ಇಮಾಮ್‌ನ ಮೊಕದ್ದಮೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಿ ಆತನಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸುವುದು ಆವಶ್ಯಕ !
ನವ ದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ವಿರುದ್ಧದ ಆಂದೋಲನದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ದೆಹಲಿ ಸೆಷನ್ಸ್ ನ್ಯಾಯಾಲಯವು ಜೆ.ಎನ್.ಯು.ನ ವಿದ್ಯಾರ್ಥಿ ಶರ್ಜೀಲ ಇಮಾಮ ವಿರುದ್ಧ ದೇಶದ್ರೋಹದ ಆರೋಪವನ್ನು ನಿಶ್ಚಯಿಸಿದೆ. ಶರ್ಜಿಲ ಇಮಾಮನ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೧೨೪ (ದೇಶದ್ರೋಹ), ೧೫೩ ಎ (ಧರ್ಮದ ಆಧಾರದಲ್ಲಿ ವಿವಿಧ ಸಾಮಾಜಿಕ ಗುಂಪುಗಳ ನಡುವೆ ದ್ವೇಷವನ್ನು ಬಿತ್ತುವುದು), ೧೫೩ ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಹೇಳಿಕೆ), ೫೦೫ (ಸಾರ್ವಜನಿಕ ದುರ್ನಡತೆಗೆ ಕಾರಣವಾಗಿರುವ ಹೇಳಿಕೆ.) ಮತ್ತು ಯುಪಿಎ ಕಲಂ ೧೩ (ಕಾನೂನುಬಾಹಿರ ಚಟುವಟಿಕೆಗಾಗಿ ಶಿಕ್ಷೆ) ಹೀಗೆ ಆರೋಪಗಳನ್ನು ನಿಶ್ಚಯಿಸಲು ನ್ಯಾಯಾಲಯ ಆದೇಶಿಸಿದೆ.
ಅಸ್ಸಾಮನ್ನು ಭಾರತದಿಂದ ಬೇರ್ಪಡಿಸ್ತೇವೆ ಎಂದಿದ್ದ ಜೆಎನ್ಯೂ ವಿದ್ಯಾರ್ಥಿ ಶಾರ್ಜಿಲ್ ವಿರುದ್ಧ ದೇಶದ್ರೋಹದ ಕೇಸ್
#sharjeelimam https://t.co/acEVesTD8h— vijaykarnataka (@Vijaykarnataka) January 24, 2022
ಶರ್ಜೀಲ ಇಮಾಮನು ೧೩ ಡಿಸೆಂಬರ್ ೨೦೧೯ ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಮತ್ತು ೧೬ ಡಿಸೆಂಬರ್ ೨೦೧೯ ರಂದು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದನು. ತನ್ನ ಭಾಷಣದಲ್ಲಿ, ಅಸ್ಸಾಂ ಮತ್ತು ಉಳಿದ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವುದಾಗಿ ಬೆದರಿಕೆ ನೀಡುವ ಹೇಳಿಕೆ ನೀಡಿದ್ದನು. ಇಮಾಮನ ಭಾಷಣದ ನಂತರ ಹಿಂಸಾತ್ಮಕ ಗಲಭೆಗಳು ಭುಗಿಲೆದ್ದವು ಎಂದು ಹೇಳಲಾಗುತ್ತಿದೆ. ಶರ್ಜೀಲ್ ಜನವರಿ ೨೦೨೦ ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.