ಶಿವಮೊಗ್ಗದಲ್ಲಿ ಈದ ಮೆರವಣಿಗೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆಸಿದ ನಂತರ ಮುಸಲ್ಮಾನರಿಂದ ಹಿಂದುಗಳ ಮನೆಯ ಮೇಲೆ ಕಲ್ಲು ತೂರಾಟ !

  • ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹಿಡಿತಕ್ಕೆ ತಂದರು !

  • ನಿಷೇಧಾಜ್ಞೆ ಜಾರಿ !

  • ಟಿಪ್ಪು ಸುಲ್ತಾನ್ ಹಿಂದೂ ಯೋಧನ ಹತ್ಯೆ ಮಾಡುತ್ತಿರುವ ಹೋರ್ಡಿಂಗ್ಸ್ಅನ್ನು ಪೊಲೀಸರು ಮುಚ್ಚಿದರು !

ಬೆಂಗಳೂರು – ಶಿವಮೊಗ್ಗದ ಶಾಂತಿನಗರ ಪ್ರದೇಶದಲ್ಲಿ ರಾತ್ರಿ ಮುಸಲ್ಮಾನರು ಈದ್ ಪ್ರಯುಕ್ತ ನಡೆಸಿದ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ ನಂತರ ಇಲ್ಲಿಯ ಹಿಂದುಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಆ ಸಮಯದಲ್ಲಿ ಪೊಲೀಸರಿಗೆ ಲಾಟಿಚಾರ್ಜ್ ಮಾಡಬೇಕಾಯಿತು. ಅದರ ನಂತರ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಯಿತು. ಈಗ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ ಮಾಡಲಾಗಿದೆ. ಈದ್ ಮೆರವಣಿಗೆ ಇಲ್ಲಿಯ ರಾಗಿ ಗುಡ್ಡ ಪ್ರದೇಶದಲ್ಲಿ ತಲುಪಿದ ನಂತರ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಮುಸಲ್ಮಾನರು ಟಿಪ್ಪು ಸುಲ್ತಾನನ ಫಲಕ ಹಾಕಿದ್ದರು.

(ಸೌಜನ್ಯ – Tv9 Kannada)

ಇದರಲ್ಲಿ ಟಿಪ್ಪು ಸುಲ್ತಾನ್ ಒಬ್ಬ ಹಿಂದೂ ಯೋಧನ ಹತ್ಯೆ ಮಾಡುತ್ತಿರುವುದು ತೋರಿಸಲಾಗಿತ್ತು. ಪೊಲೀಸರು ಈ ಫಲಕವನ್ನು ಬಟ್ಟೆಯಿಂದ ಮುಚ್ಚಿದರು. ಈ ಘಟನೆಯಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆದ್ದರಿಂದ ಪೊಲೀಸರು ಹೆಚ್ಚಿನ ಪಡೆಯನ್ನು ತರಿಸಲಾಗಿದೆ. ಕೆಲವು ಸಮಯದ ನಂತರ ಒಬ್ಬ ಮುಸಲ್ಮಾನ ಯುವಕನು ಈ ಫಲಕದ ಮೇಲೆ ತನ್ನ ರಕ್ತದಿಂದ ‘ಶೇರ್ ಟಿಪ್ಪು’ ಎಂದೂ ಬರೆದನು. ಇದರ ನಂತರ ಇಲ್ಲಿ ಮೆರವಣಿಗೆಗೆ ಆರಂಭವಾಯಿತು. ದುಷ್ಕರ್ಮಿಗಳು ಈ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ ನಂತರ ಮೆರವಣಿಗೆಯಲ್ಲಿ ಸಹಭಾಗಿ ಮುಸಲ್ಮಾನರು ಈ ಪ್ರದೇಶದಲ್ಲಿನ ಹಿಂದುಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಮುಸಲ್ಮಾನರ ಮೇಲೆ ಲಾಠಿ ಚಾರ್ಜ್ ಮಾಡುತ್ತಾ ಅವರನ್ನು ಚದುರಿಸಿದರು. ಈ ಲಾಠೀ ಚಾರ್ಜ ನಲ್ಲಿ ೪ ಜನರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಶಿವಮೊಗ್ಗದಲ್ಲಿ ಇಂತಹ ಘಟನೆಗಳು ಹೊಸದಾಗಿ ನಡೆಯುತ್ತಿದೆಯೆ ? (ಅಂತೆ) – ಗೃಹ ಸಚಿವ ಜಿ. ಪರಮೇಶ್ವರ್

