ನಾನು ಪುತಿನ್ ಇವರಿಗೆ ಯುದ್ಧ ನಿಲ್ಲಿಸುವ ಆದೇಶ ನೀಡಬೇಕೇ ? – ನ್ಯಾಯಾಧೀಶ ಎನ್.ವಿ. ರಮಣ ಇವರ ಪ್ರಶ್ನೆ

ನ್ಯಾಯಾಧೀಶ ಎನ್.ವಿ. ರಮಣ

ನವದೆಹಲಿ – ಯುಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶ ಎನ್.ವಿ. ರಮಣ ಇವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಉದಾಹರಣೆ ನೀಡಿದರು. ಈ ವಿಡಿಯೋದಲ್ಲಿ ‘ಯುದ್ಧಜನ್ಯ ಯುಕ್ರೇನ್‍ನಿಂದ ಭಾರತೀಯರಿಗೆ ಹಿಂತಿರುಗಿ ಕರೆತರಲು ನ್ಯಾಯಾಧೀಶರು ಏನು ಮಾಡಿದ್ದಾರೆ ?’, ಎಂದು ಜನರು ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ನ್ಯಾಯಾಧೀಶರು, “ನಾನು ರಷ್ಯಾದ ರಾಷ್ಟ್ರಧ್ಯಕ್ಷ ವ್ಲಾದಿಮೀರ ಪುತಿನ್ ಇವರಿಗೆ ಯುದ್ಧ ನಿಲ್ಲಿಸಲು ಆದೇಶ ನೀಡಬೇಕೇ ?, ಎಂಬ ಪ್ರಶ್ನೆ ಕೇಳಿದರು. ಯುಕ್ರೇನ್‍ನ ಗಡಿಯಲ್ಲಿ ಸಿಲುಕಿರುವ 200 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ಅರ್ಜಿ ದಾಖಲಿಸಲಾಗಿತ್ತು.

ನ್ಯಾಯಾಧೀಶರು ತಮ್ಮ ಮಾತನ್ನು ಮುಂದುವರೆಸುತ್ತಾ, ನಮಗೆ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿಯಿದೆ. ಭಾರತ ಸರಕಾರ ಅದಕ್ಕಾಗಿ ಕೆಲಸ ಮಾಡುತ್ತಿದೆ. ಆದರೆ ನಾವು `ಅಟಾರ್ನಿ ಜನರಲ್’ ಇವರಿಗೆ `ಈ ವಿಷಯವಾಗಿ ಏನು ಮಾಡಬಹುದು’, ಎಂದು ಕೇಳುವೆವು ಎಂದು ಹೇಳಿದರು.