ಔರಂಗಾಬಾದ (ಬಿಹಾರ) – ಜಿಲ್ಲೆಯ ೧೦೬ ಉರ್ದು ಶಾಲೆಗಳಿಗೆ ಭಾನುವಾರದ ಬದಲು ‘ಶುಕ್ರವಾರ’ ರಜೆ ಇರುತ್ತದೆ, ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು; ಆದರೆ ಯಾರ ಆದೇಶದ ಮೇರೆಗೆ ಶುಕ್ರವಾರ ರಜೆ ನೀಡಲಾಗುತ್ತಿದೆ, ಈ ಬಗ್ಗೆ ಯಾರಿಗೂ ತಿಳಿದಿಲ್ಲ. ಜಿಲ್ಲಾ ಶಿಕ್ಷಣಾಧಿಕಾರಿ ಸಂಗ್ರಾಮ ಸಿಂಹ ಇವರ ಪ್ರಕಾರ, ಮೊದಲಿನಿಂದಲೂ ಶುಕ್ರವಾರ ರಜೆ ಇದೆ. ಯಾವ ಶಾಲೆಯಲ್ಲಿ ಉರ್ದು ಕಲಿಯುವ ವಿದ್ಯಾರ್ಥಿ ಮತ್ತು ಮುಸಲ್ಮಾನ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ, ಅಲ್ಲಿ ಶುಕ್ರವಾರ ರಜೆ ಇರುತ್ತದೆ, ವಿಶೇಷವೆಂದರೆ ಶಿಕ್ಷಣ ವಿಭಾಗದ ಪಂಚಾಂಗದಲ್ಲಿ ಶುಕ್ರವಾರ ರಜೆಯ ಉಲ್ಲೇಖವಿದೆ.
37 Govt Schools in Bihar Observe Friday as Weekly Holiday Instead of Sunday; NCPCR Seeks Report https://t.co/KaMOvBUJO3 pic.twitter.com/cK1LlcPPdC
— News18.com (@news18dotcom) July 28, 2022
ಶಿಕ್ಷಕ ಸಂಘದ ನಾಯಕ ಪುರುಷೋತ್ತಮ ಶರ್ಮ ಇವರ ಪ್ರಕಾರ, ನಾನು ೧೯೯೪ ರಿಂದ ಶಿಕ್ಷಕನಾಗಿದ್ದೇನೆ. ಯಾವಾಗ ಉರ್ದು ಶಾಲೆಯಲ್ಲಿ ನನ್ನ ನೇಮಕವಾಯಿತೋ, ಆಗಲಿಂದಲೂ ಶುಕ್ರವಾರ ದಿನದಂದು ರಜೆ ಇರುತ್ತದೆ. ಅದು ಯಾರ ಆದೇಶದಿಂದ ನೀಡಲಾಗಿದೆ ಇದು ನನಗೆ ತಿಳಿದಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವು
|