ಮಾರ್ಗವು ಇದೆ, ಹೇಗೆ ಆಗಲು ಸಾಧ್ಯವಿಲ್ಲ, ಎಂದು ಭಾಜಪದ ನಾಯಕ ಡಾಕ್ಟರ್ ಸುಬ್ರಹ್ಮಣ್ಯಂ ಸ್ವಾಮಿ ಇವರು ಒಂದು ಸಂದರ್ಶನದಲ್ಲಿ ಹೇಳಿದರು.

ಡಾ. ಸ್ವಾಮಿ ಇವರು ಮಂಡಿಸಿರುವ ಕೆಲವು ಸೂತ್ರಗಳು

‘ನೂಪುರ ಶರ್ಮಾ’ ದೊಡ್ಡ ವಿಷಯವಲ್ಲ !

ಡಾ. ಸುಬ್ರಹ್ಮಣ್ಯ ಸ್ವಾಮಿ ಮಾತನಾಡುತ್ತ, ನಾವು ಯಾರನ್ನು ತಡೆಯುವುದಿಲ್ಲ ಆದರೆ ನಮ್ಮ ದೇವರನ್ನು ನಿಂದಿಸಬೇಡಿ. ನಾವು ನಿಮ್ಮ ದೇವರನ್ನು ನಿಂದಿಸುವುದಿಲ್ಲ. ಯಾರ ಮೇಲೆ ದಾಳಿ ಮಾಡಿದರೆ ಅಥವಾ ಹಿಂಸಾಚಾರ ನಡೆಸಿದರೆ ಅದು ಕಾನೂನ ಬಾಹಿರವಾಗಿದೆ. ನೂಪುರ ಶರ್ಮಾ ಕೆಲವರಿಗೆ ಹಿಡಿಸಬಹುದು, ಕೆಲವರಿಗೆ ಅಲ್ಲದಿರಬಹುದು; ಇದು ದೊಡ್ಡ ವಿಷಯವೇನಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿಗೆ ಸ್ಥಾನವಿದೆ. ಅದು ಪ್ರಜಾಪ್ರಭುತ್ವದ ಭಾಗವಾಗಿದೆ, ಆದರೆ ಕತ್ತು ಕೊಯ್ಯುತ್ತೇನೆ, ಎಂಬಂತಹ ಬೆದರಿಕೆಗಳನ್ನು ಮನ್ನಿಸುವಂತಿಲ್ಲ. ಯಾರಾದರೂ ತಲವಾರು ತೆಗೆಯುತ್ತಿದ್ದರೆ ಅಥವಾ ಹಿಂಸಾಚಾರ ನಡೆಸುತ್ತಿದ್ದರೆ ಆಗ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ದ್ವೇಷ ತೀರಿಸಿಕೊಳ್ಳುವುದು ಇದು ಕೊನೆಯ ಪರ್ಯಾಯವಾಗಿದೆ. ಅದನ್ನು ಉಪಯೋಗಿಸಬಾರದು.

ಹಿಂದೂಗಳ ೪೦ ಸಾವಿರ ಮಂದಿರಗಳನ್ನು ನಾಶ ಮಾಡಲಾಯಿತು !

ಮುಸಲ್ಮಾನ ಆಕ್ರಮಣಕಾರರಿಂದ ಹಿಂದೂಗಳ ೪೦ ಸಾವಿರಕ್ಕೂ ಹೆಚ್ಚಿನ ಮಂದಿರಗಳನ್ನು ನಾಶಗೊಳಿಸಲಾಯಿತು. ಎಲ್ಲಿ ಬೇರೆ ಪರ್ಯಾಯವಿರಲಿಲ್ಲ ಅಲ್ಲಿ ದೇವಸ್ಥಾನಗಳನ್ನು ಮತ್ತೆ ಕಟ್ಟಬೇಕು, ಎಂಬದೇ ನಮ್ಮ ಬೇಡಿಕೆ ಇದೆ. ಪ್ರಭು ಶ್ರೀ ರಾಮನ ಜನ್ಮ ಅಯೋಧ್ಯೆಯಲ್ಲಿ ಆಗಿತ್ತು. ಆದ್ದರಿಂದ ಅವನ ಮಂದಿರ ಅಯೋಧ್ಯೆಯಲ್ಲಿ ಕಟ್ಟಲಾಗುವುದು. ಅದರಂತೆ ಭಗವಾನ್ ಶ್ರೀ ಕೃಷ್ಣನ ಜನ್ಮ ಮಥುರೆಯಲ್ಲಿ ಆಗಿತ್ತು, ಆದ್ದರಿಂದ ಅವನ ಮಂದಿರ ಮಥುರೆಯಲ್ಲಿಯೇ ಆಗಬೇಕು. ಕಾಶಿ ವಿಶ್ವನಾಥನ ವಿಷಯವು ಹಾಗೆ ಇದೆ. ಅವರನ್ನು ಬೇರೆಯಲ್ಲೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಅವರು ಅಲ್ಲೇ ಇರುತ್ತಾರೆ. ಅಯೋಧ್ಯ, ಕಾಶಿ ಮತ್ತು ಮಥುರಾಗೆ ಯಾವುದೇ ಪರ್ಯಾಯವಿಲ್ಲ.