ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣವಾಗಲು ಸಕ್ಷಮ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಮೋಹನಜಿ ಭಾಗವತ

ಭಾರತಕ್ಕೆ ಅದರ ಕ್ಷಮತೆ ಹೆಚ್ಚಿಸುವ ಅವಶ್ಯಕತೆ ಇದೆ. ನಮ್ಮ ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣ ಆಗಬಹುದು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ. ಪೂ. ಮೋಹನಜಿ ಭಾಗವತ ಇವರು ಹೇಳಿಕೆ ನೀಡಿದರು.

ಕಲಬುರ್ಗಿ ಜಿಲ್ಲೆಯ ಗಾಣಗಾಪುರ ಕ್ಷೇತ್ರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸನಾತನ ನಿರ್ಮಿತ ಗ್ರಂಥಗಳ ಪ್ರದರ್ಶನ

ಕಲಬುರ್ಗಿ ಜಿಲ್ಲೆಯ ಗಾಣಗಾಪುರ ಕ್ಷೇತ್ರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸನಾತನ ಸಂಸ್ಥೆ ವತಿಯಿಂದ ದಿನಾಂಕ ಆಗಸ್ಟ್ 13, 2023 ರ ಭಾನುವಾರ ದೀಪಪ್ರಜ್ವಲನೆಯೊಂದಿಗೆ ಗ್ರಂಥ ಪ್ರದರ್ಶನ ಪ್ರಾರಂಭಿಸಲಾಯಿತು. ಗಾಣಗಾಪುರದ ಹಿರಿಯ ಪುರುಹಿತರಾದ ಶ್ರೀ. ಚಂದ್ರವಿಲಾಸ ಪೂಜಾರಿರವರು ದೀಪಪ್ರಜ್ವಲನೆ ಮಾಡಿದರು.

ಚಂದ್ರನ ಅತಿ ಹತ್ತಿರ ತಲುಪಿದ ಭಾರತದ ಐತಿಹಾಸಿಕ ಚಂದ್ರಯಾನ-3 !

ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ‘ಚಂದ್ರಯಾನ-3’ ಈಗ ಚಂದ್ರನ ಅತಿ ಹತ್ತಿರ ತಲುಪಿದೆ. ಭಾರತೀಯ ‘ಇಸ್ರೋ’ ಆಗಸ್ಟ್ 14 ರ ಬೆಳಗ್ಗೆ 11:30 ರಿಂದ 12:30 ರ ಸಮಯದಲ್ಲಿ ‘ಚಂದ್ರಯಾನ-3’ ಚಂದ್ರನೊಂದಿಗಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ.

ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಬಾರದು !

ಹಿಂದಿನ ಭಾಜಪ ಆಡಳಿತ ಸರಕಾರವು ರಾಜ್ಯದಲ್ಲಿ ಮತಾಂತರ ನಿಷೇಧ ಹಾಗೆಯೇ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಿತ್ತು. ಅದನ್ನು ಸದ್ಯದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಬಾರದು ಹಾಗೆಯೇ ಅದರ ತೀವ್ರತೆನ್ನೂ ಕಡಿಮೆ ಮಾಡಬಾರದು ಎಂಬ ಮನವಿಯನ್ನು ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಮಾಡಲಾಯಿತು.

ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡುವವರ ಶಿರಚ್ಛೇದ ಬೆದರಿಕೆ ಹಾಕಿದವರ ಬಂಧನ !

ಪ್ರವಾದಿ ಮುಹಮ್ಮದ್ ರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್ ನನ್ನು ರಾಜ್ಯದ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

ಕೊನೆಗೂ ಪೊಲೀಸರ ಬಲೆಗೆ ಬಿದ್ದ ದೀಪಕ್ ರಾವ್ ಕೊಲೆ ಆರೋಪಿ ಉಲ್ಲಂಜೆ ನೌಷದ್ ಅರೆಸ್ಟ್‌

ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಮೊಹಮ್ಮದ್ ನೌಷದ್ ಅಲಿಯಾಸ್ ಉಲ್ಲಂಜೆ ನೌಷದ್(28)ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ !

