ಮೊಘಲರು ರಜಪೂತರನ್ನು ಕಗ್ಗೊಲೆ ಮಾಡಿದಂತೆ ರಷ್ಯಾವು ನಮ್ಮನ್ನು ಮಾಡುತ್ತಿದೆ ! – ಭಾರತದಲ್ಲಿರುವ ಯುಕ್ರೇನ್‍ದ ರಾಯಭಾರಿ ಡಾ. ಇಗೊರ ಪೋಲಿಖಾ

ಯುಕ್ರೇನ್‍ದ ರಾಯಭಾರಿ ಡಾ. ಇಗೊರ ಪೋಲಿಖಾ

ಹೊಸ ದೆಹಲಿ – ರಷ್ಯಾವು ಯುಕ್ರೇನ್‍ನ ವಿರುದ್ಧ ನಡೆಸಿರುವ ಯುದ್ಧ ಭಾರತದಲ್ಲಿ ರಜಪೂತರ ವಿರುದ್ಧ ಮೊಘಲರು ನಡೆಸಿದ ನರಮೇಧದಂತೆಯೇ ಇದೆ ಎಂದು ಭಾರತದಲ್ಲಿನ ಯುಕ್ರೇನ್ ರಾಯಭಾರಿ ಡಾ. ಇಗೊರ್ ಪೋಲಿಖಾ ಹೇಳಿಕೆ ನೀಡಿದರು. ಯುಕ್ರೇನ್‍ನ ಖಾರಕಿವ್‍ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ ನಂತರ ಡಾ. ಪೋಲಿಖಾ ಅವರು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭೇಟಿ ನೀಡಿದರು. ಅವರು ವಿದ್ಯಾರ್ಥಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. `ಭಾರತ ಯುಕ್ರೇನ್‍ಗೆ ಮಾನವಿಯತೆಯ ನೆರವು ನೀಡುವ ಬಗ್ಗೆ ಚರ್ಚೆಯಾಯಿತು. ಈ ನೆರವು ನೀಡಿದ್ದರಿಂದ ನಾವು ಭಾರತದ ಪ್ರತಿ ಆಭಾರಿಯಾಗಿದ್ದೆವೆ’, ಎಂದು ಈ ಸಮಯದಲ್ಲಿ ಹೇಳಿದರು.

ಡಾ. ಪೋಲಿಖಾ ತಮ್ಮ ಮಾತನ್ನು ಮುಂದುವರೆಸುತ್ತಾ, ನಾವು ಮೋದಿಯವರಂತೆ ವಿಶ್ವದ ಹೆಚ್ಚು ಪ್ರಭಾವಶಾಲಿ ನಾಯಕರನ್ನು ಪುತಿನ್ ಅವರಿಗೆ ತಡೆಯುವದಕ್ಕಾಗಿ ಸರ್ವ ಸಾಧನಗಳನ್ನು ಬಳಸಬೇಕೆಂದು ಹೇಳುತ್ತಲಿದ್ದೇವೆ. ರಷ್ಯಾವು ಈಗ ನಗರ ಪ್ರದೇಶದಲ್ಲಿ ಗುಂಡುಹಾರಾಟ ಆರಂಭಿಸಿದೆ.