ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇರೆಗೆ ‘ಸುದರ್ಶನ ಟೀವಿ’ಯ ಸಂಪಾದಕ ಸುರೇಶ ಚವ್ಹಾಣಕೆಯವರ ವಿರುದ್ಧ ಅರ್ಜಿ

ನ್ಯಾಯಾಲಯವು ಪೊಲಿಸರಿಂದ ಕ್ರಮ ಕೈಕೊಂಡಿರುವ ವರದಿಯನ್ನು ಕೋರಿದೆ

ನವದೆಹಲಿ – ‘ಸುದರ್ಶನ ಟೀವಿ’ ಸಂಪಾದಕರಾದ ಸುರೇಶ ಚವ್ಹಾಣಕೆಯವರು ಇಲ್ಲಿಯ ಗೋವಿಂದಪುರಿ ಪ್ರದೇಶದಲ್ಲಿ ಒಂದು ಕಾರ್ಯಕ್ರಮದಲ್ಲಿ ನೀಡಿದ ಕಥಿತ ಆಕ್ಷೇಪಾರ್ಹ ಭಾಷಣದಿಂದಾಗಿ ಅವರ ವಿರುದ್ಧ ಅರ್ಜಿಯನ್ನು ದಾಖಲಿಸಲಾಗಿದೆ. ಈ ಅರ್ಜಿಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಪೊಲಿಸರಿಂದ ಕೈಕೊಂಡ ಕ್ರಮದ ಕುರಿತು ವರದಿಯನ್ನು ಕೋರಿದೆ. ಇದರ ಮುಂದಿನ ಆಲಿಕೆ ಮಾರ್ಚ ೧೫ ರಂದು ನಡೆಯಲಿದೆ. ಈ ಅರ್ಜಿ ‘ವೆಲಫೇರ ಪಾರ್ಟಿ ಆಫ್ ಇಂಡಿಯಾ’ ಅಧ್ಯಕ್ಷರಾದ ಡಾ. ಸೈಯ್ಯದ ಕಾಸಿಮ ರಸೂಲ ಇಲಿಯಾಸ ಇವರು ದಾಖಲಿಸಿದ್ದರು. ದೆಹಲಿಯ ಗಲಭೆಯ ಪ್ರಕರಣದ ಬಂಧನದಲ್ಲಿರುವ ಉಮರ ಖಾಲೀದ ಇವರು ಇಲಿಯಾಸನ ಮಗ ಆಗಿದ್ದಾನೆ.

ಸುರೇಶ ಚವ್ಹಾಣಕೆಯವರ ಮೇಲೆ, ಅವರು ಡಿಸೆಂಬರ ೧೯, ೨೦೨೧ ರಂದು ಕಾರ್ಯಕ್ರಮದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಒಂದು ಸಮೂಹವನ್ನು ಹತ್ಯೆ ಮಾಡುವ ಪ್ರತಿಜ್ಞೆ ನೀಡಿದರು. ಹಾಗೆಯೇ ಈ ಕಾರ್ಯಕ್ರಮದ ದಿನದಂದು ಚವ್ಹಾಣಕೆಯವರು ಟ್ವೀಟ ಮಾಡಿ ‘ಒಂದೇ ಕನಸು : ಹಿಂದೂ ರಾಷ್ಟ್ರ’ ಎಂದು ಹೇಳಿದ್ದರು. ‘ಹೀಗೆ ಹೇಳುವುದು ಸಂವಿಧಾನದ ವಿರುದ್ಧವಾಗಿದೆ’, ಎಂದು ದೂರಿನಲ್ಲಿ ಆರೋಪಿಸಲಾಗಿದೆ.