ಸನಾತನ ಧರ್ಮವನ್ನು ಕೆಣಕಬೇಡಿ, ಇಲ್ಲವಾದರೆ ಮಣಿಪುರದ ಸ್ಥಿತಿ ನಿರ್ಮಾಣವಾಗುವುದು ! – ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಎಚ್ಚರಿಕೆ !

ಧಾರವಾಡ – ಸನಾತನ ಧರ್ಮವನ್ನು ವಿರೋಧಿಸುವುದು ಯೋಗ್ಯವಲ್ಲ. ಒಮ್ಮೆ ಅಗ್ನಿ ಹೊತ್ತಿದರೆ ಆರಲು ಸಮಯ ಬೇಕಾಗುತ್ತದೆ. ಮಣಿಪುರ ರಾಜ್ಯವು ಇದರ ಪ್ರತ್ಯಕ್ಷ ಉದಾಹರಣೆಯಾಗಿದೆ. ಸನಾತನವನ್ನು ಕೆಣಕಿದರೆ ರಾಜ್ಯದಲ್ಲಿ ಮಣಿಪುರದಂತಹ ಸ್ಥಿತಿ ನಿರ್ಮಾಣವಾಗುವುದು, ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಎಚ್ಚರಿಕೆ ನೀಡಿದರು. ಅವರು ಶಿವಮೊಗ್ಗದಲ್ಲಿನ ರಾಗಿಗುಡ್ಡದಲ್ಲಿ ನಡೆದಿರುವ ಗಲಭೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಮಂಡಿಸಿರುವ ಅಂಶಗಳು

ಸರಕಾರವು ಕ್ರಮ ಕೈಗೊಳ್ಳಬೇಕು !

ಮನೆಮನೆಗಳ ಮೇಲೆ ಕಲ್ಲು ತೂರಾಟ ನಡೆಸುವ ಮತ್ತು ತಲವಾರನಿಂದ ಹೊಡೆಯುವ ಘಟನೆಗಳು ಕ್ಷುಲ್ಲಕವಾಗಿವೆಯೇ ? ಅದನ್ನು ಯಾರೂ ಕ್ಷುಲ್ಲಕ ಎಂದು ತಿಳಿಯಬಾರದು. ಗಲಭೆಯನ್ನು ಬೇರು ಸಹಿತ ತಡೆಯಬೇಕು. ಅದಕ್ಕಾಗಿ ಸರಕಾರವು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು.

(ಸೌಜನ್ಯ – Edens News)

ಎಲ್ಲರೂ ನಮ್ಮವರೇ ಎಂಬ ಭಾವನೆ ಇರಬೇಕು !

ರಾಜಕಾರಣಿಗಳು ಒಂದೇ ಪಕ್ಷಕ್ಕೆ ಸೀಮಿತವಾಗಿರಬಾರದು. ಸಮಾಜದಲ್ಲಿನ ಎಲ್ಲರ ಸುಖ ಶಾಂತಿಗಾಗಿ ಯೋಗ್ಯವಾದ ಸೂತ್ರಗಳನ್ನು ರೂಪಿಸಬೇಕು. ಎಲ್ಲರೂ ಸಮಾನರು. ಎಲ್ಲರೂ ನಮ್ಮವರೇ ಎಂಬ ಭಾವನೆಯಿರಬೇಕು. ಎಲ್ಲರ ಸುಖ ವೃದ್ಧಿಗಾಗಿ ಬೇಕಾಗಿರುವ ಕಾರ್ಯ ನಡೆಯಬೇಕು. ನಮ್ಮ ಸಂತೋಷದ ಪ್ರಯತ್ನದಲ್ಲಿ ಇತರರಿಗೆ ದುಃಖವಾಗಬಾರದು. ಎಲ್ಲರೂ ಸಮಾಧಾನದಿಂದ ಇರಬೇಕು.

ಎಲ್ಲರೂ ಸುಖ ಸಮಾಧಾನದಿಂದ ಇರಲು ಬಳಸಿರುವ ನೀತಿ ಮತ್ತು ನಿಯಮವೇ ಸನಾತನ ಧರ್ಮ !

ಧರ್ಮ ಎಂದರೆ ಸಮಾಜವನ್ನು ನಿರಂತರವಾಗಿ ಮುಂದೆ ಕೊಂಡೊಯ್ಯುವ ಜೀವನದ ಸೂತ್ರವಾಗಿದೆ. ಎಲ್ಲರೂ ಸುಖ ಮತ್ತು ಸಮಾಧಾನದಿಂದ ಇರಲು ಬಳಸಿರುವ ನೀತಿ ಮತ್ತು ನಿಯಮಗಳೇ ಸನಾತನ ಧರ್ಮವಾಗಿದೆ. ಎಲ್ಲರಿಗೂ ಸುಖ ದೊರೆಯಲು ನಾವು ಪ್ರಯತ್ನಿಸಬೇಕು. ಮಳೆ ಬಂದರೆ ಅದು ಸಂಪೂರ್ಣ ಗ್ರಾಮದಲ್ಲಿ ಬರುತ್ತದೆ. ಹಾಗೆಯೇ ಸುಖವು ಎಲ್ಲರಿಗೂ ಸಮಾಧಾನದಿಂದ ಬದುಕಲು ಬಿಡುತ್ತದೆ. ನಾವು ಇನ್ನೊಬ್ಬರ ಸುಖದ ಕಾಮನೆ ಮಾಡಿದಾಗಲೇ ನಾವೂ ಸುಖವಾಗಿರುವುದು.