ಸಂಸತ್ತಿನಿಂದ ಅಮಾನತ್ತುಗೊಂಡಿರುವ ವಿರೋಧಿ ಪಕ್ಷದ ಸಂಸದರ ಧರಣಿ

ಹೊಸದೆಹಲಿ– ಸಂಸತ್ತಿನಲ್ಲಿ ಗದ್ದಲ ಹಾಕಿದ ಕಾರಣ ಅಮಾನತ್ತುಗೊಂಡಿರುವ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರಿಗೆ ‘ಧರಣಿ ಆಂದೋಲನ’ ಪ್ರಾರಂಭಿಸಿದರು. ಗದ್ದಲ ಹಾಕಿರುವ ಒಟ್ಟು 27 ಸಂಸದರನ್ನು ಅಮಾನತ್ತುಗೊಳಿಸಲಾಗಿದೆ. ಇದರಲ್ಲಿ ಲೋಕಸಭೆಯ 4, ರಾಜ್ಯಸಭೆಯ 23 ಸಂಸದರು ಸೇರಿದ್ದಾರೆ. ಸಂಸದರ ಧರಣಿ 27 ಜುಲೈ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಿದ್ದು, ಅದು 29 ಜುಲೈ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಿತು.

ಅಮಾನತ್ತುಗೊಂಡಿರುವ ಸಂಸದರು ಕೈಯಲ್ಲಿ ‘ಮೋದಿ-ಶಹಾ ಸರ್ವಾಧಿಕಾರಿ’ ಎನ್ನುವ ಫಲಕವನ್ನು ಹಿಡಿದಿದ್ದರು. ‘ಸರಕಾರ ಚರ್ಚೆಯಿಂದ ದೂರ ಸರಿಯುತ್ತಿದೆ. ಇದರಿಂದಲೇ ಸಂಸದರಿಗೆ ಅಮಾನತ್ತುಗೊಳಿಸಲಾಗಿದೆ,’ ಎಂದು ಸಂಸದರು ಆರೋಪಿಸಿದ್ದಾರೆ. ‘ಆಪ್’ ನ ರಾಜ್ಯಸಭೆಯ ಸಂಸದ ಸಂಜಯ ಸಿಂಹ ಗುಜರಾತಿನಲ್ಲಿ ಕೆಲವರು ವಿಷಯುಕ್ತ ಸರಾಯಿಗೆ ಬಲಿಯಾಗಿರುವ ವಿಷಯದ ಕುರಿತು ನಾನು ರಾಜ್ಯಸಭೆಯಲ್ಲಿ ಮಂಡಿಸುತ್ತಿದ್ದೆನು; ಆದರೆ ನನ್ನನ್ನು ಅಮಾನತ್ತುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಸ್ವತಃ ಸಂಸತ್ತಿನಲ್ಲಿ ಗದ್ದಲ ಹಾಕಿ ಜನತೆಯ ಲಕ್ಷಾಂತರ ಹಣ ಹಾನಿ ಮಾಡುವುದು ಮತ್ತು ಆಂದೋಲನ ಮಾಡಿ ತಮ್ಮನ್ನು ನಿರಪರಾಧಿಗಳೆಂದು ಬಿಂಬಿಸುವ ಪ್ರಯತ್ನ ಮಾಡುವುದು! ಸಂಸತ್ತಿನ ವ್ಯರ್ಥಗೊಂಡಿರುವ ಸಮಯದ ವೆಚ್ಚವನ್ನು ಇಂತಹ ಸಂಸದರಿಂದ ವಸೂಲು ಮಾಡಬೇಕು!