ಮೋದಿ ಸರಕಾರದ ನಿರ್ಧಾರ
ನವ ದೆಹಲಿ – ಯುಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ೪ ಕೇಂದ್ರೀಯ ಸಚಿವರಿಗೆ ಯುಕ್ರೇನ್‌ನ ನೆರೆಯ ದೇಶಗಳಿಗೆ ಕಳುಹಿಸುವ ನಿರ್ಧಾರವನ್ನು ಮೋದಿ ಸರಕಾರವು ತೆಗೆದುಕೊಂಡಿದೆ. ಅಲ್ಲಿ ಈ ಸಚಿವರು ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ಸಂಯೋಜನೆ ನಡೆಸುವ ಕೆಲಸ ಮಾಡಲಿದ್ದಾರೆ. ಈ ಅಭಿಯಾನಕ್ಕೆ ‘ಆಪರೇಶನ ಗಂಗಾ’ ಎಂಬ ಹೆಸರನ್ನು ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರು ಉಕ್ರೇನ್ ನೆರೆಯ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ#PMModi #Ukraine #TrustNews18Kannadahttps://t.co/ZXUEDzaTMl
— News18 Kannada (@News18Kannada) February 28, 2022
ಮೂಲಗಳು ನೀಡಿರುವ ಮಾಹಿತಿಯನುಸಾರ ೪ ಸಚಿವರ ಪೈಕಿ ಕೇಂದ್ರ ಸಚಿವ ಹರದೀಪ ಸಿಂಗ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ ರಿಜಿಜೂ ಹಾಗೂ ಜನರಲ ವಿ.ಕೆ. ಸಿಂಹರವರು ಇದ್ದಾರೆ. ಈ ಹಿಂದೆ ಪ್ರಧಾನಮಂತ್ರಿ ಮೋದಿಯವರು ಫೆಬ್ರವರಿ ೨೭ ರಂದು ತುರ್ತು ಸಭೆಯನ್ನು ಕರೆದಿದ್ದರು. ಆ ಸಭೆಯಲ್ಲಿ ವಿದೇಶಾಂಗ ಸಚಿವರಾದ ಎಸ್. ಜೈಶಂಕರ ಹಾಗೂ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾರವರು ಉಪಸ್ಥಿತರಾಗಿದ್ದರು. ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿದ್ಯಾರ್ಥಿಗಳ ರಕ್ಷಣೆ ಹಾಗೂ ಅವರನ್ನು ಆ ಸ್ಥಳದಿಂದ ಹೊರಗೆ ತೆಗೆಯುವುದು ನಮ್ಮ ಆದ್ಯತೆಯಾಗಿದೆ’, ಎಂದು ಹೇಳಿದರು.