ಉಡುಪಿಯ ಕಾಲೇಜೊಂದರ ಶೌಚಾಲಯದ ವಿಧ್ಯಾರ್ಥಿನಿಯರ ಫೋಟೊ ತೆಗೆದ ಪ್ರಕರಣ ತಾಜಾ ಇರುವಾಗ, ಇಂತಹ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಓರ್ವ ವಿಧ್ಯಾರ್ಥಿನಿಯ “ಇನ್ ಸ್ಟಾಗ್ರಾಂ” ಖಾತೆಯನ್ನು ಹ್ಯಾಕ್ ಮಾಡಿ, ಸಂಬಂಧಪಟ್ಟ ವಿಧ್ಯಾರ್ಥಿನಿಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ.

ಹೆಂಡತಿ ತನ್ನ ಗಂಡನನ್ನು ‘ಕಪ್ಪು’ ಎಂದು ಕರೆದು ಅವಮಾನಿಸುವುದು ಕ್ರೌರ್ಯ ! – ಕರ್ನಾಟಕ ಉಚ್ಚ ನ್ಯಾಯಾಲಯ

ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ ಒಂದು ತೀರ್ಪಿನಲ್ಲಿ, ಹಂಡತಿಯು ತನ್ನ ಗಂಡನನ್ನು ಕಪ್ಪು ಎಂದು ಕರೆದು ಅವಮಾನಿಸುವುದು ಕ್ರೌರ್ಯ ಎಂದು ಹೇಳಿದೆ. ಇದರ ಆಧಾರದ ಮೇಲೆ ವಿಚ್ಛೇದನ ನೀಡಬಹುದು ಎಂದು ಪ್ರತಿಕ್ರಿಯಿಸಿ ಉಚ್ಚ ನ್ಯಾಯಾಲಯ ದಂಪತಿಯೊಂದರ ವಿಚ್ಛೇದನೆಗೆ ಒಪ್ಪಿಗೆ ನೀಡಿದೆ.

ಪ್ರಖರ ಹಿಂದುತ್ವನಿಷ್ಠ ರಶ್ಮಿ ಸಾಮಂತ ಅವರ ‘ಎ ಹಿಂದೂ ಇನ್ ಆಕ್ಸ್‌ಫರ್ಡ್’ ಪುಸ್ತಕದ ಲೋಕಾರ್ಪಣೆ !

ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಬಯಲಿಗೆ ಎಳೆಯುವ ಪ್ರಯತ್ನಕ್ಕೆ ಹಿಂದುದ್ವೇಷಿ ಜಮಾತ್ ವಿರೋಧಿಸುವುದರಲ್ಲಿ ಆಶ್ಚರ್ಯವೇನಿದೆ ? ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಕಾರ್ಯ ಮಾಡುತ್ತಿರುವ ರಶ್ಮಿ ಸಾಮಂತ್ ಇವರಂತಹ ಹಿಂದುತ್ವನಿಷ್ಠರನ್ನು ಬೆಂಬಲಿಸಲು ಹಿಂದೂಗಳು ದೃಢವಾಗಿ ಅವರೊಂದಿಗೆ ನಿಲ್ಲಬೇಕಾಗಿದೆ !

10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕ್ರೈಸ್ತ ಮುಖ್ಯೋಪಾಧ್ಯಾಪಕನ ಬಂಧನ !

ವರ್ತೂರಿನ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ‘ಬೆಥೆಲ್ಸ್ ಬ್ಯಾಪ್ಟಿಸ್ಟ್ ಅಕಾಡೆಮಿ’ ಶಾಲೆಯ ಮುಖ್ಯೋಪಾಧ್ಯಾಪಕ ಲ್ಯಾಬರ್ಟ್ ಪುಷ್ಪರಾಜ್ (ವಯಸ್ಸು 65) ಅವರನ್ನು ಪೊಲೀಸರು ಬಂಧಿಸಿದ್ದಾರೆ.