ಅಪ್ರಾಪ್ತ ಹುಡುಗಿಯ ಮತಾಂತರ ಮಾಡಿರುವ ಪ್ರಕರಣದಲ್ಲಿ ಕ್ರೈಸ್ತ ಮಿಷನರಿಗಳ ಸಂಸ್ಥೆಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ನೋಟಿಸ

ಹುಡುಗಿಯ ಮೇಲೆ 5 ತಿಂಗಳ ವರೆಗೆ ಲೈಂಗಿಕ ಶೋಷಣೆ

* ಯಾವುದಾದರೂ ಹಿಂದೂ ಸಂಸ್ಥೆಯಲ್ಲಿ ಇಂತಹ ಘಟನೆಗಳು ನಡೆದಿದ್ದರೆ ತಥಾಕಥಿತ ಜಾತ್ಯಾತೀತರು ಮತ್ತು ಪುರೋ(ಅಧೋ)ಗಾಮಿಗಳು ಹಿಂದೂಗಳನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದರು, ಆದರೆ ಈ ಘಟನೆಯು ಕ್ರೈಸ್ತ ಮಿಷನರಿಗಳ ಸಂಸ್ಥೆಯಲ್ಲಿ ನಡೆದಿರುವುದರಿಂದ ಅವರು ಶಾಂತವಾಗಿದ್ದರೆ, ಎಂಬುದನ್ನು ಅರಿತುಕೊಳ್ಳಿರಿ.-ಸಂಪಾದಕರು 

ನವದೆಹಲಿ – ಈಹ್ವೇಂಜೆಲಿಕಲ್ ಫೆಲೋಷಿಪ್ ಅಫ್ ಇಂಡಿಯ ಕಮಿಷನ್ ಆನ್ ರಿಲಿಫ ಅಂಡ್ ಪ್ರಯಾಸ್, ಎಂಬ ಕ್ರೈಸ ಮಿಷನರಿ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತರು ಓರ್ವ ಮಹಿಳೆಯ ಅಪ್ರಾಪ್ತ ಮಗಳ ಮತಾಂತರ ಮಾಡಿರುವ ಹಾಗೂ ಆಕೆಯಿಂದ ಲೈಂಗಿಕ ಶೋಷಣೆಯ ಸುಳ್ಳು ದೂರು ದಾಖಲಿಸಿರುವ ಪ್ರಕರಣದಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಈ ಸಂಸ್ಥೆಗೆ ನೋಟಿಸ್ ಕಳಿಸಿದೆ. ಈ ಮಹಿಳೆಯು ನ್ಯಾಯವಾದಿ ದಿವ್ಯಾಂಶು ಪಾಂಡೆಯವರ ಮೂಲಕ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಈ ಮಹಿಳೆಯು `ನನಗೆ ಯಾವುದೇ ಮಾಹಿತಿಯನ್ನು ನೀಡದೆ ನನ್ನ ಮಗಳನ್ನು ಮತಾಂತರಗೊಳಿಸಿದ್ದಾರೆ. ಪೊಲೀಸರಲ್ಲಿ ಸಾಮಾಜಿಕ ಕಾರ್ಯಕರ್ತರು ಆಕೆಯಿಂದ ಲೈಂಗಿಕ ಶೋಷಣೆಯ ಸುಳ್ಳು ದೂರು ದಾಖಲಿಸಲು ಹೇಳಿದ್ದಾರೆ. ಅನಂತರ ಆ ಹುಡುಗಿಯನ್ನು `ಚೈಲ್ಡ್ ಕೇರ್ ಇನ್ಸ್ಟಿಟ್ಯೂಷನ್’ ಬಳಿ ಒಪ್ಪಿಸಿದ್ದಾರೆ. ಹುಡುಗಿಯನ್ನು ಈ ಸಂಸ್ಥೆಗೆ ಒಪ್ಪಿಸುವುದು ಕಾನೂನುಬಾಹಿರವಾಗಿತ್ತು. ಈ ಸಂಸ್ಥೆಯಲ್ಲಿ 5 ತಿಂಗಳ ವರೆಗೆ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆದಿದೆ.