ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ.

ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ.

ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಜನಸಂಖ್ಯಾನಿಯಂತ್ರಣ ಕಾಯ್ದೆಯ ಕರಡು ಸಿದ್ಧ !

ಉತ್ತರಪ್ರದೇಶದ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಈ ಕಾಯ್ದೆಯಿಂದ ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ, ಅವರಿಗೆ ಕೆಲಸದಲ್ಲಿ ಭತ್ಯೆ ಸಿಗುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಕಾಯ್ದೆಯ ಕರಡನ್ನು ನಿರ್ಮಿಸಲಾಗಿದೆ.

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸದ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ ! – ವಾಟ್ಸ್ ಆಪ್‍ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ `ಝಿಕಾ’ ರೋಗಾಣುವಿರುವ ರೋಗಿ !

ಝೀಕಾ ಸೋಂಕಿನ ರೋಗಿ ೮ ದಿನಗಳ ಕಾಲ ಸೋಂಕಿನ ಪ್ರಭಾವದಲ್ಲಿರುತ್ತಾನೆ. ಗರ್ಭಿಣಿಯರಿಗೆ ಝೀಕಾ ರೋಗಾಣುವಿನ ಸೋಂಕಿನ ಅಪಾಯ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಹುಟ್ಟುವ ಮಗು ವಿಕಸಿತಗೊಳ್ಳದ ಮೆದುಳಿನೊಂದಿಗೆ ಹುಟ್ಟುವ ಅಪಾಯ ಹೆಚ್ಚಿರುತ್ತದೆ.

ಎದ್ದು ಕಾಣಬೇಕಾಗಿರುವುದು ನೀವಲ್ಲ, ನಿಮ್ಮ ಕೆಲಸ – ನೂತನ ಸಚಿವರಿಗೆ ಮೋದಿ ಕಿವಿಮಾತು

ಈ ಸಭೆಯಲ್ಲಿ ಮೋದಿ ನೂತನ ಸಚಿವರಿಗೆ ಹಿಂದಿನ ಖಾತೆಯ ಸಚಿವರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಲು ತಿಳಿಸಿದರು. ‘ಮಾಜಿ ಸಚಿವರಿಂದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಲಿಕ್ಕಾಗಿಯೇ ಭೇಟಿ ನೀಡಿ’, ಎಂದು ಮೋದಿ ಹೇಳಿದರು.

ಎಲ್ಲಾ ಟ್ವೀಟ್‍ಗಳನ್ನು ‘ಡಿಲಿಟ್’ ಮಾಡಿದ ಕೇಂದ್ರದ ರಾಜ್ಯಸಚಿವ ಹಾಗೂ ಪ್ರಖರ ಹಿಂದುತ್ವನಿಷ್ಠ ಶೋಭಾ ಕರಂದ್ಲಾಜೆಯವರು !

ಜುಲೈ ೭ ರಂದು ಸಂಜೆ ಪ್ರಮಾಣವಚನ ಸಮಾರಂಭದ ಕೆಲವು ಗಂಟೆಗಳ ಹಿಂದೆ ಕರಂದ್ಲಾಜೆ ತಮ್ಮ ಟ್ವಿಟರ್ ಖಾತೆಯ ಎಲ್ಲಾ ಟ್ವೀಟ್ಸ್‍ಗಳನ್ನು ‘ಡಿಲಿಟ್’ ಮಾಡಿರುವುದು ಬೆಳಕಿಗೆ ಬಂದಿದೆ. ಕರಂದ್ಲಾಜೆ ಇವರು ಗೋಹತ್ಯೆ, ಲವ್ ಜಿಹಾದ್, ಹಿಂದೂಗಳ ಹತ್ಯೆ ಇತ್ಯಾದಿ ಘಟನೆಗಳ ಬಗ್ಗೆ ಟ್ವೀಟ್‍ನ ಮೂಲಕ ತುಂಬಾ ಕ್ರಿಯಾಶೀಲರಾಗಿದ್ದರು.

ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶ ದೊರಕಿರುವುದು ನನ್ನ ಭಾಗ್ಯ!- ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಇಂದು ‘ಹಿಂದೂ ಇಕೋಸಿಸ್ಟಂ’ ಸಂಘಟನೆಯು ರಾಷ್ಟ್ರ ಮತ್ತು ಧರ್ಮಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶವನ್ನು ನನಗೆ ಲಭಿಸಿದೆ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅರಿಯಲು ನನಗೆ ಸಾಧ್ಯವಾಗಿರುವುದು ನನ್ನ ಭಾಗ್ಯವೆಂದು ತಿಳಿಯುತ್ತೇನೆ ಎಂದು ಕೇಂದ್ರ ಸಚಿವಗಿರಿರಾಜ್ ಸಿಂಗ್ ಇವರು ಪ್ರತಿಪಾದಿಸಿದರು.

ದರೋಡೆಯ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವ ದಿವಂಗತ ಪಿ. ರಂಗರಾಜನ್ ಕುಮಾರಮಂಗಲಮ್ ಅವರ ಪತ್ನಿಯ ಕೊಲೆ

ಮಾಜಿ ಕೇಂದ್ರ ಸಚಿವ ದಿವಂಗತ ಪಿ. ರಂಗರಾಜನ್ ಕುಮಾರಮಂಗಲಮ್ ಅವರ ಪತ್ನಿ ಕಿಟ್ಟಿ ಕುಮಾರಮಂಗಲಮ್ (೬೭) ಅವರನ್ನು ಜುಲೈ ೬ ರ ರಾತ್ರಿ ವಸಂತ್ ವಿಹಾರದ ಮನೆಯೊಳಗೆ ನುಗ್ಗಿದ ದರೋಡೆಕೋರರು ಹತ್ಯೆ ಮಾಡಿದ್ದಾರೆ.

ಮತಾಂತರಕ್ಕಾಗಿ ನ್ಯಾಯಾಲಯದ ಚೇಂಬರ್ ಬಳಸುತ್ತಿದ್ದ ಮತಾಂಧ ನ್ಯಾಯವಾದಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ ದೆಹಲಿ ಬಾರ್ ಕೌನ್ಸಿಲ್ !

ಕಡಕಡುಮಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿ ಇಕ್ಬಾಲ್ ಮಲಿಕ್ ಅವರ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಪರಿಣಾಮವಾಗಿ, ಅವನ ಪರವಾನಗಿ ರದ್ದಾಗಿರುವ ತನಕ ಅವನಿಗೆ ಕಾನೂನು ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