ಪುನಿತ ಕೆರೆಹಳ್ಳಿ ಇವರ ಉಪವಾಸ ಸತ್ಯಾಗ್ರಹಕ್ಕೆ ಆತ್ಮಹತ್ಯೆಗೆ ಯತ್ನ ಎಂದು ದೂರು ದಾಖಲು !

ಬೆಂಗಳೂರು – ಹಿಂದುತ್ವನಿಷ್ಠ ಸಂಘಟನೆಯಾದ ‘ರಾಷ್ಟ್ರ ರಕ್ಷಣಾ ಪಡೆ’ಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಇವರ ವಿರುದ್ಧ ಪೊಲೀಸರು ಬೇರೆಬೇರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಯ ಪ್ರಯತ್ನ ಮತ್ತು ಕಾನೂನು ವ್ಯವಸ್ಥೆಯಲ್ಲಿ ತೊಂದರೆ ನಿರ್ಮಾಣ ಮಾಡುವುದು ಎಂದು ದೂರು ದಾಖಲಿಸಿದ್ದಾರೆ. ಗೂಂಡಾ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದರಿಂದ ಕೆರೆಹಳ್ಳಿ ಇವರು ಇಲ್ಲಿಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಮಾಡುಟ್ಟಿರುವಾಗ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ‘ಕೆರೆಹಳ್ಳಿ ಇವರು ಉಪವಾಸ ಸತ್ಯಾಗ್ರಹ ಮಾಡಿರುವುದರಿಂದ ಅವರ ಮೇಲೆ ಆತ್ಮಹತ್ಯೆಯ ಯತ್ನದ ದೂರು ದಾಖಲಿಸಿದ್ದರೆ’, ಎಂದು ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ ೭ ರಂದು ಹಿಂದೂ ಸಂಘಟನೆ ಮತ್ತು ಭಾಜಪದ ಕಾರ್ಯಕರ್ತರ ಎದುರು ಪುನೀತ ಕೆರೆಹಳ್ಳಿ ಇವರನ್ನು ‘ಸರಕಾರಿ ಬಸ್ಸಿಗೆ ಬೆಂಕಿ ಹಚ್ಚಿರುವುದು ಮತ್ತು ವಿಧಾನಸಭೆಯ ಮೇಲೆ ಕಲ್ಲು ತೂರಾಟ ಮಾಡುವೆನು’, ಎಂದು ತಥಾಕಥಿತ ಹೇಳಿಕೆ ನೀಡಿದ್ದಾರೆಂದು ಅವರ ಮೇಲೆ ಗೂಂಡಾ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.

ಈ ಹಿಂದೆ ಕೆರೆಹಳ್ಳಿ ಇವರ ವಿರುದ್ಧ ಇದೇ ರೀತಿಯ ದೂರು ದಾಖಲಿಸಿ ಬಂಧಿಸಲಾಗಿತ್ತು. ಆ ಸಮಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧನಕ್ಕೆ ಸಾಕಷ್ಟು ಸಾಕ್ಷಿ ಇಲ್ಲದೆಂದು ಹೇಳುತ್ತಾ ಕೆರೆಹಳ್ಳಿ ಇವರನ್ನು ಬಿಡುಗಡೆಗೊಳಿಸುವ ಆದೇಶ ನೀಡಿತ್ತು.