* ಹಿಂದೂಗಳಿಗೆ ಇಲ್ಲಿಯವರೆಗೆ ಎಲ್ಲಾ ಪಕ್ಷದ ಆಡಳಿತಗಾರರು ಸಾಧನೆ ಕಲಿಸಿದೆ ಇರುವ ಪರಿಣಾಮವಿದು !- ಸಂಪಾದಕರು * ಸಾಧನೆಯಿಂದ ಪ್ರತಿಯೊಂದು ವ್ಯಕ್ತಿಯ ಜನ್ಮ, ಮೃತ್ಯು, ಪ್ರಾರಬ್ಧ, ಜೀವನದ ಉದ್ದೇಶ ಮುಂತಾದ ಜ್ಞಾನ ಸಿಗುತ್ತದೆ ಮತ್ತು ಅವರು ಎಲ್ಲಾ ಸುಖ-ದುಃಖಗಳನ್ನು ಮೆಟ್ಟಿನಿಂತು ಆನಂದವಾಗಿರಬಹುದು ! -ಸಂಪಾದಕರು |
ನವದೆಹಲಿ – ಇಲ್ಲಿಯ ಬಿರ್ಲಾ ಮಂದಿರದಲ್ಲಿನ ನವಗ್ರಹ ಮಂದಿರದ ರಾಹು ಮತ್ತು ಕೇತು ಮೂರ್ತಿಯನ್ನು ಧ್ವಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸರಕಾರಿ ಸಿಬ್ಬಂದಿ ಏಕಲವ್ಯ (ವಯಸ್ಸು 45) ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ಏಕಲವ್ಯ ಮಾನಸಿಕವಾಗಿ ನಿರಾಶೆಗೆ ಒಳಗಾಗಿದ್ದರಿಂದ ಅವನು ಈ ಧ್ವಂಸ ಮಾಡಿದ್ದಾನೆ, ಎಂದು ಪೊಲೀಸರಿಂದ ಹೇಳಲಾಗುತ್ತಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದಾಗ ಏಕಲವ್ಯನು ಧಾರ್ಮಿಕ ಮನುಷ್ಯನಾಗಿದ್ದು; ಕೊರೋನಾ ಮಹಾಮಾರಿಯಲ್ಲಿ ಅವನ ಕುಟುಂಬದ 5 ಜನರ ಸಾವನ್ನಪ್ಪಿದ್ದರು ಮತ್ತು ಅವನು ಬೇಸತ್ತು ಈ ಧ್ವಂಸ ನಡೆಸಿದ್ದಾನೆ ಎಂದು ಹೇಳಿದರು.
Delhi: Man held for defacing Rahu, Ketu idols of a temple in Mandir Marg https://t.co/L7kqQ6XK2q
— Hindustan Times (@HindustanTimes) February 1, 2022