ಪೋಲೀಸರು ೬ ವಾಹನಗಳಿಂದ ೧೮ ಟನ್ ಗೋಮಾಂಸ ವಶಪಡಿಸಿಕೊಂಡರು !
ಬೆಂಗಳೂರು – ಪೋಲೀಸರು ದೊಡ್ಡಬಳ್ಳಾಪುರದಲ್ಲಿ ಆಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ೭ ಜನರನ್ನು ಬಂಧಿಸಿದ್ದಾರೆ. ಅವರಿಂದ ೬ ವಾಹನಗಳಲ್ಲಿನ ೧೮ ಟನ್ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರೀರಾಮಸೇನೆ ಕಾರ್ಯಕರ್ತರು ಗೋಮಾಂಸವನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದರು. ಗೋಮಾಂಸ ಪತ್ತೆಯಾದನಂತರ ಕಾರ್ಯಕರ್ತರು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಆನಂತರ ಪೋಲೀಸರು ಇಲ್ಲಿಗೆ ತಲುಪಿದರು. ಪೋಲೀಸರು ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೪ ಜನರನ್ನು ಬಂಧಿಸಿದ್ದಾರೆ.
ಶ್ರೀರಾಮಸೇನೆಯ ಪ್ರಧಾನ ಕಾರ್ಯದರ್ಶಿ ಸುಂದರೇಶ ನಾಗರಲ ಅವರು “ಟೋಲಗೇಟ್ ಮೂಲಕ ಗೋಮಾಂಸ ಸಾಗಿಸುವ ವಾಹನಗಳಿಗೆ ಪೋಲೀಸರು ಅವಕಾಶ ನೀಡಿದ್ದರು”, ಎಂದು ಆರೋಪಿಸಿದ್ದಾರೆ. ಹಾಗೆಯೇ ಅವರು ನಮ್ಮ ಕಾರ್ಯಕರ್ತರನ್ನು ಏಕೆ ಬಂಧಿಸಿದರು ?, ಎಂದು ಪ್ರಶ್ನಿಸಿದ್ದಾರೆ.
ಉದ್ರಿಕ್ತರಿಂದ ಧಗಧಗಿಸಿದ ಕಾರ್..5 ವಾಹನ..7 ಜನ..15 ಟನ್ ಗೋಮಾಂಸ..!#Beef #Doddaballapur #SriRamSenaActivistshttps://t.co/efCPhU4m82
— Asianet Suvarna News (@AsianetNewsSN) September 25, 2023
ಸಂಪಾದಕೀಯ ನಿಲುವುಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಗೋಮಾಂಸ ಕಳ್ಳ ಸಾಗಾಣಿಕೆದಾರರು ಸಿಕ್ಕಿ ಹಾಕಿಕೊಳ್ಳುತ್ತಾರೆ, ಎಲ್ಲಾ ವ್ಯವಸ್ಥೆ ಇರುವ ಪೋಲೀಸರಿಗೆ ಏಕೆ ಸಿಗುವುದಿಲ್ಲ ? ಅವರು ಹಣ ಪಡೆದು ಅದರತ್ತ ನಿರ್ಲಕ್ಷಿಸುತ್ತಾರೆಯೇ ? |