ಯೋಧರಿಗಾಗಿ ಇನ್ನು ‘ಶಹೀದ್’ ಅಥವಾ ‘ಹುತಾತ್ಮ’ ಶಬ್ದಗಳ ಬಳಸುವಂತಿಲ್ಲ !

ಭಾರತೀಯ ಸೇನೆಯಿಂದ ಸೂಚನೆ

ನವ ದೆಹಲಿ – ಯುದ್ದದಲ್ಲಿ ಮಡಿದ ಸೈನಿಕರಿಗೆ ‘ಶಹೀದ್’ ಅಥವಾ ‘ಹುತಾತ್ಮ’ ಎಂಬ ಪದಗಳನ್ನು ಬಳಸುವುದು ತಪ್ಪಾಗಿದೆ. ಸೇನೆಯ ಕೆಲವು ಅಧಿಕಾರಿಗಳಿಂದ ಹಾಗೂ ಪ್ರಸಾರ ಮಾಧ್ಯಮಗಳಿಂದ ದೇಶಕ್ಕಾಗಿ ಬಲಿದಾನ ನೀಡಿರುವ ಸೈನಿಕರಿಗಾಗಿ ‘ಶಹೀದ್’ ಶಬ್ದದ ಬಳಕೆ ಮಾಡಲಾಗುತ್ತದೆ. ಯಾರು ದೇಶಕ್ಕಾಗಿ ಬಲಿದಾನ ನೀಡಿದರೋ, ಯಾವ ವ್ಯಕ್ತಿಯು ಧಾರ್ಮಿಕ ಅಥವಾ ರಾಜಕಿಯ ವಿಶ್ವಾಸ, ವಿಚಾರಗಳಿಗಾಗಿ ಪ್ರಾಣ ತ್ಯಾಗ ಮಾಡಿರುವನೋ ಅಂತಹ ವ್ಯಕ್ತಿಗಾಗಿ ‘ಹುತಾತ್ಮ್’ ಅಥವಾ ‘ಶಹೀದ್’ ಶಬ್ದದ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಭಾರತೀಯ ಯೋಧರಿಗೆ ‘ಶಹೀದ್’ ಎಂಬ ಶಬ್ದದ ಬಳಕೆ ತಪ್ಪಾಗಿದೆ, ಎಂದು ಭಾರತೀಯ ಸೇನೆಯು ಹೇಳಿದೆ. ಭಾರತೀಯ ಸೇನೆಯ ಪ್ರಧಾನ ಕಛೇರಿಯಿಂದ ತನ್ನ ಎಲ್ಲಾ ಕಮಾಂಡ್‌ಗಳಿಗೆ ಪತ್ರ ಬರೆದು ಈ ವಿಷಯದ ಸೂಚನೆ ನೀಡಲಾಗಿದೆ.

ಭಾರತೀಯ ಸೇನೆಯ ಪ್ರಧಾನ ಕಛೇರಿಯಿಂದ ವೀರ ಸೈನಿಕರಿಗೆ ಈ ಕೆಳಗಿನ ಪದಗಳನ್ನು ಬಳಸಲು ಸೂಚನೆ ನೀಡಿದೆ.

೧. ಕಿಲ್ಡ ಇನ್ ಆಕ್ಷನ್ (ಕಾರ್ಯಾಚರಣೆಯಲ್ಲಿ ಹತರಾದರು)
೨. ಲೆಡ ಡೌನ್ ದೇರ್ ಲೈಫ್ (ಪ್ರಾಣದ ಬಲಿದಾನ ಮಾಡಿದರು)
೩. ಸುಪ್ರಿಮ್ ಸೆಕ್ರಿಫೈಸ್ ಫಾರ್ ನೇಶನ್ (ರಾಷ್ಟ್ರಕ್ಕಾಗಿ ನೀಡಿದ ಅತ್ಯುನ್ನತ ತ್ಯಾಗ)
೪. ಫಾಲನ ಹಿರೋಸ್ (ವೀರಗತಿ ಪ್ರಾಪ್ತಿ)
೫. ಇಂಡಿಯನ್ ಆರ್ಮಿ ಬ್ರೆವ್ಸ್ (ಭಾರತೀಯ ಸೇನೆಯ ವೀರರು)
೬. ಫಾಲಾನ್ ಸೋಲ್ಜರ‍್ಸ್ (ಯುದ್ಧದಲ್ಲಿ ಬಳಸಲಾಯಿತು)