ತೃಣಮೂಲ ಕಾಂಗ್ರೆಸ್ಸಿನ ಸಂಸದ ಶಂತನೂ ಸೇನರವರು ಪ್ರಧಾನಮಂತ್ರಿ ಮೋದಿಯವರಲ್ಲಿ ದೂರು
ಭಾರತೀಯ ಸರಕಾರಿ ವ್ಯವಸ್ಥೆಗೆ ಇದು ಏಕೆ ಗಮನಕ್ಕೆ ಬರಲಿಲ್ಲ ? ಅವರೇ ತಾವಾಗಿಯೇ ಕ್ರಮಕೈಗೊಳ್ಳುವುದು ಅಪೇಕ್ಷಿತವಿತ್ತು ! – ಸಂಪಾದಕರು
ನವ ದೆಹಲಿ – ವಿಶ್ವ ಆರೋಗ್ಯ ಸಂಸ್ಥೆಯ ‘ಕೊವಿಡ-೧೯’ ಸಂದರ್ಭದಲ್ಲಿನ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಮತ್ತು ಅರುಣಾಚಲ ಪ್ರದೇಶವು ಚೀನಾದ ಭೂಭಾಗವೆಂದು ತೋರಿಸಲಾಗಿದೆ, ಎಂದು ತೃಣಮೂಲ ಕಾಂಗ್ರೆಸನ ಸಂಸದರಾದ ಶಂತನೂ ಸೇನರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಿಳಿಸಿದರು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.
https://t.co/6FjbMmtiN1 pic.twitter.com/BE1Rl0fQS7
— DR SANTANU SEN (@SantanuSenMP) January 30, 2022
ಸೇನರವರು ತಮ್ಮ ಪತ್ರದಲ್ಲಿ, ನಾನು ಯಾವಾಗ ಈ ಜಾಲತಾಣದಲ್ಲಿರುವ ನೀಲಿ ಭಾಗದ ಮೇಲೆ ಕ್ಲಿಕ ಮಾಡಿದೆ ಆಗ ಭಾರತದ ‘ಕೊವಿಡ-೧೯’ರ ಮಾಹಿತಿಯನ್ನು ತೋರಿಸಲಾಯಿತು. ಅದೇ ಸಮಯದಲ್ಲಿ ಜಮ್ಮೂ-ಕಾಶ್ಮೀರ ರಾಜ್ಯದ ಮೇಲೆ ಕ್ಲಿಕ ಮಾಡಿದಾಗ, ಅದರಲ್ಲಿ ಪಾಕಿಸ್ತಾನದ ಮಾಹಿತಿಯನ್ನು ತೋರಿಸಲಾಯಿತು. ಅದೇ ರೀತಿ ಚೀನಾದ ಸಂದರ್ಭದಲ್ಲಿ ಮಾಹಿತಿಯ ವಿಷಯವಾಗಿ ಕಂಡು ಬಂತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿನ ಒಂದು ಗಂಭೀರವಾದ ವಿಷಯವಾಗಿದ್ದು ಸರಕಾರವು ಅದರ ಬಗ್ಗೆ ಗಮನಹರಿಸಿ ಅದನ್ನು ಸರಿಪಡಿಸಬೇಕು. ಇದು ನಮ್ಮ ದೇಶದಲ್ಲಿನ ನಾಗರಿಕರಿಗಾಗಿ ಅತ್ಯಂತ ಖೇದಕರ ವಿಷಯವಾಗಿದೆ. ಈ ಪ್ರಕರಣದ ಬಗ್ಗೆ ಪ್ರಧಾನಮಂತ್ರಿ ಮೋದಿಯವರು ವಿಚಾರಣೆಯ ಆದೇಶ ನೀಡಲಿ ಹಾಗೂ ಈ ದೊಡ್ಡ ತಪ್ಪಿನ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಬೇಕೆಂದು ಸೇನ ಇವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಮೇಲಿನ ಚಿತ್ರ ಹಾಕುವುದರ ಉದ್ದೇಶ ಯಾರ ರಾಷ್ಟೀಯ ಭಾವನೆಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತೋರಿಸುದಾಗಿದೆ. – ಸಂಪಾದಕರು |