ಬೆಂಗಳೂರು – ಗಗನಯಾನ ಕಾರ್ಯಕ್ರಮದ ಅನ್ವಯ ಭಾರತದಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’ದಿಂದ)ಯಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ‘ಕ್ರೂ ಎಸ್ಕೇಪ್ ಸಿಸ್ಟಮ್’ ಪರೀಕ್ಷಣೆ ನಡೆಯಲಿದೆ. ‘ಕ್ರೂ ಎಸ್ಕೇಪ್ ಸಿಸ್ಟಮ್’ ಅಂದರೆ ಗಗನಯಾನ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದರೆ ರಾಕೆಟ್ ಮೂಲಕ ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಯನ್ನು ತಲುಪಬಹುದಾದ ವ್ಯವಸ್ಥೆ.
ಈ ಪರೀಕ್ಷೆಯ ಬಗ್ಗೆ ಇಸ್ರೋದ ವಿಜ್ಞಾನಿ ಹಾಗೂ ‘ಇಸ್ರೋ ಇನರ್ಷಿಯಲ್ ಸಿಸ್ಟಮ್ಸ್ ಯುನಿಟ್’ನ ನಿರ್ದೇಶಕರಾದ ಪದ್ಮಾ ಕುಮಾರ ರವರು ಮಾತನಾಡುತ್ತ, ಕ್ರೂ ಎಸ್ಕೇಪ ಸಿಸ್ಟಂ ಗಗನಯಾತ್ರಿಗಳನ್ನು ರಾಕೆಟನಿಂದ ದೂರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಈ ವ್ಯವಸ್ಥೆಯನ್ನು ಪರೀಕ್ಷಿಸಲು ಪರೀಕ್ಷಾ ವಾಹನವನ್ನು ಸಿದ್ಧಪಡಿಸಲಾಗಿದೆ. ಗಗನಯಾನ ಕಾರ್ಯಕ್ರಮದ ಮೊದಲ ಮಾನವರಹಿತ ಕಾರ್ಯಕ್ರಮವನ್ನು ಮುಂದಿನ ವರ್ಷದ ಆರಂಭದಲ್ಲಿ ಕೈಗೊಳ್ಳಲಾಗುವುದು. ಮಾನವರಹಿತ ಯೋಜನೆ ಅಂದರೆ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸಲಾಗುವುದಿಲ್ಲ. ಮಾನವ ರಹಿತ ಕಾರ್ಯಕ್ರಮದ ಯಶಸ್ಸಿನ ಬಳಿಕ ಮಾನವ ಸಹಿತ ಯೋಜನೆ ಇರಲಿದೆ, ಇದರಲ್ಲಿ ಮಾನವರು ಬಾಹ್ಯಾಕಾಶಕ್ಕೆ ಹೋಗುತ್ತಾರೆ, ಎಂದು ಹೇಳಿದರು.
3 ಗಗನಯಾತ್ರಿಗಳು 400 ಕಿಮೀ ದೂರದ ವರೆಗೆ ಹೋಗಿ 3 ದಿನಗಳಲ್ಲಿ ಹಿಂತಿರುಗುವರು!
`ಗಗನಯಾನ’ದಲ್ಲಿ 3-ಸದಸ್ಯರ ತಂಡವನ್ನು 3 ದಿನಗಳ ಕಾರ್ಯಾಚರಣೆಗಾಗಿ ಭೂಮಿಯ 400 ಕಿಮೀ ಮೇಲಿನ ಕಕ್ಷೆಗೆ ಕಳುಹಿಸಲಾಗುತ್ತದೆ. ಅನಂತರ ಅವರ ಯಾನವನ್ನು ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಗುವುದು. ಒಂದು ವೇಳೆ ಭಾರತವು ಈ ಯೋಜನೆಯಲ್ಲಿ ಯಶಸ್ವಿಯಾದರೆ ಭಾರತವು ಇದನ್ನು ಸಾಧಿಸಿರುವ ನಾಲ್ಕನೇ ರಾಷ್ಟ್ರವಾಗಲಿದೆ. ಈಗಾಗಲೇ ಅಮೇರಿಕಾ, ಚೀನಾ ಮತ್ತು ರಷ್ಯಾ ಇದನ್ನು ಸಾಧಿಸಿವೆ. ಗಗನಯಾನ ಕಾರ್ಯಕ್ರಮಕ್ಕಾಗಿ ಸುಮಾರು 9 ಸಾವಿರ ಕೋಟಿ ರೂಪಾಯಿಗಳ ತಗುಲಬಹುದು ಎಂದು ಅಂದಾಜು ಮಾಡಲಾಗಿದೆ.
Mission Gaganyaan:
ISRO to commence unmanned flight tests for the Gaganyaan mission.Preparations for the Flight Test Vehicle Abort Mission-1 (TV-D1), which demonstrates the performance of the Crew Escape System, are underway.https://t.co/HSY0qfVDEH @indiannavy #Gaganyaan pic.twitter.com/XszSDEqs7w
— ISRO (@isro) October 7, 2023