ಶಿವಮೊಗ್ಗ ಗಲಭೆಯ ಪ್ರಕರಣ
ಶಿವಮೊಗ್ಗ – ಇಲ್ಲಿಯ ಈದ್ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಸಮಯದಲ್ಲಿ ನಡೆದಿರುವ ಕಲ್ಲು ತೂರಾಟ ನಂತರ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹಾಗೂ ಪೊಲೀಸರ ಮೇಲೆ ಕೂಡ ಕಲ್ಲು ತೂರಾಟ ಮಾಡಿದ್ದರು. ಕೆಲವು ಹಿಂದೂಗಳ ಮನೆಗೆ ನುಗ್ಗಿ ವಿಧ್ವಂಸಕ ಕೃತ್ಯ ಕೂಡ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಂದ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಇದರ ಸಂದರ್ಭದಲ್ಲಿ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಪೊಲೀಸರಿಗೆ ಓರ್ವ ಮಹಿಳೆ ಪ್ರಶ್ನೆ ಕೇಳುತ್ತಿದ್ದು ಪೊಲೀಸರು ಮೌನವಾಗಿ ಇರುವುದು ಕಾಣುತ್ತಿದೆ.
(ಸೌಜನ್ಯ – NewsFirst Kannada)
ವಿಡಿಯೋದಲ್ಲಿ ಹಿಂದೂ ಮಹಿಳೆ ಪೊಲೀಸರಿಗೆ, ‘ದಯವಿಟ್ಟು ನಮಗೆ ನ್ಯಾಯ ನೀಡಿ. ಮನೆಗೆ ನುಗ್ಗಿ ವಿಧ್ವಂಸ ಮಾಡಿದ್ದಾರೆ. ಇದಕ್ಕೆ ಜವಾಬ್ದಾರರು ಯಾರು ? ಬಂದು ನೋಡಿ ನಮಗೆ ಬದುಕಲು ಆಗುವುದಿಲ್ಲ. ನಾವು ಬದುಕಬಾರದೆ ? ಹಿಂದೂಗಳು ಇಲ್ಲಿ ವಾಸಿಸಬಾರದು ಎಂದರೆ ಎಲ್ಲಿಗೆ ಹೋಗಬೇಕು ? ಎಲ್ಲರೂ ಸಾಯಬೇಕೇ ? ಪೊಲೀಸರಿಗೆ ಕರೆದರೆ ಅವರು ದೂರ ಹೋಗಿ ನಿಲ್ಲುತ್ತಾರೆ. ಅವರು ನಮಗೆ ಹೊಡೆದರು, ಇದಕ್ಕೆ ಕಾರಣ ಏನು ? ನಮ್ಮ ರಕ್ಷಣೆಗಾಗಿ ಇದ್ದೀರಾ ಅಲ್ಲವೇ ? ಹಿಂದೂಗಳ ರಕ್ಷಣೆ ಮಾಡುವುದಿಲ್ಲ; ಆದರೆ ಮುಸಲ್ಮಾನರಿಗೆ ರಕ್ಷಣೆ ನೀಡುತ್ತೀರೆ. ನಮ್ಮ ಮನೆಗೆ ಬಂದು ನೋಡಿ ಹೇಗೆ ಆಗಿದೆ. (ವಿಧ್ವಂಸ ಆಗಿರುವುದು) ಇಲ್ಲಿ ಹೇಗೆ ಮಹಿಳೆ ವಾಸಿಸಬೇಕು ? ನಾವು ಹೇಗೆ ಬದುಕಬೇಕು ? ನಮ್ಮಲ್ಲಿ ಶೂರ ಪೊಲೀಸರು ಯಾರು ಇಲ್ಲವೇ ? ಎಂದು ಮಹಿಳೆಯು ಪ್ರಶ್ನೆ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Eid Milad procession with display of swords and glorifying Aurangzeb and Tipu Sultan in Shivamogga, Karnataka sparks violence !
Even Police were chased and attacked !
State Home Minister says nothing new in such incidents!
Read more:https://t.co/J12yV1MF8B#HindusUnderAttack pic.twitter.com/UpWYTkqMFn
— HJS Karnataka (@HJSKarnataka) October 3, 2023