
ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕಳೆದ 3 ದಿನಗಳ ಹಿಂದೆ ನಡೆದ ಗಲಭೆಯು ಒಂದು ಷಡ್ಯಂತ್ರವಾಗಿರುವ ಎಲ್ಲ ಕುರುಹುಗಳು ಗೋಚರಿಸುತ್ತಿವೆ. ಮತಾಂಧರ ಅಟ್ಟಹಾಸಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ! ಅನೇಕ ಬಡ ಜನರ ಆಸ್ತಿ ಪಾಸ್ತಿಗಳ ಮೇಲೆ ಅಪಾರ ಹಾನಿಯುಂಟಾಗಿದ್ದು ಅಲ್ಲಿನ ಜನರು 3 ದಿನಗಳಿಂದ ದುಃಖದ ಮಡಲಿನಲ್ಲಿದ್ದಾರೆ, ಈ ಎಲ್ಲ ಘಟನೆಗಳಿಗೆ ಹೊಣೆ ಯಾರು ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಶಿವಮೊಗ್ಗದಲ್ಲಿ ಪ್ರತಿವರ್ಷವೂ ಈ ವೇಳೆ ಗಲಭೆಯುಂಟಾಗುವುದು ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುವುದು ಜಾರಿಯಲ್ಲಿದ್ದು ಆಡಳಿತದ ಸಂಪೂರ್ಣ ದುರ್ಲಕ್ಷ್ಯ, ಮತಾಂಧರ ಓಲೈಕೆ ಮಾಡುವ ಪ್ರಯತ್ನವು ಕಾಣುತ್ತಿದೆ.
ಶಿವಮೊಗ್ಗವು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವೆಂದು ತಿಳಿದಿದ್ದೂ ‘ಇದು ಸಣ್ಣ ಘಟನೆ’ ಎಂದು ಉನ್ನತ ಸ್ಥಾನದಲ್ಲಿರುವ ಗೃಹ ಸಚಿವರು ಹೇಳುತ್ತಾರೆ, ಪೊಲೀಸರ ಮೇಲೆ ಕಲ್ಲು ಹೊಡೆಯುವುದು ಸಣ್ಣ ಘಟನೆಯೇ ? ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ. ಒಟ್ಟಾರೆ ಸಮಾಜಕ್ಕೆ ಕಂಟಕ ತರುವ ಅತ್ಯಂತ ಗಂಭೀರ ಘಟನೆಗಳು ನಡೆದ ಮೇಲೂ ನಾಯಕರ ನಿರ್ಲಕ್ಷ್ಯತನದ ಹೇಳಿಕೆಗಳು ರಾಜ್ಯದ ರಕ್ಷಣೆಗೆ ಕುತ್ತು ತರುವಂತಿದೆ. ಹಾಗಾಗಿ ಆರೋಪಿಗಳನ್ನು ಬಂಧಿಸುವುದಕ್ಕೆ ಮಾತ್ರ ಸೀಮಿತ ಮಾಡದೆ ಕೂಡಲೇ ಸರಕಾರವು ಈ ಘಟನೆಯನ್ನು ಎಸ್ಐಟಿ ತನಿಖೆಗೆ ಒಳಪಡಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ ಮತಾಂಧರ ಮನೆಗಳನ್ನು ಮುಟ್ಟುಗೋಲು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್