ಕಲಂ 370 ತೆಗೆದನಂತರ ಈವರೆಗೆ ಕಾಶ್ಮೀರದಲ್ಲಿ 439 ಭಯೋತ್ಪಾದಕರು ಹತರಾಗಿದ್ದಾರೆ

ಇಷ್ಟೊಂದು ಭಯೋತ್ಪಾದಕರು ಹತರಾಗಿದ್ದರೂ ಕಾಶ್ಮೀರದ ಸ್ಥಿತಿ ಸಾಮಾನ್ಯವಾಗಿಲ್ಲ. ಇನ್ನೂ ಕೂಡ ಅಲ್ಲಿ ಜಿಹಾದಿ ಭಯೊತ್ಪಾದಕರ ದಾಳಿಗಳು ನಡೆಯುತ್ತವೆ. ಆದ್ದರಿಂದ ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಸಾಧ್ಯವಾಗಿಲ್ಲ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಾಶಮಾಡಲು ಅದನ್ನು ನಿರ್ನಿಸುವ ಪಾಕಿಸ್ತಾನವನ್ನು ನಾಶ ಮಾಡುವುದು ಆವಶ್ಯಕವಾಗಿದೆ ! – ಸಂಪಾದಕರು 

ನವದೆಹಲಿ – ಜಮ್ಮು-ಕಾಶ್ಮೀರದಲ್ಲಿ ಕಲಂ 370 ತೆಗೆದನಂತರ ಈವರೆಗೆ 439 ಜಿಹಾದಿ ಭಯೋತ್ಪಾದಕರು ಹತರಾಗಿದ್ದಾರೆ ಮತ್ತು 109 ಸೈನಿಕರು ಹಾಗೂ ಪೊಲೀಸರು ಹುತಾತ್ಮರಾಗಿದ್ದಾರೆ. ಹಾಗೆಯೇ 98 ನಾಗರಿಕರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ, ಎಂದು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದೆ. ಭಾರತದಲ್ಲಿ ಈವರೆಗೆ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಸಂಖ್ಯೆ 42 ಆಗಿದೆ. ಆಗಸ್ಟ್ 5, 2019 ರಂದು ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ಕಲಂ 370 ತೆಗೆಯಲಾಗಿತ್ತು.