೭೩ ನೇ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಣೆ

ನವ ದೆಹಲಿ : ದೇಶಾದ್ಯಂತ ೭೩ ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ದೆಹಲಿಯ ರಾಜಪಥದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಧ್ವಜವನ್ನು ಹಾರಿಸಿದರು. ಅದರ ನಂತರ ಸೈನಿಕರ ಪಥಸಂಚಲನ ಹಾಗೆಯೇ ವಿವಿಧ ನೃತ್ಯಗಳು ಮತ್ತು ಸ್ತಬ್ಧಚಿತ್ರಗಳ ಪಥಸಂಚಲನ ಮಾಡಲಾಯಿತು. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಮೂರು ಸೇನಾ ಮುಖ್ಯಸ್ಥರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಇರೊಂದಿಗೆ ದೇಶದ ರಾಜ್ಯಗಳ ರಾಜಧಾನಿ ಹಾಗೂ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್ ಗಡಿಯಲ್ಲಿ ನೇಮಿಸಿದ್ದ ಸೈನಿಕರು ೧೫ ರಿಂದ ೧೭ ಸಾವಿರದ ೫೦೦ ಅಡಿ ಎತ್ತರದಲ್ಲಿರುವ ಸೇನಾ ನೆಲೆಗಳಲ್ಲಿ ತ್ರಿವರ್ಣ ಧ್ವಜವನ್ನು ಉತ್ಸಾಹದಲ್ಲಿ ಹಾರಿಸಿದರು. ಇಂಡೋ-ಟಿಬೆಟಿ ಗಡಿ ಪೊಲೀಸರು ಮೈನಸ್ ೪೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.