ಈ ಘಟನೆಯ ಬಗ್ಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಇವರು ಪತ್ರಕರ್ತರ ಜೊತೆಗೆ ಮಾತನಾಡುತ್ತಿರುವಾಗ,

೧. ಈ ಪ್ರಕರಣದಲ್ಲಿ ೪ ಜನರನ್ನು ಬಂಧಿಸಲಾಗಿದೆ. ಅವರ ಹೆಸರು ಗೊತ್ತಿದ್ದರೂ ನಾನು ನಿಮಗೆ ಹೇಳುವುದಿಲ್ಲ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

೨. ಶಿವಮೊಗ್ಗದಲ್ಲಿ ಹೀಗೆ ಹೊಸದಾಗಿ ನಡೆಯುತ್ತಿದೆಯೇ ? ಘಟನೆಯನ್ನು ಹಿಡಿತಕ್ಕೆ ತರಲು ಪೊಲೀಸರು ಸಕ್ಷಮರಾಗಿದ್ದಾರೆ. ಅಲ್ಲಿ ಬಿಗುವಿನ ವಾತಾವರಣ ಇದೆ, ಇದು ತಿಳಿದಿದೆ, ಮೆರವಣಿಗೆಯು ಅಲ್ಲಿ ಬಂದ ನಂತರ ಏನಾದರೂ ನಡೆಯಬಹುದು ಇದು ತಿಳಿದಿತ್ತು, ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಗಲಭೆ ನಡೆದಿಲ್ಲ. ಅದನ್ನು ಹಿಡಿತಕ್ಕೆ ತರಲಾಗಿದೆ.

೩. ಫಲಕ, ಬಿತ್ತಿ ಪತ್ರಕಗಳು ಹಚ್ಚಿ ಗಲಭೆ ಸೃಷ್ಟಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಸಂಪೂರ್ಣ ರಾಜ್ಯದಲ್ಲಿ ಈ ರೀತಿಯ ಘಟನೆ ಘಟಿಸಿವೆ. ಅದರ ಮೇಲೆ ನಾವು ಹಿಡಿತ ಸಾಧಿಸಿದ್ದೇವೆ. ಪೊಲೀಸರು ಎರಡೂ ಕಡೆಯವರನ್ನು ಬಂಧಿಸಿದ್ದಾರೆ. ಈ ದಿನ ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಬಿಟ್ಟಿಲ್ಲ. ಎರಡು ಸಮುದಾಯಕ್ಕೆ ಎಚ್ಚರಿಕೆ ನೀಡಲಾಗಿತ್ತು. ಅದರ ಉಲ್ಲಂಘನೆ ಮಾಡಿದರೆ ಸಹಜವಾಗಿಯೇ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಎಂದು ಹೇಳಿದರು.

(ಸೌಜನ್ಯ – Asianet Suvarna News)

ಸಂಪಾದಕೀಯ ನಿಲುವು

ಹಿಂದುಗಳ ಮೇಲೆ ದಾಳಿ ಮಾಡುವುದಕ್ಕಾಗಿ ಉದ್ದೇಶಪೂರ್ವಕವಾಗಿ ಈದ್ ಮೆರವಣಿಗೆಯ ಮೇಲೆ ಕಲ್ಲು ತೂರಾಟದ ಷಡ್ಯಂತ್ರ ಮತಾಂಧ ಮುಸಲ್ಮಾನರು ರೂಪಿಸಿದ್ದರೆ ?’, ಇದರ ವಿಚಾರಣೆ ನಡೆಯಬೇಕು ?

ಫಲಕ ಮುಚ್ಚೆದರೆ ಟಿಪ್ಪು ಪ್ರೇಮಿಗಳಲ್ಲಿನ ಮತಾಂಧತೆ ನಾಶವಾಗುವುದೆ ? ಅದರ ಬದಲು ಈ ರೀತಿಯ ಪ್ರಚೋದನಕಾರಿ ಫಲಕಗಳು ಹಾಕಿರುವ ಮತಾಂಧರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಪೊಲೀಸರು ಏಕೆ ತೋರಿಸುವುದಿಲ್ಲ ?