|
| ಭಾರತೀಯ ಜ್ಯೋತಿಷ್ಯಶಾಸ್ತ್ರ ಎಷ್ಟು ಮುಂದುವರೆದಿದೆ, ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಇದರ ಆಧಾರದ ಮೇಲೆ, ಭಾರತೀಯ ಆಡಳಿತಗಾರರು ರಾಜ್ಯವನ್ನು ನಡೆಸಿದರೆ, ಭಾರತವು ಅನೇಕ ಸಮಸ್ಯೆಗಳನ್ನು ಎದುರಿಸಲು ಮೊದಲೇ ಸಿದ್ಧವಾಗಬಹುದು ! |

ಹೊಸ ದೆಹಲಿ – ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾದ ಯುದ್ದದ ಭವಿಷ್ಯವಾಣಿಯನ್ನು ಭಾರತೀಯ ಪಂಚಾಂಗದ ಮೂಲಕ ಒಂದು ವರ್ಷದ ಹಿಂದೆಯೇ ಮಾಡಲಾಗಿತ್ತು. ಈ ಯುದ್ಧದ ಹಿಂದೆ ಅಂಗಾರಕ ಯೋಗವಿದೆ ಎಂದು ಜ್ಯೋತಿಷಿ ಪಂಡಿತ್ ಮುಖೇಶ್ ಮಿಶ್ರಾ ಹೇಳಿದ್ದಾರೆ. ಈ ಸಮಯದಲ್ಲಿ ವಿಕ್ರಮ್ ಸಂವತ್ ೨೦೭೮ ರ ಅಡಿಯಲ್ಲಿ ‘ಆನಂದ್’ ಎಂಬ ಸಂವತ್ಸರ ನಡೆಯುತ್ತಿದೆ. ಈ ಸಂವತ್ಸರದ ಆರಂಭ ಮಂಗಳವಾರವಾಗಿತ್ತು. ಈ ಸಂವತ್ಸರದ ರಾಜಾ ಮತ್ತು ಮಂತ್ರಿ ಮಂಗಳ ಗ್ರಹವಿದೆ. ಮಂಗಳನಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಯುದ್ಧಕಾರಕ ಗ್ರಹ’ ವೆಂದು ಪರಿಗಣಿಸಲಾಗಿದೆ. ಸಧ್ಯಕ್ಕೆ ಶನಿಗ್ರಹವು ಮಕರ ರಾಶಿಯಲ್ಲಿದ್ದಾನೆ. ೨೬ ಫೆಬ್ರುವರಿ ೨೬ ರಂದು ಮಂಗಳ ಗ್ರಹವೂ ಇದರೊಳಗೆ ಪ್ರವೇಶಿಸಿದೆ. ಇಬ್ಬರೂ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ‘ಅಂಗಾರಕ ಯೋಗ’ ಸೃಷ್ಟಿಯಾಗಿದೆ. ಈ ಯೋಗವು ಏಪ್ರಿಲ್ ೭ರ ವರೆಗೆ ಇರುತ್ತದೆ. ಈ ಯೋಗದಿಂದಾಗಿ ಯುದ್ಧ, ಭೂಕಂಪಗಳು ಅಥವಾ ಗಡಿ ಉದ್ವಿಘ್ನತೆಗಳು ಸೃಷ್ಟಿಯಾಗುತ್ತವೆ ಅಥವಾ ಉಲ್ಬಣಗೊಳ್ಳುತ್ತವೆ. ಅರಾಜಕತೆ, ಹಿಂಸಾಚಾರ, ರಕ್ತಪಾತ ಅಥವಾ ನೈಸರ್ಗಿಕ ವಿಕೋಪಗಳಲ್ಲಿ ವೃದ್ಧಿಯಾಗುತ್ತವೆ. ಪಂಚಾಂಗದಲ್ಲಿ ಈ ‘ಅಂಗಾರಕ ಯೋಗ’ದಿಂದ ಯುರೋಪಿನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿದೆ.
