ನವದೆಹಲಿ – ಭಾರತವು ರಷ್ಯಾ ಮತ್ತು ಯುಕ್ರೇನ್ ಯುದ್ಧದಲ್ಲಿ ತಟಸ್ಥ ನಿಲುವನ್ನು ತೆಗೆದುಕೊಂಡಿದ್ದರೂ, ಭಾರತದ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ (ಎಸ್.ಬಿ.ಐ) ಈ ರಾಷ್ಟ್ರೀಯಕೃತ ಬ್ಯಾಂಕ್ ರಷ್ಯಾದ ಬ್ಯಾಂಕುಗಳೊಂದಿಗೆ ಯಾವುದೇ ವ್ಯವಹಾರ ಮಾಡದೇ ಇರುವ ನಿರ್ಣಯ ತೆಗೆದುಕೊಂಡಿದೆ.
೧. ಎಸ್.ಬಿ.ಐ ಈ ವಿಷಯವಾಗಿ ಅವರು ಕೆಲವು ಗ್ರಾಹಕರಿಗೆ ಪತ್ರ ಕಳುಹಿಸಿದ್ದಾರೆ. ಈ ಪತ್ರದಲ್ಲಿ, ಅಮೆರಿಕಾ ಯುರೋಪಿಯನ್ ಯೂನಿಯನ್ ಅಥವಾ ವಿಶ್ವಸಂಸ್ಥೆ ಇವರು ಯಾವ ಸಂಸ್ಥೆ, ಬ್ಯಾಂಕ್, ಬಂದರುಗಳು ಅಥವಾ ನೌಕೆಗಳ ಮೇಲೆ ನಿರ್ಬಂಧ ಹೇರಿದೆ, ಅದರೊಂದಿಗೆ ಯಾವುದೇ ರೀತಿಯ ವ್ಯವಹಾರ ಅಥವಾ ಹಸ್ತಾಂತರ ಮಾಡಲಾಗುವುದಿಲ್ಲ ಎಂದು ಹೇಳಿದೆ.
೨. ಎಸ್.ಬಿ .ಐ ನ ಹಿರಿಯ ಅಧಿಕಾರಿಗಳು, ನಾವು ಒಂದು ಮಹತ್ವದ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದ್ದೇವೆ. ಆದ್ದರಿಂದ ಅವರ ನ್ಯಾಯಾಧಿಕಾರ ಕ್ಷೇತ್ರದಲ್ಲಿ ಬರುವ ಎಲ್ಲಾ ನಿಯಮಗಳ ಪಾಲನೆ ಮಾಡುವುದು ನಮಗೆ ಅವಶ್ಯಕವಾಗಿದೆ. ಇಲ್ಲವಾದರೆ ನಾವು ಈ ನಿಯಮಗಳು ಪಾಲಿಸಲಿಲ್ಲವೆಂದು ಅದೇ ರೀತಿ ನೋಡಲಾಗುತ್ತದೆ ಎಂದು ಹೇಳಿದರು.