ಯುಕ್ರೇನ್‍ನಿಂದ ಹಿಂತಿರುಗಿ ಬಂದಿರುವ ವೈದ್ಯಕೀಯ ಕ್ಷೇತ್ರದ 16 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ಬಗ್ಗೆ ಸರಕಾರದ ವಿಚಾರ !

ಯುದ್ಧದಿಂದ ಯುಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹಿಂತಿರುಗಿ ಕರೆ ತರಲಾಗುತ್ತದೆ. ಈ ಯುದ್ಧದಿಂದಾಗಿ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಅದಕ್ಕಾಗಿ ಭಾರತದಲ್ಲಿನ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ವಿಷಯವಾಗಿ ಭಾರತ ಸರಕಾರ ಯೋಚಿಸುತ್ತಿದೆ.

ನಾನು ಪುತಿನ್ ಇವರಿಗೆ ಯುದ್ಧ ನಿಲ್ಲಿಸುವ ಆದೇಶ ನೀಡಬೇಕೇ ? – ನ್ಯಾಯಾಧೀಶ ಎನ್.ವಿ. ರಮಣ ಇವರ ಪ್ರಶ್ನೆ

ಯುಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶ ಎನ್.ವಿ. ರಮಣ ಇವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಉದಾಹರಣೆ ನೀಡಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಷ್ಯಾದ ಬ್ಯಾಂಕಗಳ ಜೊತೆಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ !

ಭಾರತವು ರಷ್ಯಾ ಮತ್ತು ಯುಕ್ರೇನ್ ಯುದ್ಧದಲ್ಲಿ ತಟಸ್ಥ ನಿಲುವನ್ನು ತೆಗೆದುಕೊಂಡಿದ್ದರೂ, ಭಾರತದ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ (ಎಸ್.ಬಿ.ಐ) ಈ ರಾಷ್ಟ್ರೀಯಕೃತ ಬ್ಯಾಂಕ್ ರಷ್ಯಾದ ಬ್ಯಾಂಕುಗಳೊಂದಿಗೆ ಯಾವುದೇ ವ್ಯವಹಾರ ಮಾಡದೇ ಇರುವ ನಿರ್ಣಯ ತೆಗೆದುಕೊಂಡಿದೆ.

ಮೊಘಲರು ರಜಪೂತರನ್ನು ಕಗ್ಗೊಲೆ ಮಾಡಿದಂತೆ ರಷ್ಯಾವು ನಮ್ಮನ್ನು ಮಾಡುತ್ತಿದೆ ! – ಭಾರತದಲ್ಲಿರುವ ಯುಕ್ರೇನ್‍ದ ರಾಯಭಾರಿ ಡಾ. ಇಗೊರ ಪೋಲಿಖಾ

ರಷ್ಯಾವು ಯುಕ್ರೇನ್‍ನ ವಿರುದ್ಧ ನಡೆಸಿರುವ ಯುದ್ಧ ಭಾರತದಲ್ಲಿ ರಜಪೂತರ ವಿರುದ್ಧ ಮೊಘಲರು ನಡೆಸಿದ ನರಮೇಧದಂತೆಯೇ ಇದೆ ಎಂದು ಭಾರತದಲ್ಲಿನ ಯುಕ್ರೇನ್ ರಾಯಭಾರಿ ಡಾ. ಇಗೊರ್ ಪೋಲಿಖಾ ಹೇಳಿಕೆ ನೀಡಿದರು.

ಯೋಧರಿಗಾಗಿ ಇನ್ನು ‘ಶಹೀದ್’ ಅಥವಾ ‘ಹುತಾತ್ಮ’ ಶಬ್ದಗಳ ಬಳಸುವಂತಿಲ್ಲ !

ಯಾರು ದೇಶಕ್ಕಾಗಿ ಬಲಿದಾನ ನೀಡಿದರೋ, ಯಾವ ವ್ಯಕ್ತಿಯು ಧಾರ್ಮಿಕ ಅಥವಾ ರಾಜಕಿಯ ವಿಶ್ವಾಸ, ವಿಚಾರಗಳಿಗಾಗಿ ಪ್ರಾಣ ತ್ಯಾಗ ಮಾಡಿರುವನೋ ಅಂತಹ ವ್ಯಕ್ತಿಗಾಗಿ ‘ಹುತಾತ್ಮ್’ ಅಥವಾ ‘ಶಹೀದ್’ ಶಬ್ದದ ಬಳಕೆ ಮಾಡಲಾಗುತ್ತದೆ.

ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ೪ ಸಚಿವರನ್ನು ಯುಕ್ರೇನನ ನೆರೆಯ ದೇಶಗಳಿಗೆ ಹೋಗಲಿದ್ದಾರೆ !

ಯುಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ೪ ಕೇಂದ್ರೀಯ ಸಚಿವರಿಗೆ ಯುಕ್ರೇನ್‌ನ ನೆರೆಯ ದೇಶಗಳಿಗೆ ಕಳುಹಿಸುವ ನಿರ್ಧಾರವನ್ನು ಮೋದಿ ಸರಕಾರವು ತೆಗೆದುಕೊಂಡಿದೆ. ಅಲ್ಲಿ ಈ ಸಚಿವರು ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ಸಂಯೋಜನೆ ನಡೆಸುವ ಕೆಲಸ ಮಾಡಲಿದ್ದಾರೆ.

ಒಂದು ವರ್ಷದ ಹಿಂದೆ ಭಾರತೀಯ ಪಂಚಾಂಗದಲ್ಲಿ ಮಾಡಲಾಗಿತ್ತು ಭವಿಷ್ಯವಾಣಿ !

ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾದ ಯುದ್ದದ ಭವಿಷ್ಯವಾಣಿಯನ್ನು ಭಾರತೀಯ ಪಂಚಾಂಗದ ಮೂಲಕ ಒಂದು ವರ್ಷದ ಹಿಂದೆಯೇ ಮಾಡಲಾಗಿತ್ತು. ಈ ಯುದ್ಧದ ಹಿಂದೆ ಅಂಗಾರಕ ಯೋಗವಿದೆ ಎಂದು ಜ್ಯೋತಿಷಿ ಪಂಡಿತ್ ಮುಖೇಶ್ ಮಿಶ್ರಾ ಹೇಳಿದ್ದಾರೆ.

ಅಪ್ರಾಪ್ತ ಹುಡುಗಿಯ ಮತಾಂತರ ಮಾಡಿರುವ ಪ್ರಕರಣದಲ್ಲಿ ಕ್ರೈಸ್ತ ಮಿಷನರಿಗಳ ಸಂಸ್ಥೆಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ನೋಟಿಸ

ಯಾವುದಾದರೂ ಹಿಂದೂ ಸಂಸ್ಥೆಯಲ್ಲಿ ಇಂತಹ ಘಟನೆಗಳು ನಡೆದಿದ್ದರೆ ತಥಾಕಥಿತ ಜಾತ್ಯಾತೀತರು ಮತ್ತು ಪುರೋ(ಅಧೋ)ಗಾಮಿಗಳು ಹಿಂದೂಗಳನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದರು, ಆದರೆ ಈ ಘಟನೆಯು ಕ್ರೈಸ್ತ ಮಿಷನರಿಗಳ ಸಂಸ್ಥೆಯಲ್ಲಿ ನಡೆದಿರುವುದರಿಂದ ಅವರು ಶಾಂತವಾಗಿದ್ದರೆ, ಎಂಬುದನ್ನು ಅರಿತುಕೊಳ್ಳಿರಿ

ತಮಿಳುನಾಡಿನ ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಭಗವಾನ್ ಹನುಮಂತನ ಪ್ರಾಚೀನ ಮೂರ್ತಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ತರುವರು

ತಮಿಳುನಾಡಿನ ಒಂದು ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾದ ಭಗವಾನ ಹನುಮಂತನ ಪ್ರಾಚೀನ ಮೂರ್ತಿಯು ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದೂ ಈಗ ಅದನ್ನು ಭಾರತಕ್ಕೆ ತರುವರು, ಎಂದು ಕೇಂದ್ರ ಸಂಸ್ಕøತಿ ಮಂತ್ರಿ ಜಿ. ಕಿಶನ್ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.

ಭಾರತದ ಬಳಿ ಸಹಾಯಕ್ಕಾಗಿ ಅಂಗಲಾಚುವ ಯುಕ್ರೆನ್ ಒಂದು ಸಮಯದಲ್ಲಿ ಭಾರತದ ಪರಮಾಣು ಪರೀಕ್ಷೆಗೆ ವಿರೋಧಿಸಿತ್ತು !

ಯುಕ್ರೆನ್ ಭಾರತವು 1998 ರಲ್ಲಿ ಮಾಡಿದ ಪರಮಾಣು ಪರೀಕ್ಷೆಗೆ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ವಿರೋಧಿಸಿತ್ತು ಹಾಗೆಯೇ ಈ ಭದ್ರತಾ ಪರಿಷತ್ತಿನಲ್ಲಿ ಭಾರತದ ವಿರೋಧದಲ್ಲಿ ಮತದಾನವೂ ಮಾಡಿತ್ತು.