ಚಿಕ್ಕಮಗಳೂರಿನ ಪ್ರಸಿದ್ಧ ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ

ತಾಲೂಕಿನ ಪ್ರಸಿದ್ಧ ದೇವೀರಮ್ಮ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು, ದರ್ಶನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ತಿಳಸಿದೆ.

ದೇವತೆಗಳ ಕುರಿತು ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನ ಬಂಧನ

ಇನ್ ಸ್ಟಾಗ್ರಾಂನಲ್ಲಿ ದೇವತೆಗಳ ಕುರಿತು ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಿಕರ್ನಕಟ್ಟೆಯ ಹಿಲ್ ರೋಡ್ ನಿವಾಸಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಯನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆ : ಆರೋಪಿ ಅಫ್ರೀದ್ ಖಾನ್ ಬಂಧನ

ಅಫ್ರೀದ್ ಪೊಲೀಸರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಇದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಶಿವಪ್ರಸಾದ ಇವರ ಎಡಗೈನ ಬೆರಳಿಗೆ ಗಾಯವಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆಯಿಂದ ನಗರದ ಪುರಾತನ ಜಲಕಂಠೇಶ್ವರ ದೇವಾಲಯಕ್ಕೆ ಹಾನಿ !

ಮಹಾನಗರ ಪಾಲಿಕೆಯು ಸರಕಾರಿ ಭೂಮಿಯಲ್ಲಿ ಅತಿಕ್ರಮಣವನ್ನು ಕೆಡವುತ್ತಿರುವಾಗ ಎಸ್.ಪಿ. ಮಾರ್ಗದಲ್ಲಿದ್ದ 600 ವರ್ಷಗಳಷ್ಟು ಪುರಾತನ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನೂ ಹಾನಿಯನ್ನುಂಟು ಮಾಡಿದ್ದಾರೆ.

ಮಹಿಳೆಯರು ಜಾಗೃತವಾಗದಿದ್ದರೆ ಕರ್ನಾಟಕದ ಫಾಯಿಲ್ಸಗಳೂ ಇರುತ್ತವೆ – ಶ್ರೀ. ಸಂದೀಪಜಿ (ಗುರೂಜಿ), ರಾಜ್ಯ ವಕ್ತಾರರು, ಹಿಂದೂ ರಾಷ್ಟ್ರ ಸೇನೆ

ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಮನುಕುಲಕ್ಕೆ ನಾಚಿಕೆಗೇಡಿನ ಹಾಗೂ ನೋವಿನ ಘಟನೆಯಾಗಿದೆ, ಈಗ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಆದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಏಕೆಂದರೆ ಈಗ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಕೇರಳ ಫೈಲ್ಸ್‌ದಂತೆಯೇ ಉಡುಪಿ ಫಾಯಿಲ್ಸ ಸಹ ಬರಬಹುದು

ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ !

RSS ನ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅಕ್ಷೇಪಾರ್ಹ ಬರಹಗಳನ್ನು ಪೋಸ್ಟ ಮಾಡಲಾಗಿದೆ, ಎಂದು ಹೇಳಿ ಕಿಡಿಗೇಡಿಗಳ ವಿರುದ್ಧ ಮಂಗಳೂರು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಬಂಟ್ವಾಳದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಅಬ್ದುಲ್ ಸಲೀಂ ಬಂಧನ

ಇಲ್ಲಿಯ ನಂದಾಪುರ ಜಂಕ್ಷನ್ ಬಳಿ ಅಬ್ದುಲ್ ಸಲೀಂ (32 ವರ್ಷ) ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಇದರಿಂದ ಬೇಸತ್ತ ಸಾರ್ವಜನಿಕರು ಸ್ಥಳಿಯ ಪೊಲೀಸರಿಗೆ ದೂರು ನೀಡಿದರು. ಬಳಿಕ ಬಂಟ್ವಾಳ ನಗರ ಪೊಲೀಸ್ ಎಸ್.ಐ. ರಾಮಕೃಷ್ಣ ಇವರ ನೇತೃತ್ವದಲ್ಲಿ ಆರೋಪಿಯನ್ನು ನಂದಾವರದಲ್ಲಿ ಬಂಧಿಸಿದರು.

ರಾಜ್ಯದಲ್ಲಿ ಮಹಿಳೆಯರಿಗೆ ಸರಕಾರಿ ಬಸ್ಸುಗಳ ಉಚಿತ ಪ್ರಯಾಣದಿಂದ ದತ್ತಿ ಇಲಾಖೆಯ ದೇವಸ್ಥಾನಗಳ ಆದಾಯದಲ್ಲಿ ಏರಿಕೆ !

ಈ ಹೆಚ್ಚಿದ ಆದಾಯವನ್ನು ಸರಕಾರ ಯಾವುದಕ್ಕೆ ಬಳಸುತ್ತದೆ ?, ಎಂಬುದು ಜನರಿಗೆ ಹೇಳಬೇಕು !

ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ ಖಾದರ್ ಇವರು ಸಂಪೂರ್ಣ ಪ್ರಕರಣ ‘ಪ್ಯ್ರಾಂಕ್’ ಎಂದು ಹೇಳಿ ನಿರ್ಲಕ್ಷಿಸಲು ಹೇಳಿದರು !

ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ಕಮಲಾಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಲ್ಲ ಎಂದು ಬಸ್ ಹತ್ತಲು ಬಿಡದ ಚಾಲಕ !

ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಖಾ ಧರಿಸದೇ ಇದ್ದರಿಂದ ಬಸ್ ಚಾಲಕನೊಬ್ಬ ಬಸ್ ಹತ್ತಿಕೊಳ್ಳಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅದರಲ್ಲಿ ಚಾಲಕನು, `ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡರೆ ಮಾತ್ರ ಬಸ್‌ನಲ್ಲಿ ಹತ್ತಿಸಿಕೊಳ್ಳಲಾಗುವುದು’ ಎಂದು ಹೇಳುತ್ತಿದ್ದಾನೆ.