ಜ್ಯೋತಿಷಾಚಾರ್ಯ ಮೀಶ್ರಾವರು ತಮ್ಮ ಮಾತನ್ನು ಮುಂದುವರೆಸುತ್ತಾ, ಗ್ರಹಗಳು ಯಾವಾಗ ತಮ್ಮ ಸ್ಥಾನವನ್ನು ಬದಲಿಸುತ್ತವೆಯೋ ಆಗ ಅವುಗಳ ಪ್ರಭಾವವು ೨-೩ ದಿನಗಳ ಮೊದಲೇ ಕಾಣಿಸಿಕೊಳ್ಳಲು ಪ್ರಾರಂಬಿಸುತ್ತದೆ. ಆದ್ದರಿಂದ ಫೆಬ್ರುವರಿ ೨೬ ರಂದು ಮಂಗಳ ಮಕರ ರಾಶಿಯನ್ನು ಪ್ರವೇಶಿಸುವ ಮೊದಲು ಅಂದರೆ ಫೆಬ್ರುವರಿ ೨೩ರ ರಾತ್ರಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಯಿತು.
रूस-यूक्रेन जंग: वैदिक पंचांग में एक वर्ष पहले ही कर दी गई थी युद्ध की भविष्यवाणी, मकर राशि में शनि का प्रवेश कराता रहा है उथल-पुथल #Ukraine #Russia #RussiaUkraineWar #UkraineCrisis https://t.co/BBvEI1qQ41
— Amar Ujala (@AmarUjalaNews) February 27, 2022
ಭಾರತವು ‘ವಿಶ್ವಶಕ್ತಿ’ಯಾಗಿ ಹೊರಹೊಮ್ಮಲಿದೆ !
ಜ್ಯೋತಿಷಾಚಾರ್ಯ ಪಂಡಿತ್ ಮುಖೇಶ್ ಮಿಶ್ರಾವರು ಮಾತನಾಡುತ್ತಾ, ಪಂಚಾಂಗಾನುಸಾರ ಗ್ರಹಗಳ ಸ್ಥಿತಿಯಿಂದ ಬರುವ ಕಾಲವು ಉದ್ವಿಘ್ನವಾಗಿದ್ದರೂ ಭಾರತದ ಸ್ಥಿತಿ ಬಲಶಾಲಿಯಾಗಿರುತ್ತದೆ. ಗ್ರಹಗಳ ಪಾಲನೆ ಭಾರತದ ಪರವಾಗಿ ಇವೆ. ಆದ್ದರಿಂದ ಭಾರತವು ಒಂದು ‘ವಿಶ್ವ ಶಕ್ತಿ’ಯಾಗಿ ಹೊರಹೊಮ್ಮುತ್ತಿರುವದು ಕಂಡು ಬರಲಿದೆ. ಮಕರ ರಾಶಿಯಲ್ಲಿಯ ಶನಿಯು ಯಾವಾಗಲೂ ಕಷ್ಟದಾಯಕನಾಗಿರುತ್ತಾನೆ. ಭಾರತದ ಸಂದರ್ಭದಲ್ಲಿ ಇದು ತೊಂದರೆದಾಯಕವಾಗಿದೆ. ವಿಶ್ವ ಮಟ್ಟದಲ್ಲಿ ಇದರಿಂದ ಯುದ್ಧ, ಅರಾಜಕತೆ, ಹಣದುಬ್ಬರಕ್ಕೆ ಕಾರಣವಾಗಲಿದೆ. ಇಂತಹ ಪರಿಸ್ಥಿತಿ ೧೯೬೨ ರಲ್ಲಿ ಮತ್ತು ೧೯೯೨-೯೩ರಲ್ಲಿ ನಿರ್ಮಾಣವಾಗಿತ್ತು. ೨೦೨೦ ರಲ್ಲಿ ಶನಿ ಗ್ರಹ ಮಕರ ರಾಶಿಯಲ್ಲಿ ಪ್ರವೇಶ ಮಾಡುವಾಗ ಭಾರತ ಮತ್ತು ಚೀನಾದ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ಹೇಳಿದರು.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump