ನವ ದೆಹಲಿ – ಯುದ್ಧದಿಂದ ಯುಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹಿಂತಿರುಗಿ ಕರೆ ತರಲಾಗುತ್ತದೆ. ಈ ಯುದ್ಧದಿಂದಾಗಿ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಅದಕ್ಕಾಗಿ ಭಾರತದಲ್ಲಿನ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ವಿಷಯವಾಗಿ ಭಾರತ ಸರಕಾರ ಯೋಚಿಸುತ್ತಿದೆ. ಅದಕ್ಕಾಗಿ ಕೇಂದ್ರ ಸರಕಾರ `ಫಾರಿನ್ ಮೆಡಿಕಲ್ ಗ್ರಾಜುಯೇಟ್ ಲಾಯಸೆನ್ಶಿಯೇಟ ರೆಗುಲೇಶನ್ (ಎಫ್.ಎಂ.ಜಿ.ಎಲ್) ಕಾಯಿದೆ’ಯಲ್ಲಿ ಬದಲಾವಣೆ ಮಾಡುವ ಯೋಚನೆ ಮಾಡುತ್ತಿದ್ದೆ. ಈ ವಿಷಯವಾಗಿ ಆದಷ್ಟು ಬೇಗನೆ ಸಭೆ ನಡೆಸಲಾಗುವ ಸಾಧ್ಯತೆ ಇದೆ. ವಿದೇಶಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣ ಮಾಡುವ ಜೊತೆಗೆ ಪ್ರಶಿಕ್ಷಣ ಮತ್ತು ಇಂಟರ್ನಶಿಪ್ ಭಾರತದ ಹೊರಗೆ
ಮಾಡಬೇಕಾಗುತ್ತದೆ. ಯುಕ್ರೇನ್‍ನಲ್ಲಿ ಎಂ.ಬಿ.ಬಿ.ಎಸ್. 6 ವರ್ಷದ ಅಧ್ಯಯನವಾಗಿದೆ. ನಂತರ 2 ವರ್ಷದ ಪ್ರಶಿಕ್ಷಣಗಾಗಿ (ಇಂಟರ್ನಶಿಪ್) ಇರುತ್ತದೆ. ಈಗ ಯುದ್ಧದಿಂದಾಗಿ ಶಿಕ್ಷಣದಲ್ಲಿ ಅಡಚಣೆ ಉಂಟಾಗಿರುವುದರಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟದಲ್ಲಿದೆ. ಈ ವಿದ್ಯಾರ್ಥಿಗಳಿಗೆ ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರವೇಶ ಸಿಗುವುದು ಸಾಧ್ಯವಿಲ್ಲ. ಖಾಸಗಿ ಮತ್ತು ಅನುದಾನಿತ ಮಹಾವಿದ್ಯಾಲಯಗಳಲ್ಲಿ ಪ್ರವೇಶ ಸಿಗಬಹುದು. ಯುಕ್ರೇನ್‍ನಲ್ಲಿ ಮೂಲಭೂತ ಸೌಲಭ್ಯಗಳು ನಾಶವಾಗಿದ್ದರಿಂದ `ಆನ್‍ಲೈನ್’ ಕಲಿಕೆ ಪ್ರಸ್ತುತ